BMTC: ಬಿಎಂಟಿಸಿಯಿಂದ ಬೆಂಗಳೂರು - ರಾಮನಗರ - ಚನ್ನಪಟ್ಟಣ ಬಸ್ ಪ್ರಯಾಣಿಕರಿಗೆ ಗುಡ್‌ನ್ಯೂಸ್

BMTC: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಸಂಚರಿಸುತ್ತಿದ್ದ ವಜು ವಿಸ್ತಾರ ಹವಾನಿಯಂತ್ರಿತ ಸಾರಿಗೆ ಸೇವೆಯನ್ನು ಚನ್ನಪಟ್ಟಣದವರೆಗೆ ವಿಸ್ತರಿಸಿದ ಮಾರ್ಗಗಳನ್ನು ಪರಿಚಯಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ 25.0 ಕಿ.ಮೀ. ವರೆಗೆ ಇದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ 40.0 ಕಿ.ಮೀ ವರೆಗೆ ವಿಸ್ತರಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಬೆಂಗಳೂರು - ರಾಮನಗರ - ಚನ್ನಪಟ್ಟಣ ಪ್ರಯಾಣಿಕರಿಗೆ ಗುಡ್‌ನ್ಯೂಸ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ "ವಜ್ರ ವಿಸ್ತಾರ" ಹವಾನಿಯಂತ್ರಿತ ಸಾರಿಗೆಗಳನ್ನು ಮಾರ್ಚ್ 03 ರಿಂದ V-EX-RMN-1 ಮಾರ್ಗದಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರ ಮಾರ್ಗದ ಕಾರ್ಯಾಚರಣೆಯನ್ನು ಕರ್ನಾಟಕ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದ್ದಾರೆ. ರಾಮನಗರಕ್ಕೆ 6 ಬಸ್ಸುಗಳಿಂದ ದಿನಕ್ಕೆ 32 ಟ್ರಿಪ್‌ಗಳು ಸಂಚರಿಸುತ್ತಿದ್ದು ಈ ಮೂಲಕ ಅಂದಾಜು 33,000 ಪ್ರಯಾಣಿಕರು ಈ ಸೇವೆಯ ಸೌಲಭ್ಯ ಪಡೆಯುತ್ತಿದ್ದಾರೆ.

BMTC

ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಈಗಾಗಲೇ ಸಂಚರಿಸುತ್ತಿರುವ ಬಿಎಂಟಿಸಿಯ ವಜ್ರ ವಿಸ್ತಾರ ಹವಾನಿಯಂತ್ರಿತ ಸಾರಿಗೆಗಳನ್ನು ಸಾರ್ವಜನಿಕರ ಬೇಡಿಕೆ ಅನುಗುಣವಾಗಿ, ಚನ್ನಪಟ್ಟಣದವರಿಗೆ ವಿಸ್ತರಿಸಿ, ಮಾರ್ಗಸಂಖ್ಯೆ ವಿ-ಸಿಪಿಟಿ-1ರಲ್ಲಿ 8 ಬಸ್ಸುಗಳಿಂದ ದಿನಕ್ಕೆ 44 ಸುತ್ತುವಳಿಗಳ ಹವಾನಿಯಂತ್ರಿತ ಸಾರಿಗೆಗಳನ್ನು ದಿನಾಂಕ 08.05.2025 ರಿಂದ ಜಾರಿಗೆ ಬರುವಂತೆ ಕಾರ್ಯಾಚರ ಪ್ರಾರಂಭಿಸಲಾಗುವುದು ಎಂದು ಬಿಎಂಟಿಸಿ ಹೇಳಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ಹೊರವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುತ್ತಿದೆ. ಈ ಗುಣಮಟ್ಟವನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವ ಸಲುವಾಗಿ ನಿರಂತರ ಶ್ರಮಿಸುತ್ತಿದೆ ಎಂದು ಬಿಎಂಟಿಸಿ ಹೇಳಿದೆ.

ಈ ನಿಟ್ಟಿನಲ್ಲಿ ಪ್ರಸ್ತುತ 50 ಘಟಕಗಳಿಂದ ವಿವಿಧ ಮಾದರಿಯ ಬಸ್ಸುಗಳಲ್ಲಿ ಪ್ರತಿದಿನ 6275 ಅನುಸೂಚಿಗಳಿಂದ 65,952 ಟ್ರಿಪ್‌ಗಳೊಂದಿಗೆ 13.06 ಲಕ್ಷ ಕಿ.ಮೀ ಗಳಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದ್ದು, ಸರಾಸರಿ 45 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಮಾರ್ಗದಲ್ಲಿ 1757 ಎಲೆಕ್ಟ್ರಿಕ್ ಬಸ್ಸುಗಳ ಸೇವೆ ಇದೆ.

ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 145 ಅನುಸೂಚಿಗಳಿಂದ 1332 ಸುತ್ತುವಳಿಗಳನ್ನು (ಟ್ರಿಪ್‌ಗಳನ್ನು) ಹಾಗೂ ಬಿಡದಿ ವ್ಯಾಪ್ತಿಯಲ್ಲಿ ಒಟ್ಟು 136 ಅನುಸೂಚಿಗಳಿಂದ 1163 ಟ್ರಿಪ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಈಗಾಗಲೇ ಹೊರವಲಯದಲ್ಲಿರುವ ಪ್ರಮುಖ ಪ್ರದೇಶಗಳಾದ ಹಾರೋಹಳ್ಳಿ ಹಾಗೂ ಹಾರೋಹಳ್ಳಿಯಿಂದ ಮುಂದಕ್ಕೆ 58 ಅನುಸೂಚಿಗಳಿಂದ 510 ಚ ಮಾಗಡಿ ವಲಯದಲ್ಲಿ 39 ಅನುಸೂಚಿಗಳಿಂದ 240 ಟ್ರಿಪ್‌ಗಳನ್ನು ಹಾಗೂ ಸೋಲೂರು/ದಾಬಸಪೇಟೆ ವಲಯದಲ್ಲಿ 35 ಅನುಸೂಚಿಗಳಿಂದ 220 ಟ್ರಿಪ್‌ಗಳನ್ನು ಬಿಡಲಾಗಿದೆ.

➢ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ "ವಜ್ರ ವಿಶೇಷ" ಹವಾನಿಯಂತ್ರಿತ ಸಾರಿಗೆಗಳನ್ನು ದಿನಾಂಕ 04-03-2026 ರಿಂದ V-EX-RMN-1 ಮಾರ್ಗದಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರ ಮಾರ್ಗದ ಕಾರ್ಯಾಚರಣೆಯನ್ನು ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರು ಉದ್ಘಾಟಿಸುತ್ತಿದ್ದಾರೆ. ರಾಮನಗರಕ್ಕೆ 6 ಬಸ್ಸುಗಳಿಂದ ದಿನಕ್ಕೆ 32 ಸುತ್ತುವಳಿಗಳು ಸಂಚರಿಸುತ್ತಿದ್ದು, ಈ ಮೂಲಕ ಅಂದಾಜು 33,000 ಪ್ರಯಾಣಿಕರು ಈ ಸೇವೆಯ ಸೌಲಭ್ಯ ಪಡೆಯುತ್ತಿದ್ದಾರೆ.

➢ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಈಗಾಗಲೇ ಸಂಚರಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ "ವಜ್ರ ವಿಶೇಷ" ಹವಾನಿಯಂತ್ರಿತ ಸಾರಿಗೆಗಳನ್ನು ಸಾರ್ವಜನಿಕರ ಬೇಡಿಕೆ ಅನುಗುಣವಾಗಿ, ಚನ್ನಪಟ್ಟಣದವರಿಗೆ ಎಕ್ಸ್‌ಪ್ರೆಸ್‌, ಮಾಗಸಂದ್ರ ಎ-ಸಿಟಿ-1 ರಲ್ಲಿ 08 ಬಸ್ಸುಗಳಿಂದ ದಿನಕ್ಕೆ 44 ಸುತ್ತುವಳಿಗಳ ಹವಾನಿಯಂತ್ರಿತ ಸಾರಿಗೆಗಳನ್ನು ದಿನಾಂಕ 08.05.2025 ರಿಂದ ಜಾರಿಗೆ ಬರುವಂತೆ ಕಾರ್ಯಾಚರಣೆಗೊಳಿಸಲಾಗುವುದು. ವಿವರ ಕೆಳಕಂಡಂತಿದೆ.

➢ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ "ವಜ್ರ ವಿಶೇಷ" ಹವಾನಿಯಂತ್ರಿತ ಸಾರಿಗೆಗಳನ್ನು ದಿನಾಂಕ 04-03-2026 ರಿಂದ V-EX-RMN-1 ಮಾರ್ಗದಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರ ಮಾರ್ಗದ ಕಾರ್ಯಾಚರಣೆಯನ್ನು ಕರ್ನಾಟಕ ಸರ್ಕಾರದ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರು ಉದ್ಘಾಟಿಸುತ್ತಿದ್ದಾರೆ. ರಾಮನಗರಕ್ಕೆ 6 ಬಸ್ಸುಗಳಿಂದ ದಿನಕ್ಕೆ 32 ಸುತ್ತುವಳಿಗಳು ಸಂಚರಿಸುತ್ತಿದ್ದು, ಈ ಮೂಲಕ ಅಂದಾಜು 33,000 ಪ್ರಯಾಣಿಕರು ಈ ಸೇವೆಯ ಸೌಲಭ್ಯ ಪಡೆಯುತ್ತಿದ್ದಾರೆ.

➢ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಈಗಾಗಲೇ ಸಂಚರಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ "ವಜ್ರ ವಿಶೇಷ" ಹವಾನಿಯಂತ್ರಿತ ಸಾರಿಗೆಗಳನ್ನು ಸಾರ್ವಜನಿಕರ ಬೇಡಿಕೆ ಅನುಗುಣವಾಗಿ, ಚನ್ನಪಟ್ಟಣದವರೆಗೆ ಎಕ್ಸ್‌ಪ್ರೆಸ್‌ ಹಾಗೂ ಮಾಗಸಂದ್ರ ಎ-ಸಿಟಿ-1 ರಲ್ಲಿ 08 ಬಸ್ಸುಗಳಿಂದ ದಿನಕ್ಕೆ 44 ಸುತ್ತುವಳಿಗಳ ಹವಾನಿಯಂತ್ರಿತ ಸಾರಿಗೆಗಳನ್ನು ದಿನಾಂಕ 08.05.2025 ರಿಂದ ಜಾರಿಗೆ ಬರುವಂತೆ ಕಾರ್ಯಾಚರಣೆಗೊಳಿಸಲಾಗುವುದು. ವಿವರ ಕೆಳಕಂಡಂತಿದೆ.

ಮಾರ್ಗ ಸಂಖ್ಯೆ CPT-1 ವೇಳಾಪಟ್ಟಿ (ನಿರ್ಮನ ಸಮಯ)
ಕೆಂಪೇಗೌಡ ಬಸ್ ನಿಲ್ದಾಣ ಚನ್ನಪಟ್ಟಣ ಪ್ರಯಾಣ ದರ
(ಜಿ.ಎಸ್.ಟಿ ಮತ್ತು ಟೋಲ್ ಸಹಿತ)

0720, 0750, 0820, 0850, 0920,

0950, 1020, 1115, 1230, 1335,

1415, 1500, 1535, 1610, 1645,

1720, 1800, 1835, 1920, 2000,

2035, 2140


0515, 0545, 0620, 0650,

0735, 0820, 0905, 0935,

1005, 1050, 1130, 1210,

1305, 1400, 1525, 1600,

1620, 1650, 1720, 1755,

1830, 1905

ರೂ.105.00

ಮತ್ತು ರಾಮನಗರ ಬಸ್ ನಿಲ್ದಾಣದಿಂದ ಚನ್ನಪಟ್ಟಣಕ್ಕೆ ಬಸ್ ನಿಲ್ದಾಣದ ಶುಲ್ಕ 25 ರೂ. ನಿಗದಿ ಮಾಡಲಾಗಿದೆ.

ಪಾಸುಗಳ ದರದ ವಿವರಗಳು :

ಪಾಸಿನ ವಿಧ ಪಾಸಿನ ದರ
(ಜಿ.ಎಸ್.ಟಿ ಸೇರಿ)
ದೈನಿಕ ಪಾಸು ರೂ.180/-
ಸಾಪ್ತಾಹಿಕ ಪಾಸು ರೂ.1000/-
ಮಾಸಿಕ ಪಾಸು ರೂ.2700/-

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+