ಇದ್ದರೆ ತುಲಾ ರಾಶಿ ಸ್ತ್ರೀಯಂತೆ ಇರಬೇಕು!

Love compatibility astrology
ನಂಬಿಕೆ ಮತ್ತು ಪ್ರೀತಿಗಳು ದಾಂಪತ್ಯದಲ್ಲಿ ಸಂಭವಿಸುವ ಎಂತಹುದೇ ಗಾಯಗಳಿಗೆ ಹಚ್ಚಕಾದ ಅದ್ಭುತ ಮುಲಾಮು ಮತ್ತು ಬಿರುಕುಗೊಂಡ ಸಂಬಂಧಗಳನ್ನು ಬಂಧಿಸುವ ಫೆವಿಕ್ವಿಕ್. ಇವೆರಡನ್ನು ಮರೆತು ಅಪನಂಬಿಕೆಗೆ, ಸಂಶಯ ಪಿಶಾಚಿಗೆ ತಲೆಬಾಗಿದರೆ ಕಲಹ ಕಟ್ಟಿಟ್ಟ ಬುತ್ತಿ.

* ಧವಳ

ವೃಷಭ ರಾಶಿ ಪುರುಷ - ತುಲಾ ರಾಶಿ ಸ್ತ್ರೀ :

ತುಲಾ ರಾಶಿ ಸ್ತ್ರೀಯರಲ್ಲಿ ಅತಿ ಹೆಚ್ಚಿನ ನಿಗೂಢತೆ ಇರುತ್ತದೆ. ಯಾವಾಗ ಏನು ಮಾಡ್ತಾರೋ ಎನ್ನುವ ಸಂಗತಿ ಯಾರಿಗೂ ತಿಳಿಯದು. ಹೇಗೆ ಮಾಡ್ತಾರೋ ಎನ್ನುವ ವಿಷಯ ಉಹುಂ ಯಾರಿಗೂ ಗೊತ್ತೇ ಇರಲ್ಲ. ಕಷ್ಟಪಟ್ಟು ಯಾರ ಸಹಾಯ ಇಲ್ಲದೆ ತಾವೇ ತಮ್ಮ ದಾರಿಯನ್ನು ಆಯ್ಕೆ ಮಾಡಿಕೊಂಡು ಅದರಂತೆ ನಡೆಯುತ್ತಾರೆ. ವೃಷಭ ರಾಶಿ ಪುರುಷರ ವಿಷಯಕ್ಕೆ ಬರುವುದಾದರೆ ಯಾವುದೇ ನಿರ್ಣಯ ಕೈಗೊಳ್ಳಬೇಕಾದರೂ ಆಲೋಚಿಸಿ ಮುಂದಡಿ ಇಡ್ತಾರೆ. ಇವರು ಒತ್ತಡಕ್ಕೆ ಒಳಗಾದಾಗ ತುಲಾ ರಾಶಿ ಸ್ತ್ರೀ ಇವರ ಸಮಸ್ಯೆಯನ್ನು ದೂರಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಪತಿಯ ಮನಸನ್ನು ನಾರ್ಮಲ್ ಸ್ಥಿತಿಗೆ ತರುವ ಶಕ್ತಿ ಈ ರಾಶಿಯ ಸ್ತ್ರೀಗೆ ಮಾತ್ರ ಇರುತ್ತದೆ. ಎಲ್ಲಾ ಸಮಸ್ಯೆಯನ್ನು ಪ್ರೀತಿಯ ಮೂಲಕ ಬಗೆ ಹರಿಸುತ್ತಾರೆ. ಕೋಪಕ್ಕಿಂತ ಪ್ರೀತಿ ಅತಿ ಬಲಿಷ್ಠವಾದ ಅಸ್ತ್ರ ಅಲ್ವೆ? ಈ ಅಂಶವು ಈ ದಂಪತಿಗಳ ಬದುಕನ್ನು ಸದಾ ಸಂತೋಷದಲ್ಲಿ ಇಟ್ಟಿರುತ್ತದೆ.

ವೃಷಭ ರಾಶಿ ಸ್ತ್ರೀ - ವೃಶ್ಚಿಕ ರಾಶಿ ಪುರುಷ :

ವೃಶ್ಚಿಕ ರಾಶಿ ಪುರುಷ ನಿರ್ದಯಿ. ಕಲ್ಲು ಹೃದಯದವನು ಎನ್ನುವ ಆತಂಕ ವೃಷಭ ರಾಶಿ ಸ್ತ್ರೀಗೆ ಸದಾ ಕಾಡುತ್ತಿರುತ್ತದೆ. ಆತನಿಗೆ ಸ್ತ್ರೀಸಾಂಗತ್ಯದ ವಿಷಯದಲ್ಲಿ ಹೆಚ್ಚು ಆಸಕ್ತಿ ಎನ್ನುವ ಭಯ ಆಕೆಯಲ್ಲಿ ನೆಲೆಯೂರಿರುತ್ತದೆ. ಆದರೆ ಕಾಮ ಆತನ ಬದುಕಿನ ಅತಿ ಮುಖ್ಯ ಅಂಶವಲ್ಲ. ಆ ರಾಶಿಯವರು ಶತ್ರುಗಳನ್ನು ಸರಿಯಾದ ಕ್ರಮದಲ್ಲಿ ಮಟ್ಟ ಹಾಕುತ್ತಾರೆ. ಕಷ್ಟಪಡುವವರನ್ನು ಕಂಡರೆ ಹೃದಯ ಹಿಂಡುತ್ತದೆ. ಇತರರ ಸಮಸ್ಯೆಗಳಿಗೆ ಮರುಗುತ್ತಾ ಕೂರದೆ ತಮ್ಮ ಕೈಲಾದ ಸಹಾಯ ಮಾಡುವ ಉತ್ತಮ ವ್ಯಕ್ತಿತ್ವದವರು. ಅಕಸ್ಮಾತ್ ತಿಳಿಯದೆ ಆಗುವ ತಪ್ಪು, ಆಕಸ್ಮಿಕವಾಗಿ ಉಂಟಾಗುವ ಅವಘಡ ಇವುಗಳನ್ನು ಕ್ಷಮಿಸುವ ಉದಾರತೆಯನ್ನು ಹೊಂದಿರುತ್ತಾರೆ. ಕ್ಷಮಾಗುಣ ಎಲ್ಲರಿಗೂ ಸಿದ್ಧಿಸಿರಲ್ಲ. ಇಂತಹ ಅಪರೂಪದ ಗುಣವು ಈ ರಾಶಿಯ ಪುರುಷರಲ್ಲಿ ಇರುತ್ತದೆ. ಇಂತಹ ಅಂಶಕ್ಕೆ ವೃಷಭ ರಾಶಿ ಸ್ತ್ರೀ ಸಹ ಇಂಥ ಗುಣಕ್ಕೆ ಹೆಸರುವಾಸಿ. ಇವರನ್ನು ನೋಡಿ ಉಳಿದವರು ಸಾಕಷ್ಟು ಕಲಿಯುವುದು ಇದೆ. ಒಂದರ್ಥದಲ್ಲಿ ಸಮಾಜಕ್ಕೆ ಮಾದರಿ ಅನ್ನಿಸುವ ಜೋಡಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+