AI: ಫೋಟೋ ಬಳಸಿ ವಿಡಯೋ ಮಾಡುವುದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್
ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದೆ. ಜನರು ಸಹ ಈ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಕಂಪನಿಗಳು ಸಹ ಹೊಸ ಹೊಸ ತಂತ್ರಜ್ಞಾನವನ್ನು ಜನರಿಗೆ ದಿನವೂ ನೀಡುತ್ತಿವೆ. ಈಗ ಗೂಗಲ್ ಫೋಟೋಸ್ ಸಹ ತನ್ನ ಗ್ರಾಹಕರಿಗೆ ಹತ್ತಿರವಾಗುವ ಉದ್ದೇಶದಿಂದ ಮತ್ತೊಂದು ಸೌಲಭ್ಯವನ್ನು ನೀಡಿದೆ. ಇನ್ನು ಗ್ರಾಹಕ ತನಗೆ ಇಷ್ಟದ ಫೋಟೋಸ ಬಳಸಿಕೊಂಡು ವಿಡಿಯೋ, ಅನಿಮೆ, ಕಾಮಿಕ್ಸ್, ಸ್ಕೆಚ್‌ಗಳು ಅಥವಾ 3D ಅನಿಮೇಷನ್‌ಗಳಂತಹ ವಿಭಿನ್ನ ಶೈಲಿಗಳಾಗಿ ಪರಿವರ್ತಿಸಬಹುದು.
ಗೂಗಲ್ ಫೋಟೋಸ್ ಹೊಸ ಟ್ಯಾಬ್ ಪರಿಚಯಿಸುತ್ತಿದೆ. ಇದರ ಅಡಿಯಲ್ಲಿ ಗ್ರಾಹಕ ಈ ಹೊಸ ತಂತ್ರಜ್ಞಾನದ ಲಾಭ ಪಡೆಯಬಹುದಾಗಿದೆ. ಗೂಗಲ್ ಬಳಕೆದಾರ ತನ್ನ ಫೋಟೋಗಳನ್ನು AI ಬಳಸಿ ಬೇರೆ ಅಪ್ಲಿಕೇಶನ್‌ನ ಸಹಾಯ ಪಡೆಯದೇ, ವಿಡಿಯೋಗಳನ್ನು ಮಾಡಬಹುದಾಗಿದೆ. ಈ ತಂತ್ರಜ್ಞಾನ ಬಳಕೆದಾರರಿಗೆ ಎಷ್ಟು ಹತ್ತಿರವಾಗಿದೆ ಎಂಬುದರ ಬಗ್ಗೆ ಗೂಗಲ್ ತಿಳಿದು ಕೊಳ್ಳಲು ಬಯಸುತ್ತಿದೆ.

ಗೂಗಲ್ ಬಳಕೆದಾರ ತನ್ನ ಫೋಟೋಗಳನ್ನು ಬಳಸಿಕೊಂಡೇ ವಿಡಯೋಗಳನ್ನು ಮಾಡಬಹುದು. ಈ ಸೌಲಭ್ಯ ಜೆಮಿನಿ ಮತ್ತು YouTube ನಲ್ಲಿ ಲಭ್ಯ ಇದೆ. ಗ್ರಾಹಕ Google Veo 2 ಬಳಸಿ ಇದರ ಲಾಭ ಪಡೆಯಬಹುದಾಗಿದೆ.
ಫೋಟೋದಿಂದ ವಿಡಿಯೋ ಮಾಡುವುದು ಹೇಗೆ?
ನೀವು ಫೋಟೋವನ್ನು ಆಯ್ಕೆ ಮಾಡಬೇಕು. ಅದಾದ ಬಳಿಕ ನೀವು ಎರಡು ಆಯ್ಕೆಗಳನ್ನು ಪಡೆಯುತ್ತೀರಾ. ಅದರಲ್ಲಿ ಒಂದನ್ನು ಆಯ್ಕೆ ಮಾಡಿ. ಆ ನಂತರ ನಿಮ್ಮ ಫೋಟೋವನ್ನು 6 ಸೆಕೆಂಡ್ ವಿಡಿಯೋ ಆಗಿ ಪರಿವರ್ತಿಸಬಹುದು. ಸದ್ಯ ಈ ವೈಶಿಷ್ಯ ಯುಎಸ್‌ನಲ್ಲಿ ಆಂಡ್ರಾಯ್ಡ್ ಹಾಗೂ ಐಒಎಸ್‌ಗಳಲ್ಲಿ ಲಭ್ಯ. ಇನ್ನು ಗೂಗಲ್ Remix ಎಂಬ ಇನ್ನೊಂದು ತಂತ್ರಜ್ಞಾನ ಪರಿಚಯಿಸಿದೆ.
ಇನ್ನು ನೀವು ಫೋಟೋಗಳನ್ನು ಬಳಸಿ ವಿಡಿಯೋ ಮಾಡಿದಲ್ಲಿ ನಿಮ್ಮ ವಿಡಿಯೋಗಳ ಮೇಲೆ ಒಂದು ವಾಟರ್‌ಮಾರ್ಕ್ ಬರುತ್ತದೆ. ಇದನ್ನು SynthID ಡಿಜಿಟಲ್ ವಾಟರ್‌ಮಾರ್ಕ್ ಎಂದು ಕರೆಯಲಾಗುತ್ತದೆ.
ಈ ಮೊದಲು ಗೂಗಲ್ ಫೋಟೋಸ್‌ನಲ್ಲೂ ಹಲವು ಎಐ ಸೌಲಭ್ಯಗಳನ್ನು ನೀಡಲಾಗಿತ್ತು. ಈ ಮೂಲಕ ಗ್ರಾಹಕ ತಾನು ತೆಗೆದ ಫೋಟೋದಲ್ಲಿ ಎಡಿಟ್ ಮಾಡಬಹುದಾಗಿತ್ತು. ಅಲ್ಲದೆ ತನಗೆ ಇಷ್ಟದ ರೀತಿಯಲ್ಲಿ ಪೋಟೋದಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದಿತ್ತು. ಅಲ್ಲದೆ ನಿಮ್ಮ ಫೋಟೋದಲ್ಲಿ ಬೇಡವಾದ ವ್ಯಕ್ತಿಗಳು ಅಥವಾ ವಸ್ತುಗಳು ಇದಿದ್ದರೆ, ಅವುಗಳನ್ನು ನೀವು ತೆಗೆದು ಹಾಕಬಹುದು. ಅಲ್ಲದೆ ಫೋಟೋ ಕಲರ್‌ಗಳನ್ನು ಸಹ ಎಐ ಮೂಲಕ ಬದಲಿಸಬಹುದಿತ್ತು. ಈಗ ಈ ಸಾಲಿಗೆ ಹೊಸ ಸೇರ್ಪಡೆಯಾಗಿದೆ.












Click it and Unblock the Notifications