ಬೇರೆ ನಗರಗಳಿಗೆ ಹೋಲಿಸಿದರೆ, ಬೆಂಗಳೂರು ಇಂಜಿನಿಯರ್ ಸಂಬಳ ಕಡಿಮೆ: ಆತಂಕ ಹೆಚ್ಚಿಸಿದ AI: ವರದಿ
ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ನುರಿತ ಇಂಜಿನಿಯರ್‌ಗಳ ಗುಂಪೇ ಇದೆ. ಈ ಇಂಜಿನಿಯರ್‌ಗಳು ವಿಶ್ವ ಮಟ್ಟದಲ್ಲಿ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. ಆದರೆ ಈ ಇಂಜಿನಿಯರ್‌ಗಳಿಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ ಎಂಬ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಈಗ ವಿಆರ್‌ಸಿಟಿ (WeAreCity) ವರದಿಯಿಂದ ಬಹಿರಂಗವಾಗಿದೆ.
ವಿಶ್ವ ಮಟ್ಟದಲ್ಲಿ ತನ್ನ ಕೌಶಲ್ಯಗಳಿಂದ ಗುರುತಿಸಿಕೊಂಡಿರುವ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಇಂಜಿನಿಯರ್‌ಗಳು ವಿಶ್ವದ ಬೇರೆ ನಗರಗಳಿಗೆ ಹೋಲಿಸಿದರೆ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಎಐ (AI) ಬಳಕೆಯಿಂದ ಈ ಅಂತರ ಇನ್ನಷ್ಟು ಹೆಚ್ಚಾಗಲಿದೆ ಎಂಬ ಆತಂಕ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಇಂಜಿನಿಯರ್‌ಗಳು ಸರಾಸರಿ ವಾರ್ಷಿಕ ವೇತನ ಸರಾಸರಿ 12 ಸಾವಿರ ಯುಎಸ್ ಡಾಲರ್ ಆಗಿದೆ. ಈ ಸಂಬಳ ಅಮೆರಿಕದಲ್ಲಿನ ಸಿಲಿಕಾನ್ ವ್ಯಾಲಿಯಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳ 10ನೇ ಒಂದು ಭಾಗದ ಸಂಬಳವಾಗಿದೆ. ಸದ್ಯ ಸಿಲಿಕಾನ್ ವ್ಯಾಲಿಯಲ್ಲಿ ವಾರ್ಷಿಕ್ ವೇತನ ಸರಾಸರಿ 1.25 ಸಾವಿರ ಯುಎಸ್ ಡಾಲರ್ ಆಗಿದೆ.
ಬೇರೆ ದೇಶಗಳ ಇಂಜಿನಿಯರ್ ಸಂಬಳ ಎಷ್ಟು?
ವಿಆರ್‌ಸಿಟಿ ವರದಿಯಲ್ಲಿ ಬೇರೆ ದೇಶಗಳಲ್ಲಿ ಇಂಜಿನಿಯರ್‌ಗಳು ಪಡೆಯುವ ಸಂಬಳವನ್ನು ಸಹ ತಿಳಿಸಲಾಗಿದೆ. ಸಿಡಿಯಲ್ಲಿ ($78 ಸಾವಿರ), ಟೆಲ್ ಅವಿವ್ ($77 ಸಾವಿರ), ಟೊರೊಂಟೊ ($75 ಸಾವಿರ), ಮತ್ತು ಲಂಡನ್ನಲ್ಲಿ ($65 ಸಾವಿರ) ಇಂಜಿನಿಯರ್‌ಗಳು ಐದರಿಂದ ಆರು ಪಟ್ಟು ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಇನ್ನು ಟೋಕಿಯೊ ($62 ಸಾವಿರ), ಸಿಯೋಲ್ ($51 ಸಾವಿರ), ಸಿಂಗಾಪುರ ($47 ಸಾವಿರ), ಮತ್ತು ಬೀಜಿಂಗ್ ($46 ಸಾವಿರ) ನಂತಹ ಏಷ್ಯಾದ ನಗರಗಳಲ್ಲಿಯೂ ಬೆಂಗಳೂರಿಗಿಂತ ಹೆಚ್ಚಿನ ಸಂಬಳವನ್ನು ಇಂಜಿನಿಯರ್‌ಗಳು ಪಡೆಯುತ್ತಿದ್ದಾರೆ.
ಬೆಂಗಳೂರು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಪ್ರಮುಖ ಆಕರ್ಷಣೆ. ಈ ನಗರದಲ್ಲಿ ಕೌಶಲ್ಯ ಪೂರಿತ ಇಂಜಿನಿಯರ್‌ಗಳು, ಇಂಗ್ಲಿಷ್ ಬಲ್ಲವರು ಸಾಕಷ್ಟಿದ್ದು ಇಲ್ಲಿನ ಪರಿಸರ ಬೇರೆ ಸಂಸ್ಥೆಗಳಿಗೆ ಕೈ ಬೀಸಿ ಕರೆಯುತ್ತಿದೆ. ಕೋರೊನಾ ಸಾಂಕ್ರಾಮಿಕ ರೋಗ ಬಂದ ಬಳಿಕ, ಎಲ್ಲ ಕ್ಷೇತ್ರದ ಉದ್ಯೋಗದಲ್ಲಿ ಆತಂಕ ಸೃಷ್ಟಿಸಿದೆ. ಇನ್ನು ಎಐ (AI) ಬಳಕೆಯಿಂದ ಉದ್ಯೋಗ ಕಡಿತ ಸಂಭವಿಸಿದೆ. ಭಾರತ ಸಹ ಇದರ ಪರಿಣಾಮನ್ನು ಎದುರಿಸುತ್ತಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಅಮೇಜಾನ್ ಸಿಇಒ ಆಂಡಿ ಜಾಸ್ಸಿ ತನ್ನ ಕಂಪನಿಯ ಸಹ ಉದ್ಯೋಗಿಗಳನ್ನು ಕಡಿತ ಗೊಳಿಸಿದೆ. ಇನ್ನು ಕೃತಕ ಬುದ್ಧಿ ಮತ್ತೆ ಅಳವಡಿಕೆಯಿಂದಾಗಿ, ಉದ್ಯೋಗಗಳ ಕಡಿತ ನಿರೀಕ್ಷಿಸಲಾಗಿದೆ ಎಂದಿದ್ದರು.












Click it and Unblock the Notifications