ChatGPT: ಕೈಗೆಟುಕುವ ಬೆಲೆಗೆ OpenAI ನಿಂದ 'ಚಾಟ್‌ಜಿಪಿಟಿ ಗೋ' ಚಂದಾದಾರಿಕೆ ಪಡೆಯಿರಿ
ChatGPT Go: ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence) ಪರಿಣಾಮಕಾರಿಯಾಗಿ ಬಳಕೆ ಆಗುತ್ತಿದೆ. ಓಪನ್‌ಎಐ, ಚಾಟ್‌ಜಿಪಿಟಿ ಗೋ ಎಂಬ ಹೊಸ ಚಂದಾದಾರಿಕೆ ಯೋಜನೆ ಪ್ರಕಟಿಸಿದೆ. ಇದು ಭಾರತದ ಮೊದಲ ಕೈಗೆಟುಕುವ ಬೆಲೆಗೆ ಎಐ ಚಂದಾದಾರಿಕೆ ಸಿಗುವ ಯೋಜನೆಯಾಗಿದೆ. ನೀವು ಈ ಚಂದಾದಾರರಾದರೆ ಜನಪ್ರಿಯ ಚಾಟ್‌ಜಿಪಿಟಿ ವೈಶಿಷ್ಟ್ಯಗಳನ್ನು ಪ್ರವೇಶಿಸಬಹುದು.
ಈ ವಿಚಾರವನ್ನು ಚಾಟ್‌ಜಿಪಿಟಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ನಿಕ್ ಟರ್ಲಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ. ನಾವು ಇದೀಗ ಭಾರತದಲ್ಲಿ ಚಾಟ್‌ಜಿಪಿಟಿ ಗೋವನ್ನು ಆರಂಭಿಸಿದ್ದೇವೆ. ದೇಶದ ಭಾರತದ ಬಳಕೆದಾರರಿಗೆ ಕೈಗೆಟುಕುವ ಬೆಲೆಗೆ ನಮ್ಮ ವೈಶಿಷ್ಟ್ಯ ನೀಡುತ್ತಿದ್ದೇವೆ. 10x ಅಧಿಕ ಸಂದೇಶ ಮಿತಿಗಳು, 10x ಹೆಚ್ಚಿನ ಚಿತ್ರ ರಚನೆ, 10x ಹೆಚ್ಚಿನ ಫೈಲ್ ಅಪ್‌ಲೋಡ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳು ಬರೀ ಮಾಸಿಕ 399 ರೂಪಾಯಿಗೆ ಪಡೆಯಬಹುದಾಗಿದೆ.

ಓಪನ್‌ಎಐನ ಚಾಟ್‌ಜಿಪಿಟಿ ಚಂದಾದಾಯಿರಿಕೆಯನ್ನು ಬಳಕೆದಾರರು ಯುಪಿಐ ಪಾವತಿ ಮೂಲಕ ಪಡೆಯಬಹುದಾಗಿದೆ. ನೀವು ಈ ಕೂಡಲೇ ಚಾಟ್‌ಜಿಪಿಟಿ ಗೋ ಯೋಜನೆ ಚಂದಾದಾರಿಕೆ ಹೊಂದಬಹುದು. ಅದಕ್ಕಾಗಿ ನೀವು ಮೊದಲು ಚಾಟ್‌ಜಿಪಿಟಿ ಖಾತೆಗೆ ಲಾಗಿನ್ ಆಬೇಕು. ಅಲ್ಲಿರುವ ಪ್ರೊಫೈಲ್ ಸಿಂಬಾಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಪ್‌ಗ್ರೇಡ್ ಪ್ಲಾನ್ ಆದ ಬಳಿಕ, ಟ್ರೈ ಗೋ ಆಯ್ಕೆ ಮಾಡಿಕೊಂಡು ಅರ್ಹತೆ ಪರಿಶೀಲಿಸಿಕೊಳ್ಳಬೇಕು. ಬಳಿಕ ಅಲ್ಲಿ ಕೇಳುವ ಚಂದಾದಾರಿಕೆ ಹಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ ನಿಮಗೆ ಸ್ಕ್ರೀನ್ ಮೇಲೆ ಯುಪಿಐ ಇಲ್ಲವೇ ಕ್ರೆಡಿಟ್ ಕಾರ್ಡ್ ಎಂದು ಕೇಳುತ್ತದೆ. ನಿಮಗೆ ಅಗತ್ಯವೆನಿಸುವ ಆಯ್ಕೆ ಮಾಡಿಕೊಂಡು ಹಣ ಪಾವತಿಸಿ ಚಂದಾದಾರರಾಗಿ ಚಾಟ್‌ಜಿಪಿಟಿ ಹೊಸ ವೈಶಿಷ್ಟ್ಯತೆಗಳನ್ನು ಬಳಸಿಕೊಳ್ಳಬೇಕು.
ChatGPT Go: ಚಂದಾದಾರಿಕೆಯ ಪ್ರಯೋಜನಗಳು
* GPT-5 ಗೆ ನಿಮಗೆ ಹೆಚ್ಚಿನ ಅವಕಾಶಕ್ಕೆ ಪ್ರವೇಶ ಸಿಗುತ್ತದೆ. ಇದರಿಂದ ಚಾಟ್‌ಜಿಪಿಟಿ ಹೆಚ್ಚಿನ ಮಾದರಿಯಲ್ಲಿ ನೀವು ಬಳಸಿಕೊಳ್ಳಬಹುದು.
* ಇಮೇಜ್ ರಚನೆಗೆ ಅವಕಾಶ ದೊರೆಯುತ್ತದೆ. ವೃತ್ತಿಪರ ಹಾಗೂ ಇತರ ಬಳಕೆದಾರರಿಗೆ ಮಹತ್ವ ಚಿತ್ರ ರಚನೆಗೆ ಇದು ಸಹಾಯ ಮಾಡುತ್ತದೆ.
* ಚಾಜ್‌ಜಿಪಿಟಿಯಲ್ಲಿ ನೀವು ಫೈಲ್ ಅಪ್‌ಲೋಡ್ ಮಾಡಲು ಅವಕಾಶ ಸಿಗುತ್ತದೆ. ದಾಖಲೆಗಳು ಸೇರಿದಂತೆ ಅಗತ್ಯ ಫೈಲ್
ಅಪ್ಲೋಡ್ ಮಾಡಿಕೊಂಡು ನೀವು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು.
* ಚಂದಾದಾರಿಕೆಯಿಂದ ನಿಮಗೆ ಈ ಟೂಲ್‌ನಲ್ಲಿ ಸುಧಾರಿತ ಡೇಟಾ ವಿಶ್ಲೇಷಣೆಗೆ ವಿಫಲ ಅವಕಾಶ ಲಭಿಸುತ್ತದೆ. ಡೇಟಾ ಪರಿಶೋಧಿಸಬಹುದು.
* ವಿಡಿಯೋ ಸಂಭಾಷಣೆಗೂ ಅವಕಾಶ ದೊರೆಯುತ್ತದೆ.
* ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಕೆಲಸವನ್ನು ಸಂಘಟಿಸಿಬಹುದು. ಅದರ ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು. ಅಪ್ಡೇಟ್ ಚೆಕ್ ಮಾಡಬಹುದು. ಪರ್ಸನಲೈಜ್ ಮಾಡಿ AI ಪರಿಕರಗಳ ಸಹಾಯದಿಂದ ಅವನ್ನು ನಿರ್ಮಿಸಬಹುದು.
ಈ ಯೋಜನೆಯಲ್ಲಿ ಏನೇನು ಒಳಗೊಂಡಿಲ್ಲ
* ChatGPT Go ಬಜೆಟ್ ಸ್ನೇಹಿ ಅಪ್‌ಗ್ರೇಡ್ ಆಗಿದ್ದರೂ ಸಹ GPT-4o ಗೆ ಪ್ರವೇಶ ಹೊಂದಿಲ್ಲ.
* ಮೂರನೇ ವ್ಯಕ್ತಿಯ ಇಂಟರ್‌ಗ್ರೇಟಜ್ ಸಂಪರ್ಕ ಇಲ್ಲ.
* Sora ವೀಡಿಯೊ ರಚನೆ ಪರಿಕರಗಳು ಇಲ್ಲ.
* API ಬಳಕೆ, ಇದನ್ನು ಪ್ರತ್ಯೇಕವಾಗಿ ಬಿಲ್ ಮಾಡಲಾಗುತ್ತದೆ.
ಸದ್ಯ ಈ ಮಾಸಿಕ ವೈಶಿಷ್ಟ್ಯತೆ ಜೊತೆಗೆ ನೀವು ಮಾಸಿಕ 1,999 ರೂಪಾಯಿ ಕೊಟ್ಟರೆ ChatGPT Plus ಹಾಗೂ ತಿಂಗಳಿಗೆ 19,900 ರೂ. ನೀಡಿದರೆ ChatGPT Pro ಪಡೆಯಬಹುದು.
-
Gold Price: ಸತತ 2ನೇ ದಿನವು ಬಂಗಾರದ ಬೆಲೆ ಭಾರೀ ಏರಿಕೆ, ದಾಖಲೆ ಬರೆದ ಬೆಳ್ಳಿ -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ -
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ












Click it and Unblock the Notifications