ದುರಹಂಕಾರದ ವರ್ತನೆಯನ್ನು ಯುವಕರು ಸಹಿಸೋಲ್ಲ: ಮೋದಿ

ಷಹಝಾನ್ ಪುರ, ಜುಲೈ 21: 'ದುರಹಂಕಾರ, ಭ್ರಷ್ಟಾಚಾರ ಮತ್ತು ದಬ್ಬಾಳಿಕೆಯ ಸಂಸ್ಕೃತಿಯನ್ನು ಯುವಕರು ಸಹಿಸುವುದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಯಾವುದೇ ಪಕ್ಷದ ಅಥವಾ ವ್ಯಕ್ತಿಯ ಹೆಸರನ್ನೂ ಉಲ್ಲೇಖಿಸದೆ ನರೇಂದ್ರ ಮೋದಿ ಈ ಮಾತನ್ನು ಹೇಳಿದ್ದು, ಉತ್ತರ ಪ್ರದೇಶದ ಷಹಜಹಾನ್ ಪುರದಲ್ಲಿ ನಡೆದ ಕಿಸಾನ್ ಕಲ್ಯಾಣ್ rally ಯಲ್ಲಿ.

'ಇಂದಿನ ಯುವಕರು ಭ್ರಷ್ಟಾಚಾರ, ದುರಹಂಕಾರ ಮತ್ತು ದಬ್ಬಾಳಿಕೆಯ ಸಂಸ್ಕೃತಿಯನ್ನು ಸಹಿಸುವುದಿಲ್ಲ. ಅದು ಸೈಕಲ್(ಸಮಾಜವಾದಿ ಪಕ್ಷ) ಇರಲಿ, ಅಥವಾ ಆನೆ(ಬಹುಜನ ಸಮಾಜವಾದಿ ಪಕ್ಷ)ಯಿರಲಿ, ಅವರ ನಾಟಕೀಯತೆಯನ್ನು ದೇಶ ತಿಳಿದಿದೆ' ಎಂದು ಅವರು ಹೇಳಿದರು.

Youth wont tolerate culture of arrogance, corruption, oppression: PM Modi

ಅವಿಶ್ವಾಸ ನಿರ್ಣಯವನ್ನು ಸಮರ್ಥಿಸಿಕೊಳ್ಳುವ ಬದಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕತ್ತನ್ನು ತಗ್ಗಿಸಿದ್ದಾರೆ ಎಂದು ಹೇಳುವ ಮೂಲಕ ಅಧಿವೇಶನದ ಸಮಯದಲ್ಲಿ ಪ್ರಧಾನಿಯವರನ್ನು ತಬ್ಬಿದ ರಾಹುಲ್ ನಡೆಯನ್ನು ಮೋದಿ ಲೇವಡಿ ಮಾಡಿದ್ದಾರೆ.

ಹಳೆಯ ಸರ್ಕಾರ ಮಾಡಿದ ತಪ್ಪುಗಳನ್ನೆಲ್ಲ ತಿದ್ದಲು ನಾವು ಪ್ರಯತ್ನಿಸುತ್ತಿದ್ದೇವೆ. ಅಧಿಕಾರದಲ್ಲಿದ್ದಾಗ ರೈತರಿಗೆ ಏನನ್ನೂ ಮಾಡದೆ ಈಗ ವಿಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ ಎಂದು ಮೋದಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+