ಅಣಬೆ ಬೆಳೆಸಿ, ಕೈ ತುಂಬ ಹಣ ಗಳಿಸಿ
ಬೆಂಗಳೂರು, ಮಾ. 17: ನಗರದ ಹುಳಿಮಾವುನಲ್ಲಿರುವ ತೋಟಗಾರಿಕೆ ಇಲಾಖೆಯ ಬಯೋಟೆಕ್ನಾಲಜಿ ಕೇಂದ್ರ ಮಾರ್ಚ್20 ಮತ್ತು 21 ರಂದು ರೈತರು ಹಾಗೂ ಸಾರ್ವಜನಿಕರಿಗಾಗಿ ಅಣಬೆ ಬೇಸಾಯದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು300ರು ಗಳನ್ನು ಪಾವತಿಸಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಸಮನ್ವಯಾಧಿಕಾರಿ) ಹುಳಿಮಾವು, ಬೆಂಗಳೂರು ಇವರ ಕಚೇರಿಯಲ್ಲಿ ಎರಡು ದಿನ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳನ್ನು ದೂ. ಸಂಖ್ಯೆ (080)26582775, 26582784, 97435 55667, 99164 33061 ಅಥವಾ [email protected] ಮೂಲಕ ಪಡೆಯಬಹುದಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications