Nicholas Pooran: ಐಪಿಎಲ್‌ನಲ್ಲಿ ವಂಡರ್ ಕಿಡ್‌ ವೈಭವ್ ಸೂರ್ಯವಂಶಿ ದಾಖಲೆ ಮುರಿದ ನಿಕೋಲಸ್ ಪೂರನ್

Nicholas Pooran Record: ಮುಂಬೈ ವಾಂಖಡೆ ಕ್ರೀಡಾಂಗಣದಲ್ಲಿ ಸೋಮವಾರ (ಮೇ 04) ನಡೆದ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್‌ ಪಂದ್ಯದಲ್ಲಿ ನಿಕೋಲಸ್ ಪೂರನ್ ಅಬ್ಬರದ ಬ್ಯಾಟಿಂಗ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಅವರು ರಾಜಸ್ಥಾನ್ ರಾಯಲ್ಸ್ ತಂಡದ ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದ ನಿಕೋಲಸ್ ಪೂರನ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಸ್ಫೋಟಕ ಇನಿಂಗ್ಸ್ ಮೂಲಕ ಅವರು ಐಪಿಎಲ್ ಇತಿಹಾಸದ ಪ್ರಮುಖ ಅರ್ಧಶತಕದ ದಾಖಲೆಯೊಂದರಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಮೀರಿಸಿದ್ಧಾರೆ. ಐಪಿಎಲ್ ಇತಿಹಾಸದಲ್ಲಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಬಾರಿ ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಪೂರನ್ ಈಗ ಎರಡನೇ ಸ್ಥಾನಕ್ಕೆ ಏರಿದ್ದಾರೆ.

Nicholas Pooran Record LSG Star Smashes 16-Ball Fifty Surpasses Vaibhav Suryavanshi in IPL 2026

ಐಪಿಎಲ್‌ನಲ್ಲಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಹೆಚ್ಚು ಅರ್ಧಶತಕ ಸಿಡಿಸಿದವರು

* ಅಭಿಷೇಕ್ ಶರ್ಮಾ: 6 ಬಾರಿ
* ನಿಕೋಲಸ್ ಪೂರನ್: 5 ಬಾರಿ
* ವೈಭವ್ ಸೂರ್ಯವಂಶಿ: 4 ಬಾರಿ

ಪೂರನ್‌ ದಾಖಲೆಯ ಸ್ಟ್ರೈಕ್ ರೇಟ್

ಮೇ 4ರಂದು ನಡೆದ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಪೂರನ್ ಕೇವಲ 21 ಎಸೆತಗಳಲ್ಲಿ 1 ಬೌಂಡರಿ, 8 ಸಿಕ್ಸರ್‌ಗಳ ಸಹಿತ 63 ರನ್ ಚಚ್ಚಿದರು. ಅವರ ಸ್ಟ್ರೈಕ್ ರೇಟ್ 300ಕ್ಕೆ ಏರಿರುವುದು ಕೂಡ ವಿಶೇಷವಾಗಿದೆ. ದೀಪಕ್ ಚಾಹರ್ ಎಸೆದ 8ನೇ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅವರು ಈ ದಾಖಲೆಯ ಅರ್ಧಶತಕ ಪೂರೈಸಿದರು. ಜಸ್ಪ್ರೀತ್ ಬುಮ್ರಾ ಅವರಂತಹ ದಿಗ್ಗಜ ಬೌಲರ್‌ಗಳಿದ್ದರೂ ನಿಕೋಲಸ್ ಪೂರನ್ ವಾಂಖೆಡೆ ಮೈದಾನವನ್ನು ತಮ್ಮ ಸಿಕ್ಸರ್‌ಗಳ ತಾಣವನ್ನಾಗಿ ಮಾಡಿಕೊಂಡರು ಅಂದ್ರೆ ತಪ್ಪಾಗಲಾರದು.

ಎಲ್‌ಎಸ್‌ಜಿ ಪರ ಪೂರನ್ ವೇಗದ ಅರ್ಧಶತಕಗಳು

* ಆರ್‌ಸಿಬಿ ವಿರುದ್ಧ 15 ಎಸೆತಗಳಲ್ಲಿ ಅರ್ಧಶತಕ (2023)

* ಮುಂಬೈ ಇಂಡಿಯನ್ಸ್ ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ (2026, ಮೇ 04)

* ಎಸ್‌ಆರ್‌ಎಚ್‌ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ (2025)

ಮುಂಬೈ ಬೌಲರ್‌ಗಳ ಬೆವರಳಿಸಿದ ಪೂರನ್

ಇಂದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್‌ ಬೀಸಿದ ಲಕ್ನೋ ಸೂಪರ್ ಜೈಂಟ್ಸ್‌ ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 288 ರನ್‌ಗಳನ್ನು ಕಲೆಹಾಕಿತು.

ನಿಕೋಲಸ್ ಪೂರನ್ ಈ ಸೀಸನ್‌ನ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದ್ದಾರೆ. ಅವರು ಕೇವಲ 21 ಎಸೆತಗಳಲ್ಲಿ 1 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 63 ರನ್ ಚಚ್ಚುವ ಮೂಲಕ ಸಂಭ್ರಮಿಸಿದರು. ಇವರಿಗೆ ಸಾಥ್ ನೀಡಿದ ಮಿಚೆಲ್ ಮಾರ್ಷ್ 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸ್‌ಗಳೊಂದಿಗೆ 44 ರನ್ ಗಳಿಸಿದರು. ಇವರಿಬ್ಬರ ಜೋಡಿ ಲಕ್ನೋ ತಂಡಕ್ಕೆ 94 ರನ್‌ಗಳ ಮಹತ್ವದ ಜೊತೆಯಾಟವನ್ನು ನೀಡಿದರು. ಉಳಿದಂತೆ ನಾಯಕ ರಿಷಬ್ ಪಂತ್ 15(10) ಏಡನ್ ಮಾರ್ಕ್ರಾಮ್ ಅಜೇಯ 31(25), ಹಿಮ್ಮತ್ ಸಿಂಗ್ ಅಜೇಯ 40(31) ರನ್‌ಗಳ ಕೊಡುಗೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+