ಬಿಸಿಲಿನ ಧಗೆಗೆ ಬೇಸಿಗೆ ರಜೆ ವಿಸ್ತರಣೆ

ಬೆಂಗಳೂರು, ಮೇ 29: ಕಲಬುರಗಿ ಹಾಗೂ ಯಾದಗಿರಿಯಲ್ಲಿ ಬಿಸಿಲಿನ ಧಗೆ ದಾರಕ್ಕೇರಿದ ಹಿನ್ನೆಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಮುಂದೂಡಲಾಗಿದೆ.

ಶಾಲೆಗಳು ಈ ಶೈಕ್ಷಣಿಕ ವರ್ಷದಲ್ಲಿ ಮೇ 29ರ ಬದಲಿಗೆ ಜೂನ್ 14ರಿಂದ ಕಾರ್ಯಾರಂಭ ಮಾಡಲಿದೆ. ಈ ಹಿನ್ನೆಲೆಯಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಎಲ್ಲಾ ಚಟುವಟಿಕೆಗಳು ಜೂನ್ ಎರಡನೇ ವಾರದಿಂದಲೇ ಆರಂಭವಾಗಲಿವೆ.

ಈ ಕೊರತೆಯಾದ ಅವಧಿಗಳನ್ನು ಶಾಲಾ ಕೆಲಸದ ದಿನದ ಪ್ರತಿ ಶನಿವಾರಗಳನ್ನು ಪೂರ್ಣ ದಿನಗಳಾಗಿ ಹಾಗೂ ಮಧ್ಯಂತರ ರಜೆಗಳ ದಿನಗಳಲ್ಲಿ ಸರಿದೂಗಿಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.

Reopening of schools in Karnataka to be extended due to heat

ಎರಡೂ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ದಾಟಿದ್ದರಿಂದ ಜಿಲ್ಲಾಡಳಿತವು ಶಾಲಾ ಆರಂಭವನ್ನು ಮುಂದೂಡುವಂತೆ ಮನವಿ ಮಾಡಿತ್ತು. 1 ರಿಂದ 7ನೇ ತರಗತಿವರೆಗಿನ ಜಿಲ್ಲೆಗಳ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಮಾತ್ರ ಇದು ಅನ್ವಯವಾಗಲಿದ್ದು, ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರು ಮಾತ್ರ ಕಡ್ಡಾಯವಾಗಿ ಶಾಲೆಗೆ ಹಾಜರಾಗಲೇಬೇಕಿದೆ.

ಸಾರ್ವಜನಿಕವಾಗಿ ಈ ಬಗ್ಗೆ ಅಹವಾಲು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+