ಮೇಷ-ಮಕರ, ಸ್ತ್ರೀ-ಪುರುಷರ ರಾಶಿಫಲ

ಮೇಷ ರಾಶಿ ಸ್ತ್ರಿ - ಮಕರ ರಾಶಿ ಪುರುಷ :
ಮಕರ ರಾಶಿ ಪುರುಷ ತುಂಬಿದ ಸಭೆಯಲ್ಲಿ ಇದ್ದರೂ ಸಹ ಒಂಟಿಯಾಗಿ ಇರುವುದಕ್ಕೆ ಇಷ್ಟ ಪಡ್ತಾನೆ. ಇವರಿಗೆ ಮೇಷ ರಾಶಿ ಸ್ತ್ರಿಯತ್ತ ಆಕರ್ಷಣೆ ಉಂಟಾಗುತ್ತದೆ. ಆದರೆ ಮನದಲ್ಲಿ ಮಂಡಿಗೆ ತಿಂದ್ರೇನು ಪ್ರಯೋಜನ? ಅದನ್ನು ಆಕೆಯ ಮುಂದೆ ಇಟ್ರೆ ತಾನೆ ಆಕೆಗೂ ಈತನ ದಿಲ್ ಏನೂ ಅಂತ ಗೊತ್ತಾಗೋದು. ಈ ವಿಷಯದಲ್ಲಿ ಈತ ಸ್ವಲ್ಪ ಹಿಂದೆ. ಕೇವಲ ಪ್ರೀತಿಯಲ್ಲಿ ಮಾತ್ರವಲ್ಲ ಈತ ನಾಲ್ವರೊಂದಿಗೆ ತನ್ನ ಮನದ ಮಾತನ್ನು ಹಂಚಿ ಕೊಳ್ಳುವುದಕ್ಕೆ ಆಗದೆ ಒದ್ದಾಡುತ್ತಾನೆ. ಈ ಒಂದು ಕಾರಣವು ಆತನನ್ನು ಏಕಾಂಗಿಯನ್ನಾಗಿ ಮಾಡುತ್ತದೆ. ಇನ್ನು ಈತ ಮೇಷ ರಾಶಿಯ ಹೆಣ್ಣನ್ನು ಮದುವೆ ಆದ್ರೆ ಕಥೆ ಹೇಗಿರುತ್ತದೆ ಅಂದ್ರೆ, ಆ ಹೆಣ್ಣುಮಗಳು ತನ್ನ ಪತಿಯಿಂದ ಹೊಗಳಿಕೆ ಇಷ್ಟ ಪಡ್ತಾಳೆ. ಆದರೆ ಈತನಿಗೆ ಮನದಲ್ಲಿ ಇರುವುದನ್ನು ತನ್ನ ದಿಲ್ಗೆ ಹೇಳಿ ಖುಷ್ ಮಾಡುವುದಕ್ಕೆ ಬರುವುದಿಲ್ಲವಲ್ಲ, ಇದು ಆಕೆಯಲ್ಲಿ ಕೋಪವನ್ನು ಉಂಟು ಮಾಡುತ್ತದೆ. ಈ ರಾಶಿಯ ಹೆಣ್ಣು ಮಕ್ಕಳೇ ಒಂದು ತಿಳಿದುಕೊಳ್ಳಿ, ನಿಮ್ಮ ಪ್ಯಾರ್ಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ಅರ್ಥವಲ್ಲ ಆದರೆ ಅದನ್ನು ಹೇಳುವ ರೀತಿ ಅವರಿಗೆ ಗೊತ್ತೇ ಇರುವುದಿಲ್ಲ ಅದೆ ದೊಡ್ದ ಪ್ರಾಬ್ಲಂ. ಮಕರ ರಾಶಿಯ ಪುರುಷನ ಈ ಗುಣದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ಇದರ ಬಗ್ಗೆ ಗಮನ ಇರಲಿ.
ಮೇಷ ರಾಶಿ ಪುರುಷ - ಮಕರ ರಾಶಿ ಸ್ತ್ರಿ :
ಮೇಷ ರಾಶಿ ಪುರುಷ ಬಾಸ್ ಆಗಿದ್ದು ಆತ ಕೈ ಕೆಳಗೆ ಮಕರ ರಾಶಿ ಸ್ತ್ರಿ ಕೆಲಸ ಮಾಡ್ತಾ ಇದ್ದೂ ಇವರಿಬ್ಬರಿಗೂ ಮದುವೆ ಆಗದೆ ಇದ್ರೆ ಆತನಿಗೆ ಇವಳ ಮೇಲೆ ಪ್ರೀತಿ ಉಂಟಾಗುತ್ತದೆ. (ಮದುವೆ ಆಗಿರುವವರಿಗೂ ಈ ಅಪಘಾತ ಸಂಭವಿಸಬಹುದು, ಆದ್ರೆ ಅನ್ ಮ್ಯಾರಿಡ್ ಹೆಣ್ಣು ಮಕ್ಕಳೇ ಈ ವಿಷಯದಲ್ಲಿ ಎಚ್ಚರ. ಎಂದಿಗೂ ಮದುವೆ ಆಗಿರುವವರ ಪ್ರೀತಿಗೆ ಗಮನ ಕೊಡಬೇಡಿ). ಮಕರ ರಾಶಿ ಹೆಣ್ಣು ಮಕ್ಕಳಿಗೆ ಸರ್ಪ್ರೈಸ್ ಇಷ್ಟ ಆಗುವುದಿಲ್ಲ, ಆದರೆ ಮೇಷ ರಾಶಿಯ ಪುರುಷ ಸದಾ ಸರ್ಪ್ರೈಸ್ ಕೊಡುವುದಕ್ಕೆ ಇಷ್ಟ ಪಡ್ತಾರೆ. ಇವರಿಬ್ಬರು ಲವ್ ಬರ್ಡ್ಸ್ ಥರ ಬಾಳ್ವೆ ನಡೆಸುತ್ತಾರೆ. ಚಿಕ್ಕ ಪುಟ್ಟ ಗಲಾಟೆಗಳು ಸಾಮಾನ್ಯ, ಅದು ಸಂಸಾರದ ಸಾರ ಹೆಚ್ಚಿಸುತ್ತದೆ. ಆದರೆ ಇವರ ದಾಂಪತ್ಯಗೀತೆಯು ಮಾತ್ರ ಸುಂದರ-ಸುಮಧುರವಾಗಿರುತ್ತದೆ. ಮತ್ತೊಬ್ಬರಿಗೆ ಮಾದರಿಯಾಗಿರುತ್ತದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications