ಬಾಗಲಕೋಟೆ: ದಾಖಲೆಯ 13.5 ಲಕ್ಷ ರೂ.ಗೆ ಮಾರಾಟವಾಯ್ತು 5 ವರ್ಷದ ಎತ್ತು

ಬಾಗಲಕೋಟೆ, ಜುಲೈ 25: ಮನೆಯಲ್ಲಿ ಸಾಕಿ ಬೆಳೆಸಿದ ಎತ್ತನ್ನು ಹೆಚ್ಚೆಂದರೆ 50 ಸಾವಿರ ಅಥವಾ 1 ಲಕ್ಷ ರೂ.ಪಾಯಿಗೆ ಮಾರಾಟ ಮಾಡಬಹುದು. ತುಂಬಾ ವಿಶೇಷ ಎನಿಸಿದರೆ, ಆಕರ್ಷಕವಾಗಿ ಕಾಣುವ ಜೋಡೆತ್ತುಗಳಿಗೆ 2 ರಿಂದ 10 ಲಕ್ಷ ರೂಗಳಿಗೆ ಮಾರಾಟವಾಗಿರುವ ನಿದರ್ಶನಗಳುಂಟು, ಆದರೆ ಒಂದೇ ಎತ್ತು 13 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ ಎಂದರೆ ನಂಬಲೇಬೇಕು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ರೈತನೋರ್ವ ಸಾಕಿದ ಎತ್ತನ್ನು ದಾಖಲೆಯ ಬರೋಬ್ಬರಿ 13.5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ದಾಖಲೆ ಬೆಲೆಗೆ ಮಾರಾಟವಾಗಿರುವ ಎತ್ತು ಹಲವಾರು ತೆರೆದ(ಕರ) ಬಂಡಿ ಸ್ಪರ್ಧೆಯಲ್ಲಿ ಗೆಲುವಿಗೆ ಕಾರಣವಾಗಿದೆ.

'ರಾಜ' ಹೆಸರಿನ ಈ ಎತ್ತನ್ನು ಕೇವಲ ಏಳು ತಿಂಗಳ ಹಿಂದೆ ನಾವಲಗಿ ಗ್ರಾಮದ ಹೊಳೆಪ್ಪ ಸಂಗಪ್ಪ ಎಂಬ ರೈತ 1 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರು. ಸಂಗಪ್ಪ ಕಾಮನವರ ಈ ಎತ್ತನ್ನು ಜೋಪಾನವಾಗಿ ಸಾಕಿ ಸಲುಹಿದ್ದರು. ಇದೀಗ ಅದೇ ಎತ್ತು ಅವರಿಗೆ ಬಂಪರ್ ಲಾಟರಿ ತಂದುಕೊಟ್ಟಿದೆ. ಎತ್ತಿಗೆ ಈಗ 5 ವರ್ಷವಾಗಿದ್ದು, ಮುಧೋಳ ತಾಲೂಕಿನ ವಂಟಗೂಡಿ ಗ್ರಾಮದ ರೈತ ಭೀಮಶಿ ಐನಾಪುರ ಎಂಬುವರಿಗೆ ಮಾರಾಟ ಮಾಡಲಾಗಿದೆ.

Ox Sold to record Price of 13.5 lakh at Bagalkot

'ರಾಜ' ಕಳೆದ ಏಳು ತಿಂಗಳಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತೆರೆದ(ಕರ) ಬಂಡಿ ಜಗ್ಗುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಸ್ಪರ್ಧೆಯಲ್ಲಿ ಭಾಗಿಯಾದರೆ ರಾಜನಿಗೆ ಬಹುಮಾನ ಕಟ್ಟಿಟ್ಟ ಬುತ್ತಿ. ಏಳು ತಿಂಗಳಲ್ಲಿ ಅಂದಾಜು 3 ಲಕ್ಷಕ್ಕೂ ಅಧಿಕ ಹಣವನ್ನು ಮಾಲೀಕನಿಗೆ ಬಹುಮಾನವಾಗಿಯೇ ಗೆದ್ದು ಕೊಟ್ಟಿದೆ. ಇದೇ ಕಾರಣದಿಂದ ಈ ಎತ್ತನ್ನು ಬರೋಬ್ಬರಿ 13.5 ಲಕ್ಷ ರೂ. ಕೊಟ್ಟು ಖರೀದಿಸಲಾಗಿದೆ.

ಬುಧವಾರ ನಾವಲಗಿ ಗ್ರಾಮಸ್ಥರು ಅದ್ದೂರಿ ಮೆರವಣಿಗೆ ಮಾಡಿ, ಪೂಜೆ ಮಾಡಿ ಪ್ರೀತಿಯ ರಾಜನನ್ನು ಬೀಳ್ಕೊಟ್ಟಿದ್ದಾರೆ. ಗ್ರಾಮದಲ್ಲಿ ವಾದ್ಯ, ವೈಭವಗಳೊಂದಿಗೆ ಎತ್ತನ್ನು ಮೆರವಣಿಗೆ ಮಾಡಿದ್ದಾರೆ.

Ox Sold to record Price of 13.5 lakh at Bagalkot

11.50 ಲಕ್ಷಕ್ಕೆ ಮಾರಾಟವಾಗಿದ್ದ 'ಸೂರ್ಯ'; ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲೂ ಸೂರ್ಯ ಎಂಬ ಕಿಲಾರಿ ಎತ್ತನ್ನು ಕೆಲವು ದಿನಗಳ ಹಿಂದೆಯಷ್ಟೇ ದಾಖಲೆಯ ಬರೋಬ್ಬರಿ 11.50 ಲಕ್ಷ ರೂ. ಗೆ ಮಾರಾಟ ಮಾಡಿದ್ದರು. ತೆರೆದ ಬಂಡಿ ಎತ್ತಿನ ಸ್ಪರ್ಧೆಯಲ್ಲಿ ಈ ಎತ್ತು ಗೆಲುವು ಸಾಧಿಸಿತ್ತು. ರೈತನೋರ್ವ ಈ ಎತ್ತನ್ನು ಆರು ವರ್ಷಗಳ ಹಿಂದೆ 45 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದರು.

ಕುರಿಗೆ ಒಂದೂವರೆ ಲಕ್ಷ; ಇತ್ತೀಚೆಗೆ ಮಂಡ್ಯದಲ್ಲಿ ಒಬ್ಬ ರೈತ ಸಾಮಾನ್ಯವಾಗಿ 30-40 ಸಾವಿರ ಮಾರಾಟವಾಗುವ ಕುರಿಯೊಂದನ್ನು ಬರೋಬ್ಬರಿ 1.5 ಲಕ್ಷಕ್ಕೆ ಮಾರಾಟ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಕುರಿ ಸಾಕಾಣಿಕ ಕೇಂದ್ರದಲ್ಲಿ ಮುಬಾರಕ್‌ ಎಂಬಾತ 1.5 ಲಕ್ಷ ರೂ ನೀಡಿ ಕುರಿಯನ್ನು ಖರೀದಿಸಿದ್ದರು. ವಿಶೇಷವೆಂದರೆ ಅದೇ ಕೇಂದ್ರದಲ್ಲಿ ಕೆಲವೊಂದು ಕುರಿ 3 ಲಕ್ಷದವರೆಗೂ ಮಾರಾಟವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+