Horoscope Today: ದಿನ ಭವಿಷ್ಯ ಮಾರ್ಚ್ 25- ಇಂದು ಈ ರಾಶಿಗೆ ಆಂಜನೇಯನ ಬಲದಿಂದ ಸಾಕಷ್ಟು ಹಣ

ಮಾರ್ಚ್ 25 ಮಂಗಳವಾರ ರಾಹುಕಾಲ ಮಧ್ಯಾಹ್ನ 3:27 ರಿಂದ 4:58ರವರೆಗೆ ಇರುತ್ತದೆ. ಮಂಗಳವಾರ ಹನುಮಂತನನ್ನು ಪೂಜಿಸುವ ಶುಭ ದಿನ. ಹಿಂದೂ ಪುರಾಣಗಳಲ್ಲಿ ಹನುಮಂತನನ್ನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ. ಜೀವನದ ಅಡೆತಡೆಗಳನ್ನು ಮತ್ತು ಭಯವನ್ನು ದೂರಾಗಿಸಿಕೊಳ್ಳಲು ಮಂಗಳವಾರ ಹನುಮನನ್ನು ಪೂಜಿಸಬೇಕು. ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರ ಮೇಲೆ ಮಾರುತಿಯ ಆಶೀರ್ವಾದವಿದೆ ಎಂದು ಈಗ ತಿಳಿಯೋಣ.

1. ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಶುಭವಾಗಿದೆ. ಕೆಲಸದ ಸ್ಥಳದಲ್ಲಿ ಬಾಸ್‌ನಿಂದ ಪ್ರಶಂಸೆ ಪಡೆಯುವುದಕ್ಕೆ ಅವಕಾಶ ಇದೆ. ಇದರಿಂದ ಮುಂದಿನ ಕಾರ್ಯಗಳಿಗೆ ದಾರಿ ಸುಲಭವಾಗಲಿದೆ. ನಿಮ್ಮ ಕಾಯಕದಲ್ಲಿ ನಿಷ್ಠೆಯನ್ನು ತೋರುವಿರಿ. ಆಂಜನೇಯನ ಆಶೀರ್ವಾದ ನಿಮ್ಮ ಮೇಲೆ ಇರುವುದು.

astrology dina bhavishya march 25 12 zodiac signs today prediction

2. ವೃಷಭ ರಾಶಿ

ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಅತಿ ಸೂಕ್ಷ್ಮವಾದ ನಿಮಗೆ ಕೆಲವು ವಿಚಾರಗಳನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಅಂತೆಯೆ ಒಂದು ಪ್ರಸಂಗ ನಿಮಗೆ ತುಂಬಾ ನೋವು ತರಲಿದೆ. ನಿಮ್ಮ ಚಿತ್ತ ಕದಡುವುದು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಂಜನೇಯನ ಮಂತ್ರವನ್ನು ಭಜಿಸಿ.

3. ಮಿಥುನ ರಾಶಿ

ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ. ಸ್ನೇಹ ಸಂಬಂಧಗಳು ಗಾಢವಾಗುತ್ತವೆ. ಬೆಳಿಗ್ಗೆ ಮಾರುತಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ಯಾವುದೇ ಸಮಸ್ಯೆಗಳಿಗೆ ತಲೆ ಹಾಕಬೇಡಿ. ಹಸಿದವರಿಗೆ ಆಹಾರ ನೀಡಿ.

4. ಕರ್ಕಾಟಕ ರಾಶಿ

ಈ ದಿನ ಕಟಕ ರಾಶಿಯವರಿಗೆ ತುಂಬಾ ಒಳ್ಳೆಯದು. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸಮಾಜದಲ್ಲಿ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆಹ್ಲಾದಕರ ಪ್ರಯಾಣಕ್ಕೆ ಅವಕಾಶಗಳು ದೊರೆಯುತ್ತವೆ. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಬಡವರಿಗೆ ಆಹಾರ ದಾನ ಮಾಡಿ.

5. ಸಿಂಹ ರಾಶಿ

ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಮಾತನ್ನು ನಿಯಂತ್ರಿಸಿ. ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಯಾವುದೇ ನಿರ್ಧಾರವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ. ಯಾರು ಏನೇ ಅನ್ನಲಿ, ಬಿಡಲಿ ನಿಮ್ಮ ಕಾರ್ಯವನ್ನು ನೀವು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಇದು ನಿಮ್ಮನ್ನು ಇಚ್ಛಿತ ಗುರಿಕಡೆಗೆ ಕರೆದುಕೊಂಡು ಹೋಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ನಿಮಗೆ ಸಂತಸ ತರಲಿದೆ.

6. ಕನ್ಯಾರಾಶಿ

ಈ ದಿನ ಮಾನಸಿಕ ತೊಂದರೆಗೆ ಕಾರಣವಾಗುತ್ತದೆ. ಮಕ್ಕಳು ಅಥವಾ ಶಿಕ್ಷಣದ ಬಗ್ಗೆ ಒತ್ತಡ ಇರುತ್ತದೆ. ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ. ದಾಂಪತ್ಯ ಜೀವನದಲ್ಲಿ ಒತ್ತಡ ಉಂಟಾಗಬಹುದು. ಆದಷ್ಟು ತಾಳ್ಮೆಯಿಂದ ಇರಿ. ಈ ದಿನ ಹಸಿದವರಿಗೆ ಆಹಾರ ನೀಡಿ.

7. ತುಲಾ ರಾಶಿ

ಈ ದಿನ ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ. ನೀವು ಯಾವುದೋ ತೊಂದರೆಯಿಂದ ಬಳಲಬಹುದು. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಿ. ಕೆಲಸದಲ್ಲಿ ನಿಮ್ಮ ಪೋಷಕರಿಂದ ನಿಮಗೆ ಬೆಂಬಲ ಸಿಗುತ್ತದೆ.

8. ವೃಶ್ಚಿಕ ರಾಶಿ

ಹಳೆಯ ವ್ಯಾಜ್ಯಗಳು ನಿಮ್ಮನ್ನು ಬಳಲಿಸುತ್ತವೆ. ಮನೆಯಲ್ಲಿ ಇರುವ ಯಾವುದೇ ಹಳೆಯ ವಸ್ತುಗಳನ್ನು ಮನೆಯಿಂದ ಹೊರಹಾಕಿ. ಶಾಂತಿಯಿಂದ ಇರಿ. ಮಾತು ಮಾತಿಗೂ ಆಣೆ ಪ್ರಮಾಣಗಳನ್ನು ಮಾಡಬೇಡಿ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವಂತೆ ಮೌನವಾಗಿರಿ.

9. ಧನು ರಾಶಿ

ಧನು ರಾಶಿಯವರಿಗೆ ಮಂಗಳವಾರ ಮಂಗಳಕರವಾಗಿದೆ. ಶತ್ರುಗಳು ನಿಮ್ಮ ಮೇಲೆ ಪರಿಣಾಮ ಬೀರಿರಬಹುದು. ಆದರೆ ಅದು ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇತ್ತೀಚೆಗೆ ಪರಿಚಯವಾದ ಗಣ್ಯರ ಮಾತು ನಿಮ್ಮ ನಿಜ ಜೀವನಕ್ಕೆ ಹತ್ತಿರವಾಗಿರುತ್ತದೆ. ಹಿರಿಯರ ಬಗ್ಗೆ ಗೌರವದ ಭಾವನೆ ಇರಲಿದೆ.

10. ಮಕರ ರಾಶಿ

ಈ ದಿನ ನಿಮ್ಮ ಮನಸ್ಸು ದುಃಖದಿಂದ ಕೂಡಿರುತ್ತದೆ. ದಿಢೀರನೆ ನಿರ್ಧಾರ ತಳೆಯುವುದು ಒಳ್ಳೆಯದಲ್ಲ. ಯಾವುದಕ್ಕೂ ಹಿಂದುಮುಂದು ಯೋಚಿಸಿ ಕಾರ್ಯಪ್ರವೃತ್ತರಾಗಿ. ಶನಿ ಮಹಾತ್ಮರ ಸನ್ನಿಧಾನದಲ್ಲಿ ಎಳ್ಳೆಣ್ಣೆ ದಾನ ಮಾಡಿ. ಬಡವರಿಗೆ ಆಹಾರ ನೀಡಿ. ನಿಮ್ಮ ಕಷ್ಟ ಪರಿಹಾರಕ್ಕಾಗಿ ಪ್ರಾರ್ಥನೆ ಮಾಡಿ.

11. ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ದಿನ ಉತ್ತಮವಾಗಿರುತ್ತದೆ. ನಿಮ್ಮ ಹತ್ತಿರದ ಜನರು ವಿನಾಕಾರಣ ಜಗಳಗಳಿಗೆ ಮುಂದಾಗುವ ಸಂಭವವಿರುತ್ತದೆ. ಬೇಸರ ಪಡಬೇಡಿ. ಜೀವನದ ಪ್ರತಿ ಘಟನೆಯೂ ನಿಮಗೆ ಒಂದು ಉತ್ತಮ ಪಾಠವನ್ನು ಕಲಿಸುವುದು. ಹಣಕಾಸಿನ ಸ್ಥಿತಿ ಸಾಧಾರಣೆಯಾಗುತ್ತದೆ.

12. ಮೀನ ರಾಶಿ

ಮೀನ ರಾಶಿಯವರಿಗೆ ಈ ದಿನ ದೂರದೂರಿನ ಬಂಧುಗಳಿಂದ ಕಿರಿಕಿರಿಯ ಮಾತುಗಳು ಎದುರಾಗುವ ಸಂಭವ ಇರಬಹುದು. ನೀವು ಮಾಡದೇ ಇರುವ ತಪ್ಪಿಗೆ ತಲೆ ಕೊಡುವ ಸಂದರ್ಭ ಬರುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ನೀಡದೆ ದೇವರ ಪ್ರಾರ್ಥನೆ ಮಾಡಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+