ರೈತರಿಗೆ ಬಂಪರ್: ಪಂಜಾಬ್ ಸರ್ಕಾರದಿಂದ ಧಾನ್ಯಕ್ಕೆ ಕನಿಷ್ಠ ಬೆಂಬಲ ಬೆಲೆ
ಚಂಡೀಗಢ, ಜೂನ್ 13: ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೊದಲ ಬಾರಿಗೆ ಪಂಜಾಬ್ ಸರ್ಕಾರವು ಅನ್ನದಾತರಿಂದೇ ನೇರವಾಗಿ ಧಾನ್ಯವನ್ನು ಖರೀದಿ ಮಾಡುವುದಕ್ಕೆ ಶುರು ಮಾಡಿದೆ. ಪ್ರತಿ ಕ್ವಿಂಟಲ್‌ಗೆ 7,275 ರೂ.ಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಪಂಜಾಬ್ ಸರ್ಕಾರವು ಖರೀದಿಯನ್ನು ಪ್ರಾರಂಭಿಸಿದೆ.
ಪಂಜಾಬಿನ ಲೂಧಿಯಾನ ಜಿಲ್ಲೆಯ ಜಾಗರಾನ್ ಮಂಡಿ (ಧಾನ್ಯ ಮಾರುಕಟ್ಟೆ)ಗೆ ಇಲ್ಲಿಯವರೆಗೆ ಒಟ್ಟು ಬೆಳೆಯ ಶೇ.58ರಷ್ಟು ಧಾನ್ಯವು ಬಂದಿದೆ. ಬೇಸಿಗೆಯ ಧಾನ್ಯದ ಬೆಳೆಯನ್ನು ಪ್ರತಿ ಕ್ವಿಂಟಲ್‌ಗೆ 7,275 ರೂ.ಗಳ ಎಂಎಸ್‌ಪಿಯಲ್ಲಿ ಖರೀದಿಸಲಾಗುತ್ತಿದೆ.
ರಾಜ್ಯದ ರೈತರು ಗೋಧಿ ಕೊಯ್ಲು ಮತ್ತು ಭತ್ತದ ಕೃಷಿಯ ನಡುವೆ ಹೆಚ್ಚುವರಿ ಆದಾಯಕ್ಕೆ ಯೋಜನೆ ಮಾಡಿದ್ದಾರೆ. ಇದರಿಂದ ಎಕರೆಗೆ ಐದು ಕ್ವಿಂಟಾಲ್ ಇಳುವರಿಯೊಂದಿಗೆ ಹೆಚ್ಚುವರಿ ಆದಾಯವಾಗಿ 36,000 ರೂಪಾಯಿ ಪಡೆಯುತ್ತಾರೆ.

ರಾಜ್ಯದಲ್ಲಿ ಧಾನ್ಯದ ಇಳುವರಿ ಪ್ರಮಾಣವೆಷ್ಟು?
ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಮನವಿಗೆ ರೈತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಳೆದ ವರ್ಷ 50,000 ಎಕರೆಗೆ ಹೋಲಿಸಿದರೆ ಈ ವರ್ಷ ಸುಮಾರು ಒಂದು ಲಕ್ಷ ಎಕರೆ ಪ್ರದೇಶದಲ್ಲಿ ಬೇಸಿಗೆ ಧಾನ್ಯ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಈ ವರ್ಷ 4.75 ಲಕ್ಷ ಕ್ವಿಂಟಾಲ್ ಧಾನ್ಯ ಇಳುವರಿ ನಿರೀಕ್ಷಿಸಲಾಗಿದೆ.

ಜುಲೈ ತಿಂಗಳಾಂತ್ಯದವರೆಗೂ ಧಾನ್ಯ ಖರೀದಿ ಪ್ರಕ್ರಿಯೆ
ಪಂಜಾಬ್ ಸರ್ಕಾರವು 2022-23ರ ಮಾರ್ಕೆಟಿಂಗ್ ಸೀಸನ್‌ಗಾಗಿ ಬೇಸಿಗೆ ಮೂಂಗ್ ಮತ್ತು ಇತರ ಲಾಜಿಸ್ಟಿಕ್ ಬೆಂಬಲದ ಸಂಗ್ರಹಣೆ ಮತ್ತು ಸಂಗ್ರಹಣೆಗಾಗಿ ಮಾರ್ಕ್‌ಫೆಡ್ ಮತ್ತು ಸಹಕಾರ ಸಂಘಗಳನ್ನು ರಾಜ್ಯ ನೋಡಲ್ ಏಜೆನ್ಸಿಗಳಾಗಿ ಘೋಷಿಸಿದೆ. ಪಂಜಾಬ್ ಮಂಡಿ ಮಂಡಳಿಯು ಜುಲೈ 31ರವರೆಗೆ ಧಾನ್ಯ ಖರೀದಿಗೆ 40 ಮಂಡಿಗಳಿಗೆ ಸೂಚನೆ ನೀಡಿದೆ. ರೈತರಿಗೆ ಅನುಕೂಲವಾಗುವುದರ ಜೊತೆಗೆ ಧಾನ್ಯ ಖರೀದಿಸಲು ಅಧಿಸೂಚಿತ ಮಂಡಿಗಳಲ್ಲಿ ಮಾರ್ಕ್‌ಫೆಡ್ ಮತ್ತು ಸಹಕಾರಿ ಸಂಘಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

1503 ಕ್ವಿಂಟಾಲ್ ಧಾನ್ಯ ಬೆಳೆಯಲಾಗಿದೆ
ಪಂಜಾಬ್‌ನ ವಿವಿಧ ಮಂಡಿಗಳಿಗೆ ಸುಮಾರು 1,503 ಕ್ವಿಂಟಾಲ್ ಧಾನ್ಯ ಬೆಳೆ ಬಂದಿದ್ದು, ಅದರಲ್ಲಿ ಈಗಾಗಲೇ 878 ಕ್ವಿಂಟಾಲ್ ಧಾನ್ಯವನ್ನು ಖರೀದಿ ಮಾಡಲಾಗಿದೆ. ರಾಜ್ಯದ ಏಜೆನ್ಸಿ ಮಾರ್ಕ್‌ಫೆಡ್ 663 ಕ್ವಿಂಟಾಲ್‌ಗಳನ್ನು ಎಂಎಸ್‌ಪಿ ಮೇಲೆ ಖರೀದಿಸಿದರೆ, ಉಳಿದ 215 ಕ್ವಿಂಟಾಲ್‌ಗಳನ್ನು ಖಾಸಗಿ ಏಜೆನ್ಸಿಗಳು ಎಂಎಸ್‌ಪಿ ಮೇಲೆ ಖರೀದಿಸಿವೆ.

ರೈತರ ಖಾತೆಗೆ ನೇರವಾಗಿ ಹಣ ಜಮಾ
ಪಂಜಾಬ್‌ನ ಮಾರುಕಟ್ಟೆಲ್ಲಿ ಲಗ್ಗೆ ಇಟ್ಟಿರುವ ಒಟ್ಟು 790 ಕ್ವಿಂಟಾಲ್ ಧಾನ್ಯದ ಪೈಕಿ ಶೇ.58ರಷ್ಟು ಧಾನ್ಯವು ಜಾಗರಾನ್ ಮಂಡಿಗೆ ಮಾತ್ರ ಬಂದಿದ್ದು, ನಂತರ ಬರ್ನಾಲಾಗೆ 510 ಕ್ವಿಂಟಾಲ್‌ಗಳ ಆಗಮಿಸಿದೆ. ಜಾಗರಾನ್ ಮಂಡಿಗೆ 790 ಕ್ವಿಂಟಾಲ್ ಬೆಳೆ ಬಂದಿದ್ದು, 555 ಕ್ವಿಂಟಾಲ್ ಅನ್ನು ಸರ್ಕಾರಿ ಮತ್ತು ಖಾಸಗಿ ಏಜೆನ್ಸಿಗಳು ಎಂಎಸ್‌ಪಿ ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸಿವೆ. ಪಂಜಾಬ್ ಸರ್ಕಾರವು ಈಗಾಗಲೇ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಂಗ್ರಹಿಸಿದ ಬೆಳೆಗೆ DBT (ನೇರ ಲಾಭ ವರ್ಗಾವಣೆ) ಅನ್ನು ಜಾರಿಗೆ ತಂದಿದೆ. ಈ ಪಾವತಿಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.












Click it and Unblock the Notifications