ಕಲಬುರಗಿ : ತರಕಾರಿ ಬೆಳೆ ಮಧ್ಯೆ ಗಾಂಜಾ

ಕಲಬುರಗಿ, ನವೆಂಬರ್ 27 : ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯಾಗಾಪೂರ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಹಚ್ಚ ಹಸಿರು ಮೈದಳಿಸಿತ್ತು. ಅದನ್ನು ನೋಡಿದ ಜನರು ಯಾರಪ್ಪ ಈ ರೈತರು ಎಷ್ಟೊಂದು ಚೆನ್ನಾಗಿ ಬೆಳೆ ಬೆಳದಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಆ ಜಮೀನಿನ ಅಸಲಿಯತ್ತನ್ನು ಇಂದು‌(ನವೆಂಬರ್ 27) ಚಿತ್ತಾಪುರ ಠಾಣೆಯ ಸಿಪಿಐ ಶಂಕರಗೌಡ ಪಾಟೀಲರು ಬಯಲು ಮಾಡಿದ್ದಾರೆ.

ಹೌದು ಕೃಷಿ ಜಮೀನಿನಲ್ಲಿ ತರಕಾರಿ ಜತೆ ಗಾಂಜಾ ಬೆಳೆದ ರೈತರ ಜಮೀನಿನ ಮೇಲೆ ದಾಳಿ ನಡೆಸಿದ ಚಿತ್ತಾಪುರ ಠಾಣೆಯ ಸಿಪಿಐ ಶಂಕರಗೌಡ ಹಾಗೂ ಅವರ ಸಿಬ್ಬಂದಿ 74 ಕೆ.ಜಿ ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಜೊತೆಗೆ ಗಾಂಜಾ ಬೆಳದಿದ್ದ ಇಬ್ಬರು ರೈತರನ್ನು ಬಂಧಿಸಿದ್ದಾರೆ.‌

Police sizes 70 k.g's fresh Marijuvana in Kalaburagi

ಮೋನಪ್ಪ ಬೇವಿನಹಳ್ಳಿ, ನೀಲಕಂಠ ಬೇವಿನಹಳ್ಳಿ, ಬಂಧಿತ ಆರೋಪಿಗಳು.‌ ಗಾಂಜಾ ಬೆಳೆದಿದ್ದ ಇನ್ನೂ ಇಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕೂ ಬಲೆ ಬೀಸಲಾಗಿದೆ. ಈ ಬಗ್ಗೆ ವಾಡಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಬೆಳೆಯುವದು ಮತ್ತು ಮಾರಾಟ ಮಾಡುವುದು ಅಕ್ರಮ. ಆದರೂ ಕೆಲವರು ಕೃಷಿ ಜಮೀನಿನಲ್ಲಿ, ಹೊಲದ‌ ಸುತ್ತ ತರಕಾರಿ ಬೆಳೆದು, ಮಧ್ಯದಲ್ಲಿ ಗಾಂಜಾ ಬೆಳೆ ಬೆಳೆದು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+