ಪಾರ್ಟ್-ಟೈಮ್ ಕೆಲಸದ ಆಸೆಗೆ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ವಿದ್ಯಾರ್ಥಿಗಳಿಗೆ UKಯಲ್ಲಿರುವ ಭಾರತದ ಯುವತಿಯ ಕಿವಿಮಾತು


ವಿದೇಶದಲ್ಲಿ ಓದಬೇಕು, ಮುಂದೆ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಬೇಕು ಎಂಬುದು ಅದೆಷ್ಟೋ ಭಾರತದ ವಿದ್ಯಾರ್ಥಿಗಳ ಕನಸು. ಈ ಕನಸನ್ನಾ ನನಸು ಮಾಡಿಕೊಳ್ಳಲು ವಿದ್ಯಾರ್ಥಿಗಳು ಬ್ರಿಟನ್‌ ಅಂದರೆ ಯುಕೆ, ಅಮೆರಿಕಾದಂತಹ ದೇಶಗಳಿಗೆ ಹೋಗುತ್ತಾರೆ. ಅಲ್ಲಿನ ದುಬಾರಿ ಜೀವನ ವೆಚ್ಚವನ್ನು ನಿರ್ವಹಿಸಲು ಪಾರ್ಟ್‌ ಟೈಮ್‌ ಕೆಲಸಮಾಡಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಲ್ಲಿ ಹೆಚ್ಚದೆ. ಆದರೆ, ಕೇವಲ ದಿನನಿತ್ಯದ ಖರ್ಚು ನಿಭಾಯಿಸಲು ಕೆಲಸಕ್ಕೆ ಸೇರಿ ಮುಂದೇ ಈ ಕೆಲಸಗಳೇ ವಿದ್ಯಾರ್ಥಿಗಳು ಭವಿಷ್ಯಕ್ಕೆ ಮುಳುವಾಗುತ್ತದೆ.

Advertisement

ಹೌದು, ಈ ಕುರಿತು ಯುಕೆಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿ ದ್ರುವಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಾತನಾಡಿರುವ ಈ ದ್ರುವಿ, ಪಾರ್ಟ್ ಟೈಮ್ ಕೆಲಸದ ವ್ಯಾಮೋಹಕ್ಕೆ ಬಿದ್ದು, ತಾವು ವಿದೇಶಕ್ಕೆ ಬಂದ ಮೂಲ ಉದ್ದೇಶವನ್ನ ಮರೆಯುತ್ತಿರುವ ವಿದ್ಯಾರ್ಥಿಗಳಿಗೆ ಕಟು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.

Advertisement

Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದ ಈ ಲೈನ್‌ನಲ್ಲಿ ಮತ್ತೆ ಸಮಸ್ಯೆ, 45 ನಿಮಿಷ ಪ್ರಯಾಣಿಕರ ಪರದಾಟ!

"ಇದನ್ನು ನಾನು ಬಹಳ ದಿನಗಳಿಂದ ಹೇಳಬೇಕೆಂದಿದ್ದೆ. ದಯವಿಟ್ಟು ಪಾರ್ಟ್-ಟೈಮ್ ಕೆಲಸಗಳ ಬಲೆಗೆ ಬೀಳಬೇಡಿ. ನೀವು ವಿದೇಶಕ್ಕೆ ಬಂದ ಉದ್ದೇಶವೇನು ಎಂಬುದನ್ನು ನೆನಪಿಸಿಕೊಳ್ಳಿ," ಎಂದು ಅವರು ವಿನಂತಿಸಿದ್ದಾರೆ.

ನೆಟ್‌ವರ್ಕಿಂಗ್ ಮರೆತರೆ ಉದ್ಯೋಗ ಸಿಗುವುದು ಕಷ್ಟ

ಯುಕೆಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಓದುತ್ತಿರುವ ಈ ವಿದ್ಯಾರ್ಥಿನಿ ಹೆಸರು ದ್ರುವಿ, ಅವರು ಇತ್ತೀಚೆಗೆ ನಡೆದ 'ಸ್ಪೇಸ್ ಪಾರ್ಕ್ ಲೀಸೆಸ್ಟರ್' ಪ್ರಾಜೆಕ್ಟ್ ಶೋಕೇಸ್ ಹಾಗೂ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು. ಇದು ಅವರ ವೃತ್ತಿಜೀವನಕ್ಕೆ ಮತ್ತು ಭವಿಷ್ಯದಲ್ಲಿ ಸಿಗುವ ಉದ್ಯೋಗಕ್ಕೆ ಬೇಕಾದ ಒಂದು ಪ್ರಮುಖವಾದ ಕಾರ್ಯಕ್ರಮವಾಗಿತ್ತು. ಆದರೆ, ಆಶ್ಚರ್ಯವೆಂದರೆ, ಆ ಕಾರ್ಯಕ್ರಮದಲ್ಲಿ ಅವರ ತರಗತಿಯ ಕೇವಲ ಶೇಕಡಾ 1ರಷ್ಟು ವಿದ್ಯಾರ್ಥಿಗಳು ಕೂಡ ಅಲ್ಲಿ ಇರಲೇ ಇಲ್ಲ. "ನನ್ನ ಕ್ಲಾಸ್‌ನಲ್ಲಿ ಒಟ್ಟು 70 ರಿಂದ 80ರಷ್ಟು ವಿದ್ಯಾರ್ಥಿಗಳು ಭಾರತೀಯರೇ. ಆದರೆ ಅಲ್ಲಿ ಯಾರೊಬ್ಬರೂ ಇರಲಿಲ್ಲ.ಅವರೆಲ್ಲರಿಗೂ ತಮ್ಮ ಪಾರ್ಟ್-ಟೈಮ್ ಕೆಲಸವೇ ಮುಖ್ಯವಾಗಿತ್ತು," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ವಿದೇಶದಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಅಥವಾ ಉದ್ಯೋಗ ಪಡೆದುಕೊಳ್ಳಲು 'ನೆಟ್‌ವರ್ಕಿಂಗ್'ಅತ್ಯಂತ ಮುಖ್ಯ. ನಮ್ಮ ಕ್ಷೇತ್ರದ ಪರಿಣತರನ್ನು ಭೇಟಿಯಾಗಿ, ಅವರೊಂದಿಗೆ ಬೆರೆತು, ಸಂಪರ್ಕ ಬೆಳೆಸಿಕೊಳ್ಳದಿದ್ದರೆ ಉದ್ಯೋಗ ಸಿಗುವುದು ತುಂಬ ಕಷ್ಟ ಎಂದು ದ್ರುವಿ ವಿವರಿಸಿದ್ದಾರೆ.

ದೇವಸ್ಥಾನಕ್ಕೆ ನಗ್ನವಾಗಿ ಹೋಗಿ, ದೇವಿ ಮೂರ್ತಿ ಎತ್ತಿದ ಮಾಜಿ ಬೆಂಗಳೂರು ಟೆಕ್ಕಿ, ಸಾವಿಗೆ ಶರಣು

ಪಾರ್ಟ್-ಟೈಮ್ ಕೆಲಸಕ್ಕಾಗಿ ಭವಿಷ್ಯವನ್ನ ಬಲಿ ಕೊಡಬೇಡಿ

ವಿದೇಶದಲ್ಲಿ ಬದುಕಲು ಹಣದ ಅವಶ್ಯಕತೆ ತುಂಬ ಇದೆ, ಹಾಗಾಗಿ ಪಾರ್ಟ್-ಟೈಮ್ ಕೆಲಸ ಮಾಡುವುದು ತಪ್ಪು ಎಂದು ನಾನು ಹೇಳುತ್ತಿಲ್ಲ ಎಂದಿರುವ ದ್ರುವಿ, ತಾವೂ ಕೂಡ ಜೀವನ ನಿರ್ವಹಣೆಗಾಗಿ ಪಾರ್ಟ್-ಟೈಮ್ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆದರೆ, ಉದ್ಯೋಗಕ್ಕೆ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮಗಳು ಬಂದಾಗ ಕೆಲಸವನ್ನು ಬಿಟ್ಟುಬರಬೇಕು ಎನ್ನುವುದು ಅವರ ವಾದ.

Advertisement

"ನಾನು ನನ್ನ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಡ್ಡಿಯಾಗುತ್ತಿದೆ ಎಂಬ ಒಂದೇ ಕಾರಣಕ್ಕೆ ಈವರೆಗೆ ಮೂರು ಪಾರ್ಟ್-ಟೈಮ್ ಕೆಲಸಗಳನ್ನು ಬಿಟ್ಟಿದ್ದೇನೆ," ಎಂದು ದ್ರುವಿ ಹೇಳಿಕೊಂಡಿದ್ದಾರೆ. ಕೇವಲ ಶಿಫ್ಟ್ ಇದೆ, ಕೆಲಸಕ್ಕೆ ಹೋಗಬೇಕು ಎಂಬ ಕಾರಣಕ್ಕೆ ನಿಮ್ಮ ಭವಿಷ್ಯವನ್ನು ರೂಪಿಸುವ ಇಂತಹ ಒಳ್ಳೇಯ ಕಾರ್ಯಕ್ರಮ ತಪ್ಪಿಸಿಕೊಂಡರೆ, ಆ ಪಾರ್ಟ್-ಟೈಮ್ ಕೆಲಸವೇ ಮುಂದೊಂದು ದಿನ ನಿಮ್ಮ ಫುಲ್-ಟೈಮ್ ಕೆಲಸವಾಗಿ ಬದಲಾಗುವ ಅಪಾಯ ಹೆಚ್ಚಿದೆ ಎಂದು ಅವರು ಎಚ್ಚರಿಕೆ ನೋಡಿದ್ದಾರೆ.

ಬೈಕ್‌ನಿಂದ ಅಮೆರಿಕದಲ್ಲಿ BMW ಕಾರು ಖರೀದಿವರೆಗೆ: ವೈರಲಾಯ್ತು ಮಥುರಾ ಯುವಕನ ಯಶಸ್ಸಿನ ಕಥೆ

ವಿದೇಶಕ್ಕೆ ಬಂದ ಉದ್ದೇಶ ಮರೆಯಬೇಡಿ

ನೀವು ಇಲ್ಲಿಗೆ ಶಿಕ್ಷಣ ಸಾಲ ಮಾಡಿ ಬಂದಿದ್ದೀರಿ. ಕೇವಲ ಹಣದ ಹಿಂದೆ ಬಿದ್ದು, ನಿಮ್ಮ ಗುರಿಯನ್ನು ಮರೆತರೆ ಆ ಸಾಲ ತೀರಿಸುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ. ದಯವಿಟ್ಟು ಹೊರಗೆ ಬನ್ನಿ, ನಿಮ್ಮ ಸಂಬಂಧಿಸಿದ ಜನರನ್ನು ಭೇಟಿಯಾಗಿ, ಸಂಪರ್ಕ ಬೆಳೆಸಿಕೊಳ್ಳಿ ಎಂದು ದ್ರುವಿ ವಿದ್ಯಾರ್ಥಿಗಳಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ಹಣ ಸಂಪಾದನೆ ಮುಖ್ಯವೇ ಆದರೂ ಕೂಡ, ಅದು ನಿಮ್ಮ ವೃತ್ತಿಜೀವನದ ಕನಸುಗಳನ್ನು ಬಲಿಕೊಡುವಷ್ಟು ಮುಖ್ಯವಾಗಬಾರದು ಎಂಬುದು ದ್ರುವಿಯ ಮಾತು.

English Summary

ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಾರ್ಟ್-ಟೈಮ್ ಕೆಲಸಗಳ ವ್ಯಾಮೋಹಕ್ಕೆ ಬಿದ್ದು ಭವಿಷ್ಯದ ಗುರಿಯನ್ನು ಮರೆಯಬಾರದು ಎಂದು ಯುಕೆಯಲ್ಲಿರುವ ಭಾರತೀಯ ವಿದ್ಯಾರ್ಥಿನಿ ಹೇಳಿದ್ದಾಳೆ .