Baba Vanga Predictions: ನಿಜವಾಗಿದೆ ನೇಪಾಳದ ಬಗ್ಗೆ ನುಡಿದ ಭವಿಷ್ಯವಾಣಿ; 2026ರ ಈ ವಿಪತ್ತುಗಳೂ ಸತ್ಯವೇ?

Baba Vanga 2026 Predictions: ಪ್ರಪಂಚದ ಯಾವ ಮೂಲೆಯಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿದಾಗಲೂ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಮುನ್ನಲೆಗೆ ಬಂದು ಬಿಡುತ್ತವೆ. ನೇಪಾಳದಲ್ಲಿ ಇತ್ತೀಚೆಗೆ ಪ್ರವಾಹ ಮತ್ತು ಭೂಕುಸಿತಗಳಿಂದ ಉಂಟಾದ ಅಪಾರ ಹಾನಿಯ ನಂತರ 2026 ವರ್ಷದ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡುತ್ತಿದೆ.

ನೂರಾರು ವರ್ಷಗಳ ಹಿಂದೆಯೇ ಅವರು ಪ್ರಸ್ತುತ ಬೆಳವಣಿಗೆಗಳು ಮತ್ತು ಭವಿಷ್ಯದಲ್ಲಿ ಸಂಭವಿಸುವ ಭಯಾನಕ ಸನ್ನಿವೇಶಗಳನ್ನು ಊಹಿಸಿದ್ದರು ಎನ್ನಲಾಗಿದೆ. ಅವರಿಗೆ ಭವಿಷ್ಯದಲ್ಲಿ ನಡೆಯಹುದಾದ ಘಟನೆಯನ್ನು ಊಹಿಸುವುದು ಹೇಗೆ ಸಾಧ್ಯವಾಯಿತು ಎನ್ನುವಕ್ಕೆ ಉತ್ತರವಿಲ್ಲ. ಆದರೂ ಬಲ್ಗೇರಿಯಾದ ಬಾಬಾ ವಂಗಾ ಹೇಳಿದ ಭವಿಷ್ಯವಾಣಿಯಂತೆ (Baba Vanga 2026 Predictions) ಕೆಲವು ಬೆಳವಣಿಗೆಗಳು ಮತ್ತು ವಿಪತ್ತುಗಳು ಸಂಭವಿಸಿವೆ, ಸಂಭವಿಸುತ್ತಿವೆ.

Baba Vanga Prediction about Nepal Became True What If Third World War Alien Attack Also Turns True

ನಿಜವಾಗುವುದೇ ಬಾಬಾ ವಂಗಾ ಭವಿಷ್ಯವಾಣಿ

ಬಾಬಾ ವಂಗಾ ಬರೆದಿರುವ ಭವಿಷ್ಯವಾಣಿಗಳಲ್ಲಿ ನೈಸರ್ಗಿಕ ವಿಕೋಪಗಳಿಂದ ಹಿಡಿದು ಮೂರನೇ ಮಹಾಯುದ್ಧ, ಅನ್ಯಲೋಕದ ಜೀವಿಗಳಿಂದ ಅಂದರೆ ಎಲಿಯನ್‌ಗಳಿಂದ ಆಗಬಹುದಾದ ಆಕ್ರಮಣಗಳು, ಕೃತಕ ಬುದ್ಧಿಮತ್ತೆಯ ಏರಿಕೆ, ಆರ್ಥಿಕ ಬಿಕ್ಕಟ್ಟು ಮತ್ತು ರಷ್ಯಾದಲ್ಲಿನ ಪ್ರಮುಖ ರಾಜಕೀಯ ಬದಲಾವಣೆಗಳವರೆಗೆ ಇವೆ. ಇದೀಗ ಸಂಭವಿಸಿರುವ ಕೆಲವೊಂದು ಘಟನೆಗಳ ಬಳಿಕ 2026ರ ಬಗ್ಗೆ ನುಡಿದಿರುವ ಈ ಎಲ್ಲಾ ಭವಿಷ್ಯವಾಣಿಗಳು ನಿಜವಾಗುವುದೇ ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.

ನೇಪಾಳ ದುರಂತದ ನಂತರ ಭಾರಿ ಚರ್ಚೆ

ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತದ ನಂತರ, ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿವೆ. 2026ರಲ್ಲಿ ಪ್ರಪಂಚದ ವಿವಿಧ ಭಾಗಗಳು ತೀವ್ರ ನೈಸರ್ಗಿಕ ವಿಕೋಪಕ್ಕೆ ಗುರಿಯಾಗಬಹುದು ಎನ್ನುವ ಅವರ ಹೇಳಿಕೆಗಳು ಇದೀಗ ಮತ್ತೆ ಬೆಳಕಿಗೆ ಬರುತ್ತಿವೆ.

ಮೂರನೇ ಮಹಾ ಯುದ್ದದ ಬಗ್ಗೆ ಉಲ್ಲೇಖ

ಬಾಬಾ ವಂಗಾ ಅವರ ಅತ್ಯಂತ ಭಯಾನಕ ಹೇಳಿಕೆಗಳಲ್ಲಿ ಮೂರನೇ ಮಹಾಯುದ್ಧದ ಸಾಧ್ಯತೆಯೂ ಸೇರಿದೆ. ಪ್ರಮುಖ ವಿಶ್ವ ಶಕ್ತಿಗಳ ನಡುವಿನ ಘರ್ಷಣೆಯು 2026ರಲ್ಲಿ ದೊಡ್ಡ ಯುದ್ಧದ ಹಂತಕ್ಕೆ ಏರಬಹುದು ಎನ್ನುವ ಭವಿಷ್ಯವನ್ನು ಬಾಬಾ ವಂಗಾ ನುಡಿದಿದ್ದರು ಎನ್ನಲಾಗಿದೆ. ರಷ್ಯಾ ಮತ್ತು ಪಾಶ್ಚಿಮಾತ್ಯ ಶಕ್ತಿಗಳ ನಡುವಿನ ಉದ್ವಿಗ್ನತೆ, ಚೀನಾ ಮತ್ತು ತೈವಾನ್‌ನ ವಿವಾದ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಈ ಭವಿಷ್ಯವಾಣಿಗಳಿಗೆ ಸಂಬಂಧಿಸಿವೆ.

ಏಲಿಯನ್‌ಗಳ ಆಗಮನದ ಬಗ್ಗೆಯೂ ಮುನ್ಸೂಚನೆ

2026ರ ಬಗ್ಗೆ ಬಾಬಾ ವಂಗಾ ಹೆಸರಿನಲ್ಲಿ ಹರಡುತ್ತಿರುವ ಅತ್ಯಂತ ಆಶ್ಚರ್ಯಕರವಾದ ಭವಿಷ್ಯವಾಣಿ ಎಂದರೆ ಅನ್ಯಗ್ರಹ ಜೀವಿ ಅಂದರೆ ಏಲಿಯನ್‌ಗೆ ಸಂಬಂಧಿಸಿದ್ದಾಗಿದೆ. ನವೆಂಬರ್ 2026 ರಲ್ಲಿ ದೊಡ್ಡ ಬಾಹ್ಯಾಕಾಶ ನೌಕೆ ಭೂಮಿಯನ್ನು ಸಮೀಪಿಸಬಹುದು ಎಂದು ಅವರ ಭವಿಷ್ಯವಾಣಿಯಲ್ಲಿ ಹೇಳಲಾಗಿದೆಯಂತೆ. ಮಾತ್ರವಲ್ಲ ಆ ಸಂದರ್ಭದಲ್ಲಿ ಮನುಷ್ಯರು ಏಲಿಯನ್‌ಗಳನ್ನು ಎದುರಿಸಬೇಕಾಗಬಹುದು ಎನ್ನಲಾಗಿದೆ.

AI ಬಗ್ಗೆಯೂ ಹರಿದಾಡುತ್ತಿರುವ ಭವಿಷ್ಯವಾಣಿ

ಕೃತಕ ಬುದ್ಧಿಮತ್ತೆ (AI) ಬಗ್ಗೆ ಬಾಬಾ ವಂಗಾ ನುಡಿದಿದ್ದಾರೆ ಎನ್ನಲಾಗಿರುವ ಭವಿಷ್ಯವಾಣಿಯ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆ ನಡೆಯುತ್ತಿದೆ. 2026 ರ ವೇಳೆಗೆ AI ಅತ್ಯಂತ ಶಕ್ತಿಶಾಲಿಯಾಗಿ ಬೆಳೆಯುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಎಐ ಪ್ರಭಾವ ಇರುತ್ತದೆ. ಇದನ್ನು ನಿಯಂತ್ರಿಸುವುದು ಬಹಳ ಕಷ್ಟವಾಗಬಹುದು ಎನ್ನುವುದನ್ನು ಭವಿಷ್ಯವಾಣಿಯಲ್ಲಿ ಹೇಳಲಾಗಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು ಕೂಡ ಬೆಳಕಿಗೆ ಬಂದಿದೆ

ಬಾಬಾ ವಂಗಾ ಅವರ ಭವಿಷ್ಯವಾಣಿಯಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಕೂಡಾ ಸೇರಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ಒತ್ತಡ, ದುರ್ಬಲಗೊಳ್ಳುತ್ತಿರುವ ಕರೆನ್ಸಿಗಳು ಮತ್ತು ಜಗತ್ತನ್ನು ದೊಡ್ಡ ಆರ್ಥಿಕ ಬಿಕ್ಕಟ್ಟಿಗೆ ಕೊಂಡೊಯ್ಯಬಹುದು ಎನ್ನಲಾಗಿದೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳ ಬೆಲೆಯಲ್ಲಿ ಏರಿಕೆಯ ಬಗ್ಗೆಯೂ ಹೇಳಲಾಗಿದೆ.

2026ರಲ್ಲಿ ಅಂತ್ಯವಾಗುವುದೇ ಪುಟಿನ್ ಯುಗ?

ಇನ್ನು ರಷ್ಯಾದ ರಾಜಕೀಯದ ಬಗ್ಗೆ ಬಾಬಾ ವಂಗಾ ಅವರ ಹೇಳಿಕೆ ಕೂಡಾ ಭಾರೀ ಸದ್ದು ಮಾಡುತ್ತಿದೆ. 2026 ರ ಅಂತ್ಯದ ವೇಳೆಗೆ ರಷ್ಯಾದಲ್ಲಿ ಪ್ರಮುಖ ಅಧಿಕಾರ ಬದಲಾವಣೆಯಾಗಬಹುದು ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಬದಲು ಹೊಸ ನಾಯಕ ಹೊರ ಹೊಮ್ಮಬಹುದು ಎಂದು ಹೇಳಲಾಗುತ್ತಿದೆ.

ಯಾರು ಈ ಬಾಬಾ ವಂಗಾ?

ಬಾಬಾ ವಂಗಾ ಅವರ ನಿಜವಾದ ಹೆಸರು ವಾಂಜೆಲಿಯಾ ಪಾಂಡೇವಾ ಗುಶ್ಟೆರೋವಾ. ಅವರು 1911 ರಲ್ಲಿ ಜನಿಸಿದ ಅವರು ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡರಂತೆ. ಇದಾದ ನಂತರ, ಭವಿಷ್ಯವನ್ನು ನೋಡುವ ಅವರ ಸಾಮರ್ಥ್ಯದ ಬಗೆಗಿನ ಕಥೆಗಳು ಜನಪ್ರಿಯವಾದವು. ಅವರ ಭವಿಷ್ಯವಾಣಿಗಳನ್ನು 9/11 ದಾಳಿ, ಚೆರ್ನೋಬಿಲ್ ವಿಪತ್ತು, ರಾಜಕುಮಾರಿ ಡಯಾನಾ ಸಾವು ಮತ್ತು 2004 ರ ಸುನಾಮಿ ಸೇರಿದಂತೆ ವಿವಿಧ ಘಟನೆಗಳಿಗೆ ಲಿಂಕ್ ಮಾಡಲಾಗುತ್ತಿದೆ.

ಬಾಬಾ ವಂಗಾ ಅವರ ಭವಿಷ್ಯವಾಣಿಗಳ ಬಗ್ಗೆ ಯಾವುದೇ ಅಧಿಕೃತ ಮತ್ತು ಸಂಪೂರ್ಣ ಲಿಖಿತ ದಾಖಲೆ ಇಲ್ಲ. ಬಾಬಾ ವಂಗಾ ಅವರದ್ದು ಎಂದು ಹೇಳಲಾದ ಅನೇಕ ಭವಿಷ್ಯವಾಣಿಗಳು ವಿವಿಧ ಮಾಧ್ಯಮ ವರದಿಗಳು ಮತ್ತು ಇಂಟರ್ನೆಟ್ ಪೋಸ್ಟ್‌ಗಳ ಮೂಲಕ ಜನಪ್ರಿಯತೆಯನ್ನು ಗಳಿಸಿವೆ. ಆದ್ದರಿಂದ, ಅವುಗಳನ್ನು ವೈಜ್ಞಾನಿಕ ಭವಿಷ್ಯವಾಣಿಗಳು ಅಥವಾ ಭವಿಷ್ಯದ ಘಟನೆಗಳ ಬಗ್ಗೆ ನಿರ್ಣಾಯಕ ಮಾಹಿತಿ ಎಂದು ಪರಿಗಣಿಸಲಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+