ಪೋಲೆಂಡ್‌ನಲ್ಲಿ ಬಿದ್ದ ರಷ್ಯಾ ಕ್ಷಿಪಣಿ: ನ್ಯಾಟೋ ಕ್ರಮಕ್ಕೆ ಉಕ್ರೇನ್‌ ಪಟ್ಟು

ನವದೆಹಲಿ, ನವೆಂಬರ್ 16: ರಷ್ಯಾ ಮತ್ತು ಉಕ್ರೇನ್ ನಡುವೆ ಸುಮಾರು 9 ತಿಂಗಳ ಕಾಲ ನಡೆಯುತ್ತಿರುವ ಯುದ್ಧದಲ್ಲಿ ಸಾಕಷ್ಟು ಹಾನಿಯಾಗಿದೆ. ಹಲವಾರು ದಾಳಿಗಳಿಂದ ತತ್ತರಿಸಿದ ಉಕ್ರೇನ್ ಯುದ್ಧದಲ್ಲಿ ದೃಢವಾಗಿ ನಿಂತಿದೆ. ಆದರೆ, ರಷ್ಯಾ ಸೈನ್ಯದ ನೈತಿಕತೆಯು ಈಗ ದುರ್ಬಲಗೊಳ್ಳುತ್ತಿದೆ. ಬುಧವಾರ ಮುಂಜಾನೆ ಉಕ್ರೇನ್ ಗಡಿಯಲ್ಲಿರುವ ಪೋಲೆಂಡ್‌ನಲ್ಲಿ ಕ್ಷಿಪಣಿ ಬಿದ್ದಿದೆ. ಈ ಕ್ಷಿಪಣಿ ದಾಳಿಗೆ ಪೋಲೆಂಡ್‌ನ ಹಳ್ಳಿಯ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ. ಪೋಲೆಂಡ್ ನ್ಯಾಟೋ ಸದಸ್ಯ ರಾಷ್ಟ್ರವಾಗಿರುವುದರಿಂದ ಈ ವಿಚಾರವೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ವಿಷಯದ ಬಗ್ಗೆ ನ್ಯಾಟೋ ಸಭೆ ಕೂಡ ನಡೆದಿದ್ದು, ಈ ಸಭೆಯಲ್ಲಿ ಕ್ಷಿಪಣಿ ದಾಳಿ ವಿಷಯದ ಗಂಭೀರತೆಯನ್ನು ಚರ್ಚಿಸಲಾಗಿದೆ.

ಹೌದು, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪೋಲಿಷ್ ಅಧ್ಯಕ್ಷ ಆಂಡ್ರೆಜ್ ಡುಡಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾದ ಕ್ಷಿಪಣಿಗಳಿಂದ ಕೊಲ್ಲಲ್ಪಟ್ಟ ನಾಗರಿಕರ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ರಷ್ಯಾದ ಮೇಲೆ ಕ್ರಮ ಕೈಗೊಳ್ಳುವಂತೆ ನ್ಯಾಟೋ ರಾಷ್ಟ್ರಗಳಿಗೆ ಆಗ್ರಹಿಸಿದ್ದಾರೆ. ರಷ್ಯಾದ ಭಯೋತ್ಪಾದನೆ ಇನ್ನು ಮುಂದೆ ನಮ್ಮ ದೇಶದ ಗಡಿಗಳಿಗೆ ಸೀಮಿತವಾಗಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ನ್ಯಾಟೋ ದೇಶದ ಮೇಲೆ ದಾಳಿ ಗಂಭೀರ ವಿಷಯವಾಗಿದೆ. ಈ ವಿಚಾರದಲ್ಲಿ ರಷ್ಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಟೋಗೆ ಆಗ್ರಹಿಸಿದೆ.

ಪೋಲಿಷ್ ಅಧ್ಯಕ್ಷ ಆಂಡ್ರೆಜ್ ಡುಡಾ ಅವರು 'ರಷ್ಯನ್ ನಿರ್ಮಿತ' ಕ್ಷಿಪಣಿಗಳು ದೇಶದೊಳಗೆ ದಾಳಿ ಮಾಡಿರುವ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕ ಕೂಡ ದಾಳಿಯನ್ನು ಖಂಡಿಸಿತು ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಬಾಲಿಯಲ್ಲಿ G-20 ಸಭೆಯ ಬದಿಯಲ್ಲಿ ಸಮಾಲೋಚನೆಗಾಗಿ ಇಂಡೋನೇಷ್ಯಾದಲ್ಲಿ G7 ಮತ್ತು NATO ನಾಯಕರ ತುರ್ತು ಸಭೆಯನ್ನು ಕರೆದರು.

ಉದ್ದೇಶಪೂರ್ವಕವಾಗಿ ಪ್ರಚೋದಿಸಲಾಗಿದೆ

ಉದ್ದೇಶಪೂರ್ವಕವಾಗಿ ಪ್ರಚೋದಿಸಲಾಗಿದೆ

ಕ್ಷಿಪಣಿ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಿತ್ರರಾಷ್ಟ್ರಗಳೊಂದಿಗೆ ಸಭೆ ನಡೆಸಿದರು. ಇದರ ನಂತರ, ಪೋಲೆಂಡ್ ಪ್ರದೇಶದಲ್ಲಿ ಕ್ಷಿಪಣಿ ದಾಳಿಯ ನಂತರ ಏನಾಯಿತು ಎಂಬುದರ ತನಿಖೆಯಲ್ಲಿ ತಾನು ಸಹಾಯ ಮಾಡುವುದಾಗಿ ಬೈಡೆನ್ ಹೇಳಿದರು. ಆರಂಭಿಕ ಮಾಹಿತಿಯ ಪ್ರಕಾರ, ಈ ಕ್ಷಿಪಣಿಯನ್ನು ರಷ್ಯಾದ ಕಡೆಯಿಂದ ಹಾರಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಪ್ರೆಜ್ವೆಡೋವ್‌ನಲ್ಲಿ ರಷ್ಯಾದ ರಾಕೆಟ್ ಪತನದ ಕುರಿತು ಪೋಲಿಷ್ ಮಾಧ್ಯಮ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಲಾಗುತ್ತಿದೆ ಎಂದು ಬೈಡೆನ್ ಹೇಳಿದರು.

ಪೋಲಿಷ್ ಸೈನ್ಯದಿಂದ ಅಲರ್ಟ್

ಪೋಲಿಷ್ ಸೈನ್ಯದಿಂದ ಅಲರ್ಟ್

ಪ್ರಜೆವೊಡೊವ್ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿದ ನಂತರ ಪೋಲಿಷ್ ಸೈನ್ಯವನ್ನು ಅಲರ್ಟ್ ಮಾಡಲಾಗಿದೆ. ಪೋಲಿಷ್ ಅಧ್ಯಕ್ಷ ಆಂಡ್ರೆಜ್ ಡುಡಾ, ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಬ್ರಿಟಿಷ್ ನೂತನ ಪ್ರಧಾನಿ ರಿಷಿ ಸುನಕ್ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಮಾತನಾಡುವಾಗ ಪೋಲೆಂಡ್ ವಿಶೇಷ ಸಮಾಲೋಚನಾ ನ್ಯಾಟೋ ಸಭೆಯನ್ನು ಕೋರುತ್ತದೆ ಎಂದು ಹೇಳಿದರು.

ಪೋಲೆಂಡ್ ರಾತ್ರಿಯೇ ತುರ್ತು ಸಭೆ

ಪೋಲೆಂಡ್ ರಾತ್ರಿಯೇ ತುರ್ತು ಸಭೆ

ರಷ್ಯಾದ ಕ್ಷಿಪಣಿಯ ಪತನದ ನಂತರ, ಪೋಲೆಂಡ್ ಸರ್ಕಾರವು ರಾತ್ರಿಯೇ ರಕ್ಷಣಾ ಮಂಡಳಿಯ ತುರ್ತು ಸಭೆಯನ್ನು ಕರೆದಿತು. ಪೋಲಿಷ್ ವಿದೇಶಾಂಗ ಸಚಿವಾಲಯ ಕೂಡ ಈ ಸುದ್ದಿಯನ್ನು ದೃಢಪಡಿಸಿದೆ. 'ರಷ್ಯನ್ ನಿರ್ಮಿತ' ಕ್ಷಿಪಣಿಗಳು ದೇಶದೊಳಗೆ ದಾರಿ ತಪ್ಪಿ ಇಬ್ಬರನ್ನು ಕೊಂದ ನಂತರ ವಾರ್ಸಾದಲ್ಲಿನ ಸರ್ಕಾರವು ನ್ಯಾಟೋ ಸದಸ್ಯರ ತುರ್ತು ಸಭೆಯನ್ನು ಕರೆಯಬಹುದು ಎಂದು ಪೋಲಿಷ್ ಅಧ್ಯಕ್ಷ ಆಂಡ್ರೆಜ್ ಡುಡಾ ಹೇಳಿದ್ದಾರೆ. ಕ್ಷಿಪಣಿಯನ್ನು ಉಡಾವಣೆ ಮಾಡಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲ ಆದರೆ ಇದು ರಷ್ಯಾ ನಿರ್ಮಿತವಾಗಿದೆ ಎಂದು ದೂಡಾ ಹೇಳಿದ್ದಾರೆ.

ಈ ಘಟನೆಯನ್ನು ನಿರಾಕರಿಸಿದ ರಷ್ಯಾ

ಈ ಘಟನೆಯನ್ನು ನಿರಾಕರಿಸಿದ ರಷ್ಯಾ

ರಷ್ಯಾದ ರಕ್ಷಣಾ ಸಚಿವಾಲಯವು ಈ ಘಟನೆಯನ್ನು ನಿರಾಕರಿಸಿದೆ. ಈ ಸುದ್ದಿ ಸಂಪೂರ್ಣ ತಪ್ಪು ಎಂದು ರಷ್ಯಾ ಸರ್ಕಾರ ಹೇಳಿದೆ. ಈ ವಿಷಯವನ್ನು ಗಾಳಿಗೆ ತೂರಲು ಇಂತಹ ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ರಷ್ಯಾ ಹೇಳಿದೆ. ರಷ್ಯಾದ ಕ್ಷಿಪಣಿ ದಾಳಿ ಪತನವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಗಳಲ್ಲಿ ಸುದ್ದಿಯಾಗಿದೆ ಆದರೆ, ಕ್ಷಿಪಣಿ ಪತನಕ್ಕೆ ಕಾರಣವೇನು ಎಂದು ತಿಳಿಸಬೇಕೆಂದು ಪೋಲೆಂಡ್ ಸರ್ಕಾರ ಆಗ್ರಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+