Budha Vakri 2026 : ಮೂರು ರಾಶಿಯವರ ಸುವರ್ಣ ಸಮಯ : ಕೈಯ್ಯಲ್ಲಿ ನಿಲ್ಲುವುದು ಹಣ, ಎಲ್ಲದರಲ್ಲೂ ಸಕ್ಸಸ್
Budha Vakri 2026 : ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವನ್ನು ವ್ಯವಹಾರ, ಬುದ್ಧಿವಂತಿಕೆ, ಮಾತು, ತರ್ಕ, ಲೆಕ್ಕಾಚಾರ, ಉದ್ಯೋಗಕ್ಕೆ ಸಂಬಂಧಿಸಿದ ಗ್ರಹ ಎಂದು ಕರೀತಾರೆ. ಬುಧನ ಚಲನೆಯಲ್ಲಿನ ಬದಲಾವಣೆ ಎಲ್ಲಾ ದ್ವಾದಶ ರಾಶಿಯವರ ಮೇಲೆ ಆಗುವುದು. ವೃತ್ತಿ, ವ್ಯವಹಾರ ಮತ್ತು ಆರ್ಥಿಕ ಸ್ಥಿತಿಗಳ ಮೇಲೆಯೇ ಬುಧ ಸಂಚಾರದ ಪ್ರಭಾವ ಕಾಣಿಸುವುದು. ಇದೀಗ ಬುಧ ಮತ್ತೊಮ್ಮೆ ತನ್ನ ಸಂಚಾರ ಬದಲಿಸ್ತಾ ಇದ್ದಾನೆ.
ಬುಧ ಸಂಚಾರದ ಸಮಯ :
ಪಂಚಾಂಗದ ಪ್ರಕಾರ, ಬುಧ ಅಕ್ಟೋಬರ್ 24ರ ಮಧ್ಯಾಹ್ನ ಮಧ್ಯಾಹ್ನ 12.42ಕ್ಕೆ ಹಿಮ್ಮುಖ ಚಲನೆ ಶುರು ಮಾಡ್ತಾನೆ. ಶುಕ್ರನ ಅಧಿಪತ್ಯದ ತುಲಾ ರಾಶಿಯಲ್ಲಿ ಬುಧ ವಕ್ರಗತಿಯಲ್ಲಿ ಅಥವಾ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದು ಕೆಲವು ರಾಶಿಯವರ ಜಾತಕದಲ್ಲಿ ಬಹಳ ನಿರ್ಣಾಯಕವಾಗಿರಲಿದೆ. ಬುಧ ಮುಂದಿನ ನವೆಂಬರ್ ಹದಿಮೂರರವರೆಗೆ ಇದೇ ಸ್ಥಿತಿಯಲ್ಲಿ ಸಂಚಾರ ಮಾಡ್ತಾ ಇರುತ್ತಾನೆ.

Budha Vakri ಪರಿಣಾಮ (Budha Vakri 2026) :
ಬುಧನ ಹಿಮ್ಮುಖ ಚಲನೆಯ ಪರಿಣಾಮ ನಿಂತು ಹೋಗಿರುವ ಕೆಲಸ ಮತ್ತೆ ಶುರು ಮಾಡುವಂತೆ ಮಾಡುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರವನ್ನು ಮರುಪರಿಶೀಲಿಸಲು ಅವಕಾಶ ಸಿಗುತ್ತದೆ. ಈ ಸಮಯ ಮೂರು ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶ ನೀಡುವುದು. ಬುಧ ಗ್ರಹದ ಹಿಮ್ಮುಖ ಚಲನೆಯು 3 ರಾಶಿಯವರಿಗೆ (zodiac signs) ಅದೃಷ್ಟ ಹೊತ್ತು ತರುವುದು. ಇವರ ಪಾಲಿನ ಸುವರ್ಣ ಯುಗ ಆರಂಭವಾಗುವುದು.
ಮೇಷ ರಾಶಿ (Aries) :
ಬುಧನ ಹಿಮ್ಮುಖ ಸಂಚಾರ ಮೇಷ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿರುವುದು. ಕೆಲಸದಲ್ಲಿ ಬಡ್ತಿ ಸಿಗುವುದು. ಹಿಂದೆ ತೆಗೆದುಕೊಂಡ ನಿರ್ಧಾರ, ವಹಿಸಿಕೊಂಡ ಜವಾಬ್ದಾರಿ ಈಗ ಲಾಭ ತರುವುದು. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುವುದು. ವ್ಯವಹಾರದಲ್ಲಿ ಹೊಸ ಅವಕಾಶ ಸಿಗುವುದು. ಅನಿರೀಕ್ಷಿತ ಮೂಲದಿಂದ ಹಣ ಗಳಿಸುವಿರಿ. ವಾಹನ ಖರೀದಿ ಯೋಗವಿದೆ. ಹೊಸ ಜವಾಬ್ದಾರಿ ಹೆಗಲೇರಬಹುದು. ಹಣದ ವಹಿವಾಟು ನಡೆಸುವಾಗ ಮೈಯ್ಯೆಲ್ಲಾ ಕಣ್ಣಾಗಿದ್ದರೆ ಒಳ್ಳೆಯದು.
ಕರ್ಕಾಟಕ ರಾಶಿ (Cancer) :
ಕರ್ಕಾಟಕ ರಾಶಿಯವರಿಗೆ ಬುಧ ಸಂಚಾರ ಹಣದ ವಿಷಯದಲ್ಲಿ ಹೊಸ ಅವಕಾಶವನ್ನು ತರಬಹುದು. ನಿಂತು ಹೋಗಿರುವ ಕೆಲಸ ವೇಗ ಪಡೆಯುವುದು. ವ್ಯಾಪಾರ (business news) ಹೆಚ್ಚಾಗಿ ಲಾಭವಾಗುವುದು. ವ್ಯವಹಾರ ವಿಸ್ತರಣೆಗೆ ಅವಕಾಶ ಸಿಗುವುದು. ಹಿಂದಿನ ಹೂಡಿಕೆ ಅಥವಾ ವ್ಯಾಪಾರ ಸಂಪರ್ಕದಿಂದ ಹೆಚ್ಚಿನ ಪ್ರಯೋಜನವಾಗುವುದು. ಕಚೇರಿಯಲ್ಲಿ ನಿಮ್ಮ ಸ್ಥಾನಮಾನ ಮತ್ತು ಜವಾಬ್ದಾರಿ ಹೆಚ್ಚಾಗಬಹುದು. ಉದ್ಯೋಗ ಬದಲಾವಣೆಗೆ ಅವಕಾಶವಿದೆ. ಹೊಸ ವ್ಯವಹಾರ ಕೂಡಾ ಪ್ರಾರಂಭಿಸಬಹುದು. ಹಿಂದಿನ ಅನುಭವಗಳು ಈಗ ಪ್ರಯೋಜನಕಾರಿಯಾಗಿರುವುದು. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಸಿಗುವುದು. ಭೂಮಿ ಖರೀದಿ ಮೇಲೆ ಹೂಡಿಕೆ ಮಾಡಬಹುದು.
ಕುಂಭ ರಾಶಿ (Aquarius) :
ಬುಧನ ಹಿಮ್ಮುಖ ಚಲನೆ ವೃತ್ತಿಪರ ಬದಲಾವಣೆ ಮತ್ತು ಪ್ರಗತಿಗೆ ಅವಕಾಶ ಒದಗಿಸಬಹುದು. ಕಚೇರಿಯಲ್ಲಿ (office) ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಬಡ್ತಿ ಮೂಲಕ ಸಂಬಳ ಹೆಚ್ಚಾಗುವುದು. ನಿಮ್ಮ ಮೇಲಾಧಿಕಾರಿಗಳಿಂದ ಬೆಂಬಲ ಸಿಗಬಹುದು. ಉದ್ಯಮಿಗಳಿಗೆ ಹೊಸ ಗ್ರಾಹಕರನ್ನು ಪಡೆಯುವ ಅವಕಾಶ ಇರುವುದು. ಹಣದ ಲಾಭ ಹೆಚ್ಚಾಗುವುದು. ಆದರೂ ಕೆಲವೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ತೀರ್ಮಾನಕ್ಕೆ ಬರುವುದು ಒಳ್ಳೆಯದು. ನಿಮ್ಮ ಬುದ್ಧಿವಂತಿಕೆ ಮತ್ತು ಅನುಭವವನ್ನು ಬಳಸಿಕೊಂಡರೆ ವೃತ್ತಿಜೀವನದಲ್ಲಿ ಎತ್ತರಕ್ಕೆ ಏರುವ ಅವಕಾಶ ಇದೆ. ತಾಳ್ಮೆ ಮತ್ತು ವಿವೇಕದಿಂದ ತೆಗೆದುಕೊಳ್ಳುವ ನಿರ್ಧಾರ ಲಾಭ ತರುವುದು. ವಿದ್ಯಾರ್ಥಿಗಳಿಗೂ ಇದು ಅನುಕೂಲಕರ ಸಮಯ ಆಗಿರಲಿದೆ.
ವಿಶೇಷ ಸೂಚನೆ: ಇದು ಕೇವಲ ಜ್ಯೋತಿಷ್ಯವನ್ನಾಧರಿಸಿದ ಭವಿಷ್ಯವೇ ಹೊರತು, ಎಲ್ಲರಿಗೂ ಇದು ಸತ್ಯವಾಗುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಆಗುವುದಿಲ್ಲ. ಪ್ರತಿಯೊಬ್ಬ ಗ್ರಹಗತಿಗಳಿಗೆ ಅನುಗುಣವಾಗಿ ಜೀವನದಲ್ಲಿ ಏರುಪೇರಾಗುತ್ತದೆ ಎಂಬುದನ್ನು ಜ್ಯೋತಿಷ್ಯ ಹೇಳುತ್ತದೆ. ಆದರದು ಸತ್ಯವಾಗಬೇಕೆಂದೇನೂ ಇಲ್ಲ.


Click it and Unblock the Notifications
