RCB Playing 11: ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ 11
RCB Vs LSG IPL 2026: ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಗುರುವಾರ (ಮೇ 7) ನಡೆಯಲಿರುವ ಐಪಿಎಲ್ 2026ರ 50ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಹಾಲಿ ಚಾಂಪಿಯನ್ ಆರ್‌ಸಿಬಿಯನ್ನು ಎದುರಿಸಲಿದೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪಾಯಿಂಟ್ಸ್ ಟೇಬಲ್‌ನಲ್ಲಿ ಎಲ್‌ಎಸ್‌ಜಿ ತಂಡವು ಆಡಿದ 9 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯಗಳಿಸಿ ಕೊನೆಯ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ, ಪ್ಲೇಆಫ್ ಹಾದಿ ಸುಗಮವಾಗಲಿದೆ.

ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಎಡವುತ್ತಿರುವ ಎಲ್‌ಎಸ್‌ಜಿ
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಈಗ ದೊಡ್ಡ ತಲೆನೋವಾಗಿರುವುದು ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿ ಎಡವುತ್ತಿರುವುದು. ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಅವರ ಬ್ಯಾಟಿಂಗ್ ವಿಭಾಗವು ಅಂತಿಮವಾಗಿ ಫಾರ್ಮ್‌ಗೆ ಮರಳಿದ್ದು, 228 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಆದರೆ ಬೌಲಿಂಗ್ ವಿಭಾಗದಲ್ಲಿ ಎಡವಿದ್ದು, ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತ್ತು.
ಮತ್ತೊಂದೆಡೆ ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಇತ್ತೀಚೆಗೆ ಸೋತಿದ್ದರೂ ಸಹ ಬಲಿಷ್ಠವಾಗಿ ಕಾಣುತ್ತಿದೆ. ಇತ್ತೀಚಿನ ಪಂದ್ಯಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳದ ತಂಡದ ಮಧ್ಯಮ ಕ್ರಮಾಂಕದ ಬಗ್ಗೆ ತುಸು ಚಿಂತೆಯಾಗಿದೆ. ಆದರೂ ಎಲ್ಎಸ್‌ಜಿ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ತನ್ನ ಹಳೆಯ ಪ್ಲೇಯಿಂಗ್ 11ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಐಪಿಎಲ್‌ನಲ್ಲಿ ಪಂತ್ ನಾಯಕತ್ವದ ಎಲ್‌ಎಸ್‌ಜಿ ದಾಖಲೆಗಳು
* ಒಟ್ಟು ಪಂದ್ಯಗಳು: 66
* ಗೆಲುವು: 31
* ಸೋಲು: 34
ಐಪಿಎಲ್‌ನಲ್ಲಿ ಪಾಟಿದಾರ್ ನಾಯಕತ್ವದ ಆರ್‌ಸಿಬಿ ದಾಖಲೆಗಳು
* ಒಟ್ಟು ಪಂದ್ಯಗಳು: 25
* ಗೆಲುವು: 17
* ಸೋಲು: 8
7 ಸೋಲುಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈಗ ತೀವ್ರ ಒತ್ತಡದಲ್ಲಿದೆ. ಬ್ಯಾಟಿಂಗ್‌ನಲ್ಲಿನ ಅಸ್ಥಿರತೆ ಮತ್ತು ಪಂದ್ಯಗಳನ್ನು ಸರಿಯಾಗಿ ಮುಗಿಸಲು ಸಾಧ್ಯವಾಗದಿರುವುದು ಅವರ ಅಭಿಯಾನಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಅನುಭವಿ ಆಟಗಾರರಾದ ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ ಅವರು ಕಳೆದ ಪಂದ್ಯದಿಂದ ಉತ್ತಮ ಫಾರ್ಮ್‌ಗೆ ಮರಳಿದ್ದಾರೆ. ಆದರೆ ಐಡೆನ್ ಮಾರ್ಕ್ರಾಮ್, ನಾಯಕ ರಿಷಬ್ ಪಂತ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಇದು ತಂಡಕ್ಕೆ ದೊಡ್ಡ ಆತಂಕವಾಗಿದೆ. ಅಲ್ಲದೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಪದೇ ಪದೇ ಮಾಡುತ್ತಿರುವ ಬದಲಾವಣೆಗಳು ತಂಡದ ಲಯವನ್ನು ತಪ್ಪಿಸಿವೆ.
ಬೌಲಿಂಗ್ ವಿಭಾಗದಲ್ಲಿ ಪ್ರಿನ್ಸ್ ಯಾದವ್ ಮತ್ತು ಮೊಹ್ಸಿನ್ ಖಾನ್ ಈ ಸೀಸನ್‌ನಲ್ಲಿ ವಿಕೆಟ್ ಕಬಳಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ಆದರೆ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಫಾರ್ಮ್‌ನಲ್ಲಿರುವುದು ಮತ್ತು ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸಲು ಸಾಧ್ಯವಾಗದಿರುವುದು ತಂಡಕ್ಕೆ ಭಾರಿ ಹೊಡೆತ ನೀಡಿದೆ. ಈ ನಡುವೆಯೂ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಜಯಗಳಿಸುವ ಭರವಸೆಯಲ್ಲಿದೆ.
ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ಪ್ಲೇಯಿಂಗ್ 11
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್.
ಆರ್‌ಸಿಬಿ ಇಂಪ್ಯಾಕ್ಟ್ ಪ್ಲೇಯರ್‌ಗಳು: ರಸಿಖ್ ದಾರ್ ಸಲಾಮ್, ಜೋರ್ಡಾನ್ ಕಾಕ್ಸ್, ಮಂಗೇಶ್ ಯಾದವ್, ವಿಕ್ಕಿ ಓಸ್ಟ್ವಾಲ್ ಮತ್ತು ವೆಂಕಟೇಶ್ ಅಯ್ಯರ್.
ಎಲ್‌ಎಸ್‌ಜಿ ಸಂಭಾವ್ಯ ಪ್ಲೇಯಿಂಗ್ 11: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಬ್ ಪಂತ್ (ನಾಯಕ, ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ಅಕ್ಷತ್ ರಘುವಂಶಿ, ಹಿಮ್ಮತ್ ಸಿಂಗ್, ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಆವೇಶ್ ಖಾನ್, ಪ್ರಿನ್ಸ್ ಯಾದವ್.
ಎಲ್‌ಎಸ್‌ಜಿ ಇಂಪ್ಯಾಕ್ಟ್ ಪ್ಲೇಯರ್: ಸಿದ್ಧಾರ್ಥ್ ಎಂ, ದಿಗ್ವೇಶ್ ರಾಠಿ, ಮಯಾಂಕ್ ಯಾದವ್, ಶಹಬಾಜ್ ಅಹ್ಮದ್ ಮತ್ತು ಅಬ್ದುಲ್ ಸಮದ್.












Click it and Unblock the Notifications