ನ.16ರಂದು ಮುಧೋಳ ಬಂದ್‌ಗೆ ಕರೆ ಕೊಟ್ಟ ಕಬ್ಬು ಬೆಳೆಗಾರರು
ಬಾಗಲಕೋಟೆ, ನವೆಂಬರ್ 15 : ಕಬ್ಬು ಬೆಳೆಗಾರರು ನವೆಂಬರ್ 16ರಂದು ಮುಧೋಳ ಬಂದ್‌ಗೆ ಕರೆ ನೀಡಿದ್ದಾರೆ. ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಸ್ಥರ ಬಳಿ ಮನವಿಯನ್ನು ಮಾಡಿದ್ದಾರೆ.
ಮುಧೋಳದಲ್ಲಿ ಗುರುವಾರ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಶುಕ್ರವಾರ ಬಂದ್ ನಡೆಸುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿದೆ. ಪಟ್ಟಣದಲ್ಲಿ ಇಂದು ಬೈಕ್ ಜಾಥಾ ನಡೆಸಿ ವ್ಯಾಪಾರಿಗಳ ಬೆಂಬಲವನ್ನು ರೈತರು ಕೇಳಿದ್ದಾರೆ.
ಕಳೆದ 20 ದಿನಗಳಿಂದ ರೈತರು ತಮ್ಮ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆದಿತ್ತು.

ರೈತರಿಗೆ ಬರಬೇಕಿರುವ ಕಬ್ಬಿನ ಬಾಕಿ ನೀಡಬೇಕು. ಪ್ರತಿ ಟನ್ ಕಬ್ಬಿಗೆ 2,500 ರೂ. ಕನಿಷ್ಠ ಬೆಂಬಲ ಬೆಲೆ ಕೊಡಬೇಕು ಎಂದು ರೈತರು ಬೇಡಿಕೆಯನ್ನು ಮುಂದಿಟ್ಟಿದ್ದರು. ಸಕ್ಕರೆ ಕಾರ್ಖಾನೆ ಮಾಲೀಕರು 2 ದಿನಗಳ ಕಾಲಾವಕಾಶ ಕೇಳಿದ್ದರು.
ಆದರೆ, ಕಾರ್ಖಾನೆ ಮಾಲೀಕರು ತಮ್ಮ ನಿಲುವನ್ನು ತಿಳಿಸದ ಹಿನ್ನಲೆಯಲ್ಲಿ ಕಬ್ಬು ಬೆಳೆಗಾರರು ಬಂದ್‌ಗೆ ಕರೆ ನೀಡಿದ್ದಾರೆ. ಬಂದ್ ಕರೆಗೆ ಬೆಂಬಲ ನೀಡಿ ಎಂದು ರೈತರು ಜನರಲ್ಲಿಯೂ ಮನವಿ ಮಾಡಿದ್ದಾರೆ.
ಬೇಡಿಕೆಗಳು
* ಪ್ರತಿ ಟನ್ ಕಬ್ಬಿಗೆ 2,500 ರೂ. ನೀಡಬೇಕು
* ಬಾಕಿ ಇರುವ ಹಣವನ್ನು ತಕ್ಷಣ ರೈತರಿಗೆ ನೀಡಬೇಕು












Click it and Unblock the Notifications