NWKRTC; 'ಚನ್ನಮ್ಮನ ಕಿತ್ತೂರು' ಹೊಸ ಬಸ್ ಘಟಕ ಲೋಕಾರ್ಪಣೆ: ಸಾರಿಗೆಗೆ ಹೊಸ ಚೈತನ್ಯ: ರಾಮಲಿಂಗಾ ರೆಡ್ಡಿ
ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ವ್ಯಾಪ್ತಿಯಲ್ಲಿ ಸಮಗ್ರ ಸಾರಿಗೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸದ್ಯ ಇಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ಘಟಕವು 15 ವಾಹನಗಳ ಬಲದೊಂದಿಗೆ ಕಾರ್ಯಾಚರಣೆ ನಡೆಲಿದೆ. ಒಟ್ಟು ಸುಮಾರು 15 ಮಾರ್ಗಗಳಲ್ಲಿ ವೇಗದೂತ ಬಸ್ ಸಂಚಾರ ಸೇವೆಯನ್ನು ಜನರು ಪಡೆಯಲಿದ್ದಾರೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾಹಿತಿ ನೀಡಿದರು.
NWKRTC ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿನ 5.27 ಕೋಟಿ ರೂಪಾಯಿ ವೆಚ್ಚದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾದ 'ಚನ್ನಮ್ಮನ ಕಿತ್ತೂರು' ನೂತನ ಬಸ್ ಘಟಕವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡಿದರು. ಇದೇ ವೇಳೆ ವೇಗದೂತ ಬಸ್‌ಗಳ ಸಂಚಾರಕ್ಕೂ ಅವರು ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ 15 ವಾಹನಗಳ ಬಲದೊಂದಿಗೆ 15 ವೇಗದೂತ ಅನುಸೂಚಿಗಳನ್ನು ಕಾರ್ಯಾಚರಣೆಗೊಳಿಸಗುತ್ತಿದೆ. ಸದರಿ ಘಟಕದ ವ್ಯಾಪ್ತಿಯೊಳಗೆ 01 ಬಸ್ ನಿಲ್ದಾಣವು ಒಳಗೊಂಡಿದೆ ಎಂದರು.

ಶಿಗ್ಗಾಂವ್, ಹುಬ್ಬಳ್ಳಿ, ಬಾಗಲಕೋಟೆಯಲ್ಲಿ ಅಭಿವೃದ್ಧಿ
ಇತ್ತೀಚೆಗಷ್ಟೇ ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣ ವನ್ನು ರೂ.23.48 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವುದು (ಡಲ್ಟ್ ನ ಅನುದಾನದೊಂದಿಗೆ), ಬಾಗಲಕೋಟೆ ನವನಗರದ ನೂತನ ಬಸ್ ಘಟಕವನ್ನು ಒಟ್ಟು 6.56 ಕೋಟಿ ವೆಚ್ಚದಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ಸ್ಥಾಪನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪಟ್ಟಣದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ನೂತನ ಬಸ್ ಘಟಕ ನಿರ್ಮಾಣ ಮಾಡಲಾಗಿದೆ ಎಂದು ಅವರು ವಿವರಿಸಿದರು.
2000 ಚಾಲನಾ ಸಿಬ್ಬಂದಿ ನೇಮಕಾತಿ
ಮುಂದುವರಿದು ಮಾತನಾಡಿದ ಸಾರಿಗೆ ಸಚಿವರು, 2000 ಚಾಲನಾ ಸಿಬ್ಬಂದಿಗಳ ನೇಮಕಾತಿ ಪೂರ್ಣಗೊಳಿಸಿ, ನೇಮಕಾತಿ ಆದೇಶ ವಿತರಿಸಲಾಗಿದೆ. 2024 ರ ಮಾರ್ಚ್ ತಿಂಗಳಿನಿಂದ ಈವರೆಗೆ ವಿವಿಧ ಹುದ್ದೆಗಳಲ್ಲಿ ಅನುಕಂಪದ ಆಧಾರದ ಮೇಲೆ 158 ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.
ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ದರ್ಜೆ 2 ರ ಅಧಿಕಾರಿಗಳ ಒಟ್ಟು 33 ಹುದ್ದೆಗಳ ನೇರ ನೇಮಕಾತಿಯ ಮತ್ತು ದರ್ಜೆ 2ರ ಅಧಿಕಾರಿಗಳ ಹುದ್ದೆಗಳ ಆಂತರಿಕ ನೇಮಕಾತಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರು ವಿವರಿಸಿದರು.
ಚನ್ನಮ್ಮನ ಕಿತ್ತೂರು ಬಸ್ ಘಟಕ ಉದ್ಘಾಟನೆಗೆ ಸಾಕ್ಷಿಯಾದ ಶಾಸಕ ಬಾಬಾಸಾಹೇಬ ಪಾಟೀಲ್, ಮಾನ್ಯ ಶಾಸಕರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ವಿನಯ ಬಾ. ನಾವಲಗಟ್ಟಿ, NWKRTC ಸಂಸ್ಥೆ ಉಪಾಧ್ಯಕ್ಷ ಸುನೀಲ್ ಹನಮಣ್ಣವರ ಮತ್ತಿತರರುಬಳಿಕ ಸಾರಿಗೆ ಇಲಾಖೆಯಲ್ಲಿ ಅಭಿವೃದ್ಧಿ ವೇಗ ಕಂಡು ಹರ್ಷ ವ್ಯಕ್ತಪಡಿಸಿದರು.













Click it and Unblock the Notifications