AI ಮತ್ತು ಬಿಗ್‌ಡೇಟಾದಲ್ಲಿ ಬೆಂಗಳೂರಿಗೆ 5ನೇ ಸ್ಥಾನ: ಸ್ಟಾರ್ಟ್‌ಅಪ್‌ನಲ್ಲಿ 14ನೇ ಶ್ರೇಣಿ

ಬೆಂಗಳೂರು, ಜೂನ್ 14: ಭಾರತದಲ್ಲಿ ಪ್ರಮುಖ ಐಟಿ ಕೇಂದ್ರವಾಗಿರುವ ಕರ್ನಾಟಕ ರಾಜಧಾನಿ ಬೆಂಗಳೂರು ಸಹ 'ಕೃತಕ ಬುದ್ಧಿ ಮತ್ತೆ' (AI- Artificial Intelligence) ಯಲ್ಲಿ ವಿಶೇಷ ಪಾತ್ರವಹಿಸುತ್ತದೆ. AI ಮತ್ತು ಬಿಗ್ ಡೇಟಾದಲ್ಲಿ ಬೆಂಗಳೂರು 21ನೇ ಸ್ಥಾನದಿಂದ 05 ನೇ ಸ್ಥಾನಕ್ಕೆ ಜಿಗಿದಿದೆ ಎಂದು ಬಿಡುಗಡೆಯಾದ 'ಜಾಗತಿಕ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ' ವರದಿ (GSER) 2025 ತಿಳಿಸಿದೆ.

ಹೌದು, ದೇಶದ ಸಿಲಿಕಾನ್ ವ್ಯಾಲಿ ಬೆಂಗಳೂರು AI ಮತ್ತು ಬಿಗ್ ಡೇಟಾದಲ್ಲಿ ಏಳು ಸ್ಥಾನಗಳ ಜಿಗಿತವನ್ನು ಕಂಡಿದೆ. ಕಳೆದ ವರ್ಷ 21 ನೇ ಸ್ಥಾನದಲ್ಲಿತ್ತು. AI ಮತ್ತು ಬಿಗ್ ಡೇಟಾದಲ್ಲಿ ನಗರವು ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ. ಇದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಈ ಮೂಲಕ ತಂತ್ರಜ್ಞಾನಕ್ಕೆ ಹೆಚ್ಚು ಒಗ್ಗಿಕೊಳ್ಳಲಾಗುತ್ತಿದೆ.

Bengaluru Jumps from 21st To 5th Place in AI and Big Data Ranks 14th in Global Startups

GSER 2025 ವರದಿಯನ್ನು ಸದರಿ ವರ್ಷ ಸ್ಟಾರ್ಟ್ಅಪ್ ಜೀನೋಮ್ ಪ್ರಕಟಿಸಿದೆ. ಪ್ಯಾರಿಸ್‌ನಲ್ಲಿ ಇತ್ತೀಚೆಗೆ ನಡೆದ ವಿವಾಟೆಕ್ 2025 ರಲ್ಲಿ ಈ ವರದಿ ಬಿಡುಗಡೆ ಆಗಿದ್ದು, ಅದರಲ್ಲಿ ಬೆಂಗಳೂರು ಮತ್ತು ಎಐ ಕುರಿತು ಉಲ್ಲೇಖಿಸಲಾಗಿದೆ. ನಿಯತಾಂಕಗಳು, ಕಾರ್ಯಕ್ಷಮತೆ, ಹಣಕಾಸು, ಮಾರುಕಟ್ಟೆ ವ್ಯಾಪ್ತಿ, ಪ್ರತಿಭೆ ಮತ್ತು ಅನುಭವ ಮತ್ತು ಜ್ಞಾನ ಪರಿಸರ ವ್ಯವಸ್ಥೆಗಳನ್ನು ಮೌಲ್ಯಮಾಪನ ಹಾಗೂ AI-ಸ್ಥಳೀಯ ಸಾಮರ್ಥ್ಯಗಳ ಮೇಲೆ ವರದಿ ವಿಶೇಷ ಗಮನ ಹರಿಸುತ್ತದೆ.

ಇನ್ನು ಇದೇ ವಿವಾಟೆಕ್ 2025 ಸಮಾರಂಭದಲ್ಲಿ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು AI ಮತ್ತು ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ಭವಿಷ್ಯದ ಕುರಿತು ಮಾತನಾಡಿದರು. ಬೆಂಗಳೂರಿಗೆ ಬಂದ ಈ ಸ್ಥಾನ, ಶ್ರೇಯಾಂಕವು ಕೇವಲ ಒಂದು ಸಂಖ್ಯೆಯಲ್ಲ, ಇದು ಕರ್ನಾಟಕದ ನಾವೀನ್ಯತೆ ಆರ್ಥಿಕತೆಯ ರಚನಾತ್ಮಕ ಸ್ಥಿತಿಸ್ಥಾಪಕತ್ವತೆ ಗುರುತಿಸುತ್ತದೆ ಎಂದರು.

ಬೆಂಗಳೂರಿಗೆ 'ಸ್ಟಾರ್ಟ್ ಅಪ್ ಸಿಟಿ' ಹೆಗ್ಗಳಿಕೆ

ಪ್ಯಾರಿಸ್ (ಶ್ರೇಣಿ 12), ಫಿಲಡೆಲ್ಫಿಯಾ (13), ಮತ್ತು ಸಿಯಾಟಲ್ (15) ನಂತಹ ಜಾಗತಿಕ ಕೇಂದ್ರಗಳೊಂದಿಗೆ ಬೆಂಗಳೂರು ಜೊತೆಗಾಗಿ ನಿಂತಿದೆ ಇದು ಜಾಗತಿಕ ನಾವೀನ್ಯತೆ ಪ್ರವೃತ್ತಿಗಳಲ್ಲಿ ಗಮನಾರ್ಹ ಬದಲಾವಣೆಯನ್ನು ಗುರುತಿಸುತ್ತದೆ. ಬೆಂಗಳೂರು ಈಗ 'ಸ್ಟಾರ್ಟ್ ಅಪ್ ಸಿಟಿ' ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಉದ್ಯಮಶೀಲತೆಯ ಪೂರಕ ವಾತಾವರಣವಿರುವ ಜಗತ್ತಿನ ಟಾಪ್ 20 ನಗರಗಳ ಪಟ್ಟಿಯಲ್ಲಿ ಬೆಂಗಳೂರು 14ನೇ ಸ್ಥಾನಕ್ಕೆ ಏರಿದೆ. ಭಾರತದ ಇನ್ಯಾವ ನಗರವೂ ಟಾಪ್ 20ರ ಪಟ್ಟಿಯಲ್ಲಿ ಇರದೆ, ಬೆಂಗಳೂರು ಮಾತ್ರ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ಮತ್ತು ಬೆಂಗಳೂರು ಈಗ ಜಾಗತಿಕ ಮಟ್ಟದಲ್ಲಿ ಭವ್ಯವಾದ ಹೆಜ್ಜೆಗುರುತುಗಳನ್ನು ಮೂಡಿಸಿದ್ದು ಹೆಮ್ಮೆಯ ಸಂಗತಿ.

ಕರ್ನಾಟಕವನ್ನು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಗೆ ತರುವುದು ಮತ್ತು ಬೆಂಗಳೂರನ್ನು ಜಾಗತಿಕ ಹೆಗ್ಗುರುತನ್ನಾಗಿ ಮಾಡುವುದು ನಮ್ಮ ಗುರಿ.ಈ ಗುರಿ ಸಾಧಿಸುವ ಬದ್ಧತೆ, ಶಿಸ್ತು ಮತ್ತು ಇಚ್ಚಾಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+