RCB: ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳು
RCB Vs LGS 2026: ಲಕ್ನೋದ ಏಕನಾ ಸ್ಟೇಡಿಂನಲ್ಲಿ ಗುರುವಾರ (ಮೇ 8) ನಡೆದ ಐಪಿಎಲ್ 2026ರ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 9 ರನ್‌ಗಳಿಂದ ಸೋಲನುಭವಿಸಿತು. ಎಲ್‌ಎಸ್‌ಜಿ ಈ ಭರ್ಜರಿ ಗೆಲುವು ಸಾಧಿಸಕಲು ಪ್ರಮುಖ ಕಾರಣವಾಗಿದ್ದೇ ಮಿಚೆಲ್ ಮಾರ್ಚ್ ಸಿಡಿಸಿದ ಸ್ಫೋಟಕ ಶತಕ ಹಾಗೂ ಪ್ರಿನ್ಸ್ ಯಾದವನ್ ಮಾರಕ ಬೌಲಿಂಗ್ ದಾಳಿ. ಹಾಗಾದ್ರೆ ಆರ್‌ಸಿಬಿ ಸೋಲಿಗೆ ಕಾರಣಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ದ ಆರ್‌ಸಿಬಿ ತಂಡ ನಾಯಕ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಪಂತ್ ನಾಯಕತ್ವದ ಎಲ್‌ಎಸ್‌ಜಿ ನಿಗದಿಪಡಿಸಲಾಗಿದ್ದ 19 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 209 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆದರೆ ಬಳಿಕ ಬ್ಯಾಸ್ ಬೀಸಿದ ಆರ್‌ಸಿಬಿಯು 6 ವಿಕೆಟ್ ನಷ್ಟಕ್ಕೆ 203 ರನ್‌ಗಳನ್ನು ಕಲೆಹಾಕಿ ಸೋಲನುಭವಿಸಿತು.

ಆರ್‌ಸಿಬಿ ವಿರುದ್ಧ ಎಲ್‌ಎಸ್‌ಜಿ ರೋಚಕ ಜಯ
ಮಳೆ ಅಡಚಣೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 213 ರನ್‌ಗಳ ಪರಿಷ್ಕೃತ ಡಿಎಲ್‌ಎಸ್ ಗುರಿಯನ್ನು ಬೆನ್ನಟ್ಟಿ 203/6 ರನ್‌ಗಳಿಗೆ ಸೀಮಿತವಾಯಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ 9 ರನ್‌ಗಳ ರೋಚಕ ಜಯ ಸಾಧಿಸಿತು.
ಎಲ್‌ಎಸ್‌ಜಿ ಪರ ಮಿಂಚಿದ ಮಿಚೆಲ್ ಮಾರ್ಷ್
ಪದೇ ಪದೇ ಮಳೆ ಬಂದ ಕಾರಣ ಪಂದ್ಯವನ್ನು 19 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ಮಿಚೆಲ್ ಮಾರ್ಷ್ ಅವರ ಅದ್ಭುತ ಶತಕದ (111 ರನ್, 56 ಎಸೆತ) ನೆರವಿನಿಂದ 209/3 ರನ್ ಗಳಿಸಿತು. ನಿಕೋಲಸ್ ಪೂರಮ್ 23 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 38 ರನ್ ಸಿಡಿಸಿದರೆ, ನಾಯಕ ರಿಷಬ್ ಪಂತ್ ಕೊನೆಯಲ್ಲಿ ಕೇವಲ 10 ಎಸೆತಗಳಲ್ಲಿ ಅಜೇಯ 32 ರನ್ ಕೊಡುಗೆ ನೀಡಿದರು. ಇದು ಕೂಡ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು.
ದುಬಾರಿಯಾದ ಆರ್‌ಸಿಬಿ ಬೌಲರ್ಸ್
ರಾಯಲ್ ಚಾಲೆಂಜರ್ಸ್ ಪರ ಬೌಲಿಂಗ್ ಮಾಡಿದ ರಸಿಕ್ ದಾರ್ ಸಲಾಂ ನಾಲ್ಕು ಓವರ್ ಎಸೆದು 53 ರನ್ ನೀಡಿದರೆ, ಸ್ಟಾರ್ ಬೌಲರ್ ಜೋಶ್ ಹ್ಯಾಜಲ್‌ವುಡ್ 49 ರನ್ ರನ್ ನೀಡಿ ದುಬಾರಿಯಾದರು. ಇದು ಲಕ್ನೋ ಸೂಪರ್ ಜೈಂಟ್ಸ್ ತಂಡ ಬೃಹತ್ ಮೊತ್ತ ಪೇರಿಸಲು ಪ್ರಮುಖ ಕಾರಣವಾಯಿತು ಎಂದರೆ ತಪ್ಪಾಗಲಾರದು.
ಲಕ್ನೋ ಸೂಪರ್ ಜೈಂಟ್ಸ್ ನೀಡಿದ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ನಾಯಕ ರಜತ್ ಪಾಟಿದಾರ್ ಕೇವಲ 31 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್‌ಗಳ ಸಹಿತ 61 ರನ್ ಗಳಿಸಿದರು. ದೇವದತ್ ಪಡಿಕ್ಕಲ್ 34(25), ಟಿಮ್ ಡೇವಿಡ್ ಕೂಡ 40 (17), ಕೃನಾಲ್ ಪಾಂಡ್ಯ ಅಜೇಯ 28(16), ರೊಮಾರಿಯೋ ಶೆಫರ್ಡ್ ಅಜೇಯ 23(25) ರನ್ ಸಿಡಿಸಿ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಕೊನೆಗೆ ಈ ಪ್ರಯತ್ನ ವಿಫಲವಾಯಿತು.
ಲಕ್ನೋ ಸೂಪರ್ ಜೈಂಟ್ಸ್ ಪರ ಪ್ರಿನ್ಸ್ ಯಾದವ್ 4 ಓವರ್ ಎಸೆದು 33 ರನ್ ನೀಡಿದ 3 ವಿಕೆಟ್ ಪಡೆದರೆ, ಶಹಬಾಜ್ ಅಹ್ಮದ್ 2 ವಿಕೆಟ್ ಪಡೆದು ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನ ಮೂಲಕ ಲಕ್ನೋ ತಂಡ ಸತತ ಆರು ಪಂದ್ಯಗಳ ಸೋಲಿನ ಸರಪಳಿಯನ್ನು ಕಡಿದುಹಾಕಿದ್ದಲ್ಲದೆ ಪ್ಲೇ ಆಫ್ ರೇಸ್‌ನಲ್ಲಿ ಅಲ್ಪಸ್ವಲ್ಪ ಜೀವಂತವಾಗಿ ಉಳಿದಿದೆ. ಅದು ಉಳಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದು ರನ್‌ರೇಟ್‌ನೊಂದಿಗೆ ಟಾಪ್ ನಾಲ್ಕರಲ್ಲಿ ಬಂದರೆ ಮಾತ್ರ.
ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳು
* ಮಿಚೆಲ್ ಮಾರ್ಷ್ ಸ್ಫೋಟಕ ಶತಕ
* ರನ್ ನಿಯಂತ್ರಿಸುವಲ್ಲಿ ವಿಫಲರಾದ ಆರ್‌ಸಿಬಿ ಬೌಲರ್ಸ್
* ದುಬಾರಿಯಾದ ರಸಿಕ್ ದಾರ್, ಜೋಶ್ ಹ್ಯಾಜಲ್‌ವುಡ್
* ಮಳೆಯ ಅಡಚಣೆಯಿಂದಾಗಿ ಪಂದ್ಯದ ಓವರ್‌ಗಳ ಕಡಿತ
* ಡೆತ್ ಓವರ್‌ಗಳಲ್ಲಿ ರಿಷಭ್ ಪಂತ್ ಆರ್ಭಟ
* ಪ್ರಿನ್ಸ್ ಯಾದವ್ ಮಾರಕ ಬೌಲಿಂಗ್ ದಾಳಿ
* ಆರ್‌ಸಿಬಿ ಆರಂಭದಲ್ಲೇ ವಿರಾಟ್, ಬೆಥೆಲ್ ವಿಕೆಟ್ ಕಳೆದುಕೊಂಡಿತು.
* ಮಧ್ಯಮ ಕ್ರಮಾಂಕದ ನಿಧಾನಗತಿಯ ಬ್ಯಾಟಿಂಗ್












Click it and Unblock the Notifications