ಹಾಸನದಲ್ಲಿ ಧಾರಾಕಾರ ಮಳೆ: ಸಿಡಿಲಿಗೆ ಇಬ್ಬರು ಬಲಿ
ಹಾಸನ ಜಿಲ್ಲೆಯಲ್ಲಿ ಇಂದು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಸುರಿಯುತ್ತಿದ್ದು, ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದ ಜಯರಾಂ (45), ಮುರಳಿ (35) ಎಂಬುವವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹಾಸನ, ಏಪ್ರಿಲ್ 4: ಸಿಡಿಲು ಬಡಿದು ಇಬ್ಬರು ರೈತರು ಹೊಲದಲ್ಲೇ ಅಸುನೀಗಿದ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಇಂದು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಸುರಿಯುತ್ತಿದ್ದು, ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದ ಜಯರಾಂ (45), ಮುರಳಿ (35) ಎಂಬುವವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕಳೆದ ಕೆಲಸ ದಿನಗಳಿಂದ ಬಿಸಿಲ ಝಳ ತಡೆಯಲಾಗದೆ ಪರಿತಪಿಸಿದ್ದ ಜನತೆಗೆ, ಮಳೆಯ ಸಿಂಚನ ಸಂತಸ ತಂದಿದ್ದರೂ, ಇಬ್ಬರು ರೈತರ ಸಾವಿನಿಂದಾಗಿ ತಾಲೂಕಿನಲ್ಲಿ ದುಃಖ ಮಡುಗಟ್ಟಿದೆ.












Click it and Unblock the Notifications