ವೃಷಭ ರಾಶಿ ಪುರುಷರು ಮಹಾ ಧೈರ್ಯಸ್ಥರು

* ಧವಳ
ವೃಷಭ ರಾಶಿ ವಿಷಯಕ್ಕೆ ಬರುವುದಾದರೆ ಇದು ಇಸ್ಪೀಟ್ ಕಾರ್ಡಿನಲ್ಲಿರುವ ಜೋಕರ್ ರೀತಿಯಂತೆ. ಎಲ್ಲಾ ರಾಶಿಗೂ ಹೊಂದುತ್ತದೆ. ಹಾಗಂತ ಇವರು ಎಲ್ಲರನ್ನು ಮದುವೆ ಆಗೋಕೆ ಆಗಲ್ವಲ್ಲ? ಮತ್ತೊಂದು ಸಂಗತಿ ಓದುಗರ ಗಮನಕ್ಕೆ. ಮೇಷದಿಂದ ಮೀನದ ತನಕ ನಾವು ನಿಮಗೆ ರಾಶಿಗಳ ಬಗ್ಗೆ ತಿಳಿಸ್ತಾ ಬರ್ತೀವಲ್ಲ, ಆದರೆ ಒಂದೊಂದು ರಾಶಿ ಮುಗಿದಾಗಲೂ ರಾಶಿಗಳ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತದೆ. ಈಗ ನೋಡಿ ಆರಂಭದಲ್ಲಿ ಮೇಷ-ಮೇಷದ ಬಗ್ಗೆ ಬರೆದಿದ್ದೆವು. ಈಗ ಮೇಷದ ಕೆಲಸ ಆಯ್ತಲ್ಲ, ವೃಷಭ-ವೃಷಭದ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ. ಎಲ್ಲಾ ರಾಶಿಗಳ ಸಂಗತಿಗಳು ಒಂದಕ್ಕೊಂದು ಲಿಂಕ್ ಆಗ್ತಾನೆ ಇರುತ್ತವೆ. ಸೊ, ನಿಮ್ಮ ರಾಶಿ ಓದಿ, ಸಂಗಾತಿಯ ರಾಶಿಯ ಬಗ್ಗೆ ತಿಳಿಯಿರಿ. ಬದುಕನ್ನು ಸುಂದರವಾಗಿಟ್ಟು ಕೊಳ್ಳಿ.
ವೃಷಭ ರಾಶಿ ಸ್ತ್ರೀ - ವೃಷಭ ರಾಶಿ ಪುರುಷ : ವೃಷಭ ರಾಶಿಯವರು ಧೈರ್ಯಸ್ಥರು. ಎಷ್ಟೇ ಕಷ್ಟ ಇರಲಿ ನಗುನಗುತ್ತ ಅದನ್ನು ಸ್ವೀಕರಿಸುತ್ತಾರೆ. ಒಂದೇ ರಾಶಿ ಆದ ಇವರಿಬ್ಬರ ಸ್ವಭಾವದಲ್ಲಿ ಮ್ಯಾಚ್ ಆಗೇ ಆಗುತ್ತದೆ. ಒಂದೇ ರೀತಿಯ ಸ್ವಭಾವ ಇವರದಾಗಿರುತ್ತದೆ. ಹಾಗಂತ ಜಗದವಗದ ಇರಲ್ಲ ಅಂತೇನು ಇಲ್ಲ. ಎಷ್ಟೇ ಆದರು ಗಂಡ ಹೆಂಡ್ತೀರಲ್ವ, ಆಗಾಗ ಸಣ್ಣಪುಟ್ಟ ಫೈಟಿಂಗ್ ಇದ್ದೆ ಇರುತ್ತದೆ. ಒಂದು ಮಾತಿಗೆ ರಾಜಿ ಆದರೆ ಮತ್ತೊಂದು ಸಿದ್ಧವಾಗಿ ಇರುತ್ತದೆ. ಅವರ ಈ ಗುಣ ನಿರಂತರ. ಭಿನ್ನಾಭಿಪ್ರಾಯಗಳು ಇವರ ಬದುಕಲ್ಲಿ ಕಾಮನ್, ಆದರೂ ಬಾಂಧವ್ಯದಲ್ಲಿ ಒಡಕು ಉಹುಂ ಎಂದಿಗೂ ಇರುವುದಿಲ್ಲ.
ವೃಷಭ ರಾಶಿ ಸ್ತ್ರೀ - ಮಿಥುನ ರಾಶಿ ಪುರುಷ : ವೃಷಭ ರಾಶಿ ಹೆಣ್ಣು ತಾನು ಬಯಸಿದ ಪುರುಷನನ್ನು ಪಡೆದೇ ಪಡೆಯುತ್ತಾಳೆ. ಇದು ಅವಳ ಸ್ವಭಾವ. ಒಟ್ಟಾರೆ ಹೇಳುವುದಾದರೆ ಹಠಮಾರಿ. ಒಮ್ಮೆ ನಿರ್ಧಾರ ತೆಗೆದುಕೊಂಡರೆ ಹೆಜ್ಜೆ ಹಿಂದಿಡುವ ಗೋಜಿಗೆ ಹೋಗಳು. ಇನ್ನು ಮಿಥುನ ರಾಶಿ ಪುರುಷನ ವಿಷಯಕ್ಕೆ ಬಂದ್ರೆ, ಈತನಿಗೆ ಬದಲಾವಣೆಗಳು ಅಂದ್ರೆ ತುಂಬಾ ಪ್ರೀತಿ. ಸಾಕಷ್ಟು ಜನರು ಈತನ ಬದುಕಿನಲ್ಲಿ ಬಂದು ಭಾಗವಾಗುತ್ತಾರೆ, ಜೊತೆ ಹೊರಟು ಹೋಗ್ತಾರೆ! ಈ ಸಂಗತಿಗಳು ಇಬ್ಬರಲ್ಲೂ ಗಲಾಟೆಗೆ ಕಾರಣ ಆಗುತ್ತದೆ, ಆದರೆ ಎಂದಿಗೂ ಇವರು ಬೇರೆ ಆಗುವುದಕ್ಕೆ ಇಷ್ಟ ಪಡರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications