Budhaditya Yoga 2025: ಕುಂಭದಲ್ಲಿ ಬುಧಾದಿತ್ಯ ಯೋಗ- ಈ ರಾಶಿಯವರ ಉದ್ಯೋಗ, ವ್ಯವಹಾರದಲ್ಲಿ ಭಾರೀ ಆದಾಯ
ಸೂರ್ಯ ಮತ್ತು ಬುಧ ಗ್ರಹಗಳು ಒಂದೇ ರಾಶಿಯಲ್ಲಿದ್ದಾಗ ಬುಧಾದಿತ್ಯ ಯೋಗ ರೂಪಗೊಳ್ಳುತ್ತದೆ. ಈ ಯೋಗ ಶನಿಯ ಕುಂಭ ರಾಶಿಯಲ್ಲಿ ರೂಪುಗೊಳ್ಳುವುದರಿಂದ ಹಾಗೂ ಶನಿ, ಸೂರ್ಯ ಮತ್ತು ಬುಧ ಈ ಮೂರು ಗ್ರಹಗಳ ಸ್ವಭಾವ ವಿಭಿನ್ನವಾಗಿರುವುದರಿಂದ ಇದರ ಪರಿಣಾಮ ವಿಶೇಷವಾಗಿರುತ್ತದೆ. ಕುಂಭ ರಾಶಿಯು ವಾಯು ಅಂಶದ ರಾಶಿ. ಇದರಲ್ಲಿ ಬುಧಾದಿತ್ಯ ಯೋಗ ರೂಪುಗೊಳ್ಳುವುದರಿಂದ ಒಬ್ಬ ವ್ಯಕ್ತಿ ಶಿಸ್ತುಬದ್ಧನಾಗಿರುತ್ತಾನೆ. ತಂತ್ರಜ್ಞಾನ ಮತ್ತು ಸಂಶೋಧನೆಗೆ ಸಂಬಂಧಿಸಿದ ಜನರು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಬುಧಾದಿತ್ಯ ಯೋಗ ಸೃಷ್ಟಿಯಾಗುವ ದಿನಾಂಕ ಹಾಗೂ ಸಮಯ ಅದರ ಪರಿಣಾಮವನ್ನು ಈಗ ತಿಳಿಯೋಣ.
ಮಂಗಳವಾರ ಫೆಬ್ರವರಿ 11ರಂದು ಮಧ್ಯಾಹ್ನ 12:58ಕ್ಕೆ ಬುಧ ಗ್ರಹ ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶಿಸುತ್ತದೆ. ಇದರ ನಂತರ ಫೆಬ್ರವರಿ 12ರಂದು ಸೂರ್ಯನು ರಾತ್ರಿ 10:03ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಗ್ರಹಗಳ ರಾಜ ಸೂರ್ಯ ಈ ರಾಶಿಗೆ ಪ್ರವೇಶಿಸಿದ ತಕ್ಷಣ ಅವನು ಗ್ರಹಗಳ ರಾಜಕುಮಾರ ಬುಧ ಗ್ರಹದ ಜೊತೆಯಲ್ಲಿರುತ್ತಾನೆ.
ಈ ಯೋಗವನ್ನು ಜ್ಯೋತಿಷ್ಯದಲ್ಲಿ ಬುಧಾದಿತ್ಯ ಯೋಗ ಎಂದು ಕರೆಯಲಾಗುತ್ತದೆ. ಇದು ಶನಿಯ ಮೂಲ ತ್ರಿಕೋನ ರಾಶಿಯಲ್ಲಿ ರೂಪುಗೊಳ್ಳುವುದರಿಂದ ಅನೇಕ ಜ್ಯೋತಿಷಿಗಳು ಇದನ್ನು ರಾಜಯೋಗ ಎಂದೂ ಕರೆಯುತ್ತಾರೆ. ಈ ಯೋಗವು ಬುದ್ಧಿಶಕ್ತಿ, ಸಂವಹನ, ನಾಯಕತ್ವ, ಉದ್ಯೋಗ ಮತ್ತು ವ್ಯವಹಾರದ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಯಾವ ರಾಶಿಯವರಿಗೆ ಇದರ ಶುಭ ಫಲ ಸಿಗಲಿದೆ ಎಂದು ಈಗ ತಿಳಿಯೋಣ.

ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಆದ್ದರಿಂದ ಈ ಸಂಯೋಜನೆಯು ವೃತ್ತಿ, ಶಿಕ್ಷಣ ಮತ್ತು ವ್ಯವಹಾರಕ್ಕೆ ಅತ್ಯಂತ ಶುಭವಾಗಿರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಸರಿಯಾದ ಸಮಯ.
ವ್ಯವಹಾರಕ್ಕೆ ಸಾಕಷ್ಟು ಹಣ ಹರಿದು ಬರಲಿದೆ. ಐಟಿ, ಮಾಧ್ಯಮ, ಮಾರ್ಕೆಟಿಂಗ್ ಮತ್ತು ಬರವಣಿಗೆಗೆ ಸಂಬಂಧಿಸಿದ ಜನರಿಗೆ ಹೊಸ ಅವಕಾಶಗಳು ಸಿಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಕೇಳಿಬರುತ್ತವೆ.

ತುಲಾ ರಾಶಿ
ವ್ಯಾಪಾರ ಮತ್ತು ಆರ್ಥಿಕ ವಲಯದಲ್ಲಿ ಭಾರಿ ಲಾಭ ಗಳಿಸುವ ಸಾಧ್ಯತೆಯಿದೆ. ಷೇರು ಮಾರುಕಟ್ಟೆ, ಹೂಡಿಕೆ, ರಿಯಲ್ ಎಸ್ಟೇಟ್ ಮತ್ತು ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದ ಜನರು ಉತ್ತಮ ಲಾಭ ಗಳಿಸಬಹುದು. ನಿಮ್ಮ ಕೆಲಸದಲ್ಲಿ ಬಡ್ತಿ, ವೇತನ ಹೆಚ್ಚಳ ಮತ್ತು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು.
ಪ್ರೇಮ ಜೀವನ ಮತ್ತು ವೈವಾಹಿಕ ಜೀವನದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಯಾರೊಂದಿಗಾದರೂ ಹಳೆಯ ಸಂಬಂಧಗಳು ಹದಗೆಟ್ಟಿದ್ದರೆ ಅದು ಸುಧಾರಿಸುತ್ತದೆ. ಸೃಜನಶೀಲ ಕ್ಷೇತ್ರಗಳಿಗೆ (ಫ್ಯಾಷನ್, ವಿನ್ಯಾಸ, ಸಂಗೀತ, ಕಲೆ) ಕೆಲಸ ಮಾಡುವ ಜನರಿಗೆ ಉತ್ತಮ ಉದ್ಯೋಗ ಅವಕಾಶಗಳು ಸಿಗುತ್ತವೆ. ನೀವು ಯಾವುದೇ ಕೆಲಸವನ್ನು ಕೈಗೊಂಡರೂ, ಅದರಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.

ಕುಂಭ ರಾಶಿ
ಕುಂಭ ರಾಶಿಯಲ್ಲಿ ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. ಇದರಿಂದ ಕುಂಭ ರಾಶಿಯವರಿಗೆ ಇದು ತುಂಬಾ ಶುಭವಾಗಿರುತ್ತದೆ. ಬುದ್ಧಿವಂತಿಕೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯತಂತ್ರದ ಚಿಂತನೆ ಹೆಚ್ಚಾಗುತ್ತದೆ. ಸರ್ಕಾರಿ ಉದ್ಯೋಗಗಳು, ಆಡಳಿತ ಸೇವೆಗಳು ಅಥವಾ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಹೊಸ ಜವಾಬ್ದಾರಿಗಳು ಸಿಗಲಿದೆ.
ವ್ಯಾಪಾರ ವರ್ಗ ಹೊಸ ಒಪ್ಪಂದಗಳನ್ನು ಪಡೆಯಬಹುದು ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಬೆಳವಣಿಗೆ ಇರುತ್ತದೆ. ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಹೊಸದಾಗಿ ಮದುವೆಯಾದ ಮತ್ತು ಪ್ರೀತಿಸುವ ದಂಪತಿಗಳ ಸಂಬಂಧಗಳು ಬಲಗೊಳ್ಳುತ್ತವೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರು ಮಾಹಿತಿಯನ್ನು ಅವಲಂಭಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಕಾರ್ಯ ರೂಪಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications