ಕರ್ನಾಟಕದಲ್ಲಿ 21794 ಹೊಸ ಕೊರೊನಾ ಪ್ರಕರಣ; 149 ಮಂದಿ ಸಾವು
ಬೆಂಗಳೂರು, ಏಪ್ರಿಲ್ 20: ಕರ್ನಾಟಕದಲ್ಲಿ ಮಂಗಳವಾರ ಬರೋಬ್ಬರಿ 21794 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಾಹಿತಿ ನೀಡಿದೆ. ಒಂದೇ ದಿನ 149 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 13646 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಗಳಲ್ಲಿ 4571 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 1025821 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ 159158 ಸಕ್ರಿಯ ಪ್ರಕರಣಗಳಿವೆ, ಒಟ್ಟು 1198644 ಪ್ರಕರಣಗಳಿವೆ. 751 ಮಂದಿ ಐಸಿಯುನಲ್ಲಿದ್ದಾರೆ.

ಜಿಲ್ಲಾವಾರು ಕೊರೊನಾ ಪ್ರಕರಣ: ಬಾಗಲಕೋಟೆ 125, ಬಳ್ಳಾರಿ 409, ಬೆಳಗಾವಿ 186, ಬೆಂಗಳೂರು ಗ್ರಾಮಾಂತರ 513, ಬೆಂಗಳೂರು ನಗರ 13782, ಬೀದರ್ 151, ಚಾಮರಾಜನಗರ 99, ಚಿಕ್ಕಬಳ್ಳಾಪುರ 217, ಚಿಕ್ಕಮಗಳೂರು 115, ಚಿತ್ರದುರ್ಗ 121, ದಕ್ಷಿಣ ಕನ್ನಡ 482, ದಾವಣಗೆರೆ 136, ಧಾರವಾಡ 288, ಗದಗ 73, ಹಾಸನ 410, ಹಾವೇರಿ 37, ಕಲಬುರಗಿ 818, ಕೊಡಗು 65, ಕೋಲಾರ 284, ಕೊಪ್ಪಳ 103, ಮಂಡ್ಯ 413, ಮೈಸೂರು 699, ರಾಯಚೂರು 243, ರಾಮನಗರ 114, ಶಿವಮೊಗ್ಗ 202, ತುಮಕೂರು 1055, ಉಡುಪಿ 109, ಉತ್ತರ ಕನ್ನಡ 106, ವಿಜಯಪುರ 358, ಯಾದಗಿರಿಯಲ್ಲಿ 84 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.












Click it and Unblock the Notifications