Copra: ತಿಪಟೂರು ಕೊಬ್ಬರಿ ಬೆಲೆ ಮತ್ತೆ ನಾಗಾಲೋಟದಲ್ಲಿ ಹೆಚ್ಚಳ, ಇಂದಿನ ದರಪಟ್ಟಿ ಹೀಗಿದೆ

ತುಮಕೂರು: ತೆಂಗು ಕೃಷಿಗೆ ಹೆಸರುವಾಸಿಯಾಗಿರುವ ಕಲ್ಪತರು ನಾಡು ತುಮಕೂರು ಜಿಲ್ಲೆ ವ್ಯಾಪ್ತಿಯ ವಿವಿಧ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಏರಿಳಿತ ಮುಂದುವರಿದಿದೆ. ಏಪ್ರಿಲ್ ಮೊದಲ ವಾರದಿಂದ ನಿರಂತರವಾಗಿ ಏರಿಕೆ ಕಂಡಿದ್ದ ತಿಪಟೂರು ಉಂಡೆ ಕೊಬ್ಬರಿ ಬೆಲೆ ಕೆಲವು ದಿನ ಇಳಿಕೆ ಕಂಡಿತ್ತು. ಇದೀಗ ಮತ್ತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದೆ. ಇಂದು ಮೇ 7ರಂದು ವಿವಿಧ ಮಾರುಕಟ್ಟೆಗಳಲ್ಲಿ ಎಷ್ಟಿದೆ ದರ, ಇಲ್ಲಿದೆ ಮಾಹಿತಿ.

ತಿಪಟೂರು ಎಪಿಎಂಸಿ ಮಾರುಕಟ್ಟೆಗೆ ಸಣ್ಣ ಮತ್ತು ದೊಡ್ಡ ರೈತರು ಕೊಬ್ಬರಿ ಸರಬರಾಜು ಮುಂದುವರಿಸಿದ್ದಾರೆ. ಉತ್ತಮ ಬೆಲೆ ಹಿನ್ನೆಲೆ ಕೊಬ್ಬರಿ ಮಾರಾಟ ಭರಾಟೆ ಜೋರಾಗಿದೆ. ಇಂದು ಗುರುವಾರ (ಮೇ 7) ರಂದು ಕೊಬ್ಬರಿ ದರ ನಾಗಾಲೋಟದಲ್ಲಿ ಏರಿದೆ. ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 38,000 ರೂಪಾಯಿಗೆ ಮಾರಾಟವಾಗಿದೆ. ಕನಿಷ್ಠ 32, 500 ರೂಪಾಯಿ ಆಗಿದ್ದು, ಸರಾಸರಿ ದರ 36,711 ರೂಪಾಯಿ ಎಂದು ಎಪಿಎಂಸಿ ವರ್ತಕರು ತಿಳಿಸಿದ್ದಾರೆ.

Copra Prices

ಏಪ್ರಿಲ್ ಮೊದಲ ವಾರದಿಂದ ಏರುಗತಿ

ಇಂದಿನ ಕನಿಷ್ಠ ದರವು ಸಹ ರೈತರಿಗೆ ಲಾಭದಾಯಕ ಬೆಲೆಯೇ ಆಗಿದೆ. ಏಪ್ರಿಲ್ ಮೊದಲ ವಾರದಲ್ಲಿ 28,000 ರೂ.ನಿಂದ 30,000 ರಿಂದ 31,860 ರೂಪಾಯಿಗೆ ಏರಿಕೆ ಕಂಡಿದ್ದ ಕೊಬ್ಬರಿ ದರ ಅಲ್ಲಿಂದ ನಿರಂತರವಾಗಿ ಹೆಚ್ಚುತ್ತಲೇ ಬಂತು. ಈ ಮೂಲಕ ಕೊಬ್ಬರಿ ಬೆಳೆಗಾರರಿಗೆ ಬಂಪರ್ ಲಾಭ ಮಾಡಿಕೊಟ್ಟಿತ್ತು.

IIHR: ರೈತರಿಗೆ ಬಂಪರ್, 'ಅರ್ಕ ಜಾಮುನ್ ಪ್ರೈಡ್, ಅರ್ಕ ಶಿವ' ಹೊಸ ಹಣ್ಣು ತಳಿಗಳ ಲೋಕಾರ್ಪಣೆ
IIHR: ರೈತರಿಗೆ ಬಂಪರ್, 'ಅರ್ಕ ಜಾಮುನ್ ಪ್ರೈಡ್, ಅರ್ಕ ಶಿವ' ಹೊಸ ಹಣ್ಣು ತಳಿಗಳ ಲೋಕಾರ್ಪಣೆ

ಕೆಲವು ದಿನ ಕೊಬ್ಬರಿ ದರ ಕುಸಿತ

ಏಪ್ರಿಲ್ 22ರಂದು ಪ್ರತಿ ಕ್ವಿಂಟಾಲ್ ಕೊಬ್ಬರಿ ಬೆಲೆ 38,000 ರೂಪಾಯಿ ಇತ್ತು. ಅದಾದ ಬಳಿಕ ಕೊಂಚ ದರ ಇಳಿಕೆ ಕಂಡಿತು. ಏಪ್ರಿಲ್ 23 ರಿಂದ ಒಂದೆರಡು ದಿನ 35,000 ಆಸುಪಾಸಿಗೆ ಇಳಿಕೆ ಆಗುವ ಮೂಲಕ ರೈತರಲ್ಲಿ ಅತಂಕ ಮೂಡಿಸಿತ್ತು. ದರ ಇಳಿಕೆಯಲ್ಲಿ ವರ್ತಕರ ಕೈವಾಡ ಇದೆ. ಹಚ್ಚಿನ ಲಾಭ ತಾವು ಮಾಡಿಕೊಳ್ಳಲು ಮುಂದಾಗಿದ್ದರಿಂದ ಬೆಲೆ ಇಳಿಕೆ ಆಗಿತ್ತು ಎಂಬ ಆರೋಪ ಸಹ ಇದೆ. ಇದೀಗ ಮೇ ಮೊದಲ ವಾರ ತಿಪಟೂರು ಕೊಬ್ಬರಿಯು ಮತ್ತೆ ಐತಿಹಾಸಿಕ ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ.

ತಿಪಟೂರು ಕೊಬ್ಬರಿ ರುಚಿ ಹೆಚ್ಚು

ತಿಪಟೂರು ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬೆಳೆದ ಕೊಬ್ಬರಿಯು ದಪ್ಪ ಬರುತ್ತದೆ. ಗುಣಮಟ್ಟದ್ದಾಗಿರುತ್ತದೆ. ಎಣ್ಣೆ ಅಂಶ ಹೆಚ್ಚಿರುವ ಕಾರಣ ರುಚಿ ಹೆಚ್ಚಿರುತ್ತದೆ. ಈ ಕಾರಣಕ್ಕೆ ದಕ್ಷಿಣ ಭಾರತ ಪ್ರದೇಶಗಳು ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಈ ಬಾರಿ ವಿವಿಧ ಕಾರಣಗಳಿಂದಾಗಿ ತೆಂಗು ಉತ್ಪಾದನೆಯಲ್ಲಿ ಕೊಂಚ ಇಳಿಕೆ ಆಗಿದ್ದರಿಂದ ಪೂರೈಕೆ ಕುಸಿಯುತ್ತಿದ್ದಂತೆ ಬೇಡಿಕೆ ಹೆಚ್ಚಾಗಿಯಿತು. ಅದರ ಹಿಂದಯೇ ಬೆಲೆಯು ಏರಿತು. ಇದರಿಂದಾಗಿ ಕೊಬ್ಬರಿಗೆ ಗರಿಷ್ಠ ಬೆಲೆ ಸಿಕ್ಕಿರುವುದು ತೆಂಗು ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ತೆಂಗು ದರ ಎಷ್ಟಿದೆ?

ತಿಪಟೂರು ಎಪಿಎಂಸಿ; ಗರಿಷ್ಠ 38,000 ರೂ.

ತುಮಕೂರು ಮಾರುಕಟ್ಟೆ; ಗರಿಷ್ಠ 36,200 ರೂ.

ಗುಬ್ಬಿ ಮಾರುಕಟ್ಟೆ; ಗರಿಷ್ಠ 30,000 ರೂ.

ತುರುವೆಕೆರೆ; ಗರಿಷ್ಠ 37,500 ರೂ.

ಮಧುಗಿರಿ; ಗರಿಷ್ಠ 16,800 ರೂ.

ಕಡೂರು: ಗರಿಷ್ಠ 20,000 ರೂ.

ಅರಸೀಕೆರೆ ಮಾರುಕಟ್ಟೆ: ಗರಿಷ್ಠ 33,000 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+