ಸೀತೆಗೂ ಇಷ್ಟವಾಗಿದ್ದ ಆರ್ಕಿಡ್ ಹೂ ಬೆಳೆಯುವುದು ಹೇಗೆ?
ಆರ್ಕಿಡ್ ಈಗ ಪುಷ್ಪ ಪ್ರೇಮಿಗಳಿಗೆ ಅಚ್ಚುಮೆಚ್ಚಾಗುತ್ತಿದ್ದು, ಮನೆಯಂಗಳದಲ್ಲಿ ಅರಳಿ ನಳನಳಿಸಲು ಆರಂಭಿಸಿದೆ. ಬಹಳಷ್ಟು ಮಂದಿ ಇದನ್ನು ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿ ಹೊಂದಿದ ಆರ್ಕಿಡ್ ತಳಿಗಳು ವಿವಿಧ ಬಗೆಯ ಹೂ ಬಿಟ್ಟು ಹೂತೋಟದ ಅಂದವನ್ನು ಹೆಚ್ಚಿಸುತ್ತಿವೆ.
ಮೊದಲೆಲ್ಲ ಆರ್ಕಿಡ್ ಬೆಳೆಯುವುದು ಕಷ್ಟದ ಕೆಲಸವೆಂದು ಬಹಳಷ್ಟು ಮಂದಿ ಅದರಿಂದ ದೂರ ಉಳಿದಿದ್ದರು. ಕೆಲವರು ಮಲೆನಾಡಿನ ಮರಗಳ ಕೊಂಬೆಗಳಲ್ಲಿ ಬೆಳೆದು ನಿಂತಿದ್ದ ಗಿಡಗಳನ್ನು ತಂದು ಮನೆಯಂಗಳದಲ್ಲಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದರು. ಆದರೆ ಈಗ ಆರ್ಕಿಡ್ ಬೆಳೆಯೋದು ಮೊದಲಿನಷ್ಟು ಕಷ್ಟವಲ್ಲ ಎಂಬುದನ್ನು ಹಲವರು ಬೆಳೆದು ತೋರಿಸಿಕೊಟ್ಟಿದ್ದಾರೆ.

ಸಾಮಾನ್ಯವಾಗಿ ಮಲೆನಾಡಿನಲ್ಲಿ ಬಂಡೆಕಲ್ಲುಗಳ, ಮರಗಳ ಮೇಲೆ ಆರ್ಕಿಡ್ ಕಾಣ ಸಿಗುತ್ತವೆ. ಈ ಹೂವಿನೊಂದಿಗೆ ಭಾವನಾತ್ಮಕ ಸಂಬಂಧವೂ ಇದೆ. ಇದು ವನವಾಸದಲ್ಲಿದ್ದ ಸೀತೆಗೆ ಅಚ್ಚು ಮೆಚ್ಚಾಗಿತ್ತೆಂದೂ ಹೇಳಲಾಗುತ್ತಿದ್ದು, ಹೀಗಾಗಿ ಕೆಲವರು ಇವತ್ತಿಗೂ ಈ ಹೂವನ್ನು ಸೀತೆಹೂ, ಸೀತಾಳೆ ದಂಡೆ ಎಂದು ಕರೆಯುತ್ತಾರೆ.
ಆರ್ಕಿಡೇಸಿಯ ಕುಟುಂಬಕ್ಕೆ ಸೇರಿದ ಸಸ್ಯ; ವೈಜ್ಞಾನಿಕವಾಗಿ ನೋಡಿದರೆ ಇದು ಆರ್ಕಿಡೇಸಿಯ ಕುಟುಂಬಕ್ಕೆ ಸೇರಿದ ಹೂಗಿಡವಾಗಿದೆ. ಬಹುವಾರ್ಷಿಕ ಪರ್ಣ ಸಸ್ಯವಾಗಿರುವ ಆರ್ಕಿಡ್ ಕುಟುಂಬದಲ್ಲಿ ಸುಮಾರು 56 ಸಾವಿರಕ್ಕೂ ಹೆಚ್ಚು ಹೂ ಬಿಡುವಂತಹ ಸಸ್ಯಗಳಿದ್ದು, ಮೂವತ್ತು ಸಾವಿರ ಪ್ರಭೇಧಗಳಿವೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಕಾಡಿನಲ್ಲಿ ಸ್ವೇಚ್ಛೆಯಾಗಿ ಬೆಳೆಯುವ ಜಾತಿಯ ಸಸ್ಯಗಳ ಸಂಖ್ಯೆ ಮೂವತ್ತೆರಡು ಸಾವಿರವಂತೆ.
ಆರ್ಕಿಡ್ ಬಗ್ಗೆ ಹೇಳಬೇಕೆಂದರೆ ಇವು ಎಲ್ಲಾ ವಲಯಗಳಲ್ಲಿ ಬೆಳೆಯುತ್ತವೆಯಾದರೂ ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಆರ್ಕಿಡ್‌ಗಳಲ್ಲಿ ಒಂದು ಸಸ್ಯದಿಂದ ಮತ್ತೊಂದು ಸಸ್ಯಕ್ಕೆ ಹೂ ಎಲೆ ಆಕಾರಗಳಲ್ಲಿಯೂ ವೈವಿಧ್ಯತೆ ಇರುವುದು ಕಂಡು ಬರುತ್ತದೆ. ಇದರ ಬಗ್ಗೆ ತಿಳಿಯುತ್ತಾ ಹೋದರೆ ಒಂದಷ್ಟು ಆಸಕ್ತಿಕರ ಮಾಹಿತಿಗಳು ಲಭ್ಯವಾಗುತ್ತವೆ.
ಸಸ್ಯ ವಿಜ್ಞಾನಿ ಲಿನಯಸ್ ಎಂಬಾತ ಆರ್ಕಿಡ್‌ನ್ನು ಶಾಸ್ತ್ರೋಕ್ತವಾಗಿ ಆರಂಭಿಸಿದವರಲ್ಲಿ ಮೊದಲನೆಯವನಾಗಿದ್ದು, ನಂತರ ಒಕ್ಸ್‌ಎಮ್ಸ್, ಲಿಬರ್ಟಿಹೈಡ್ ಬೈಲೆ, ಬೆಂತಮ್ ಮತ್ತು ಹೂಕರ್, ಫಿಟ್‌ಜರ್ ಮತ್ತು ಸ್ಕ್ಲಿಟ್‌ಜರ್ ಮುಂತಾದವರು ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ.
ಆರ್ಕಿಡ್‌ಗಳನ್ನು ಬೀಜ, ಬೇರು, ತುಂಡು ಅಥವಾ ನಕಲಿ ಲಶುನಗಳಿಂದ ವೃದ್ಧಿ ಮಾಡಬಹುದಾಗಿದೆ. ಸಸ್ಯಾಭಿವೃದ್ಧಿ ಸಾಮಾನ್ಯವಾಗಿ ಆಯಾಯ ಜಾತಿಯ ಮೇಲೆ ಅವಲಂಬಿತವಾಗಿದೆ. ಆರ್ಕಿಡ್‌ಗಳನ್ನು ಕೃಷಿಗೆ ಉಪಯೋಗಿಸಲು ಅವು ಸುಪ್ತಾವಸ್ಥೆಯಲ್ಲಿರುವ ಕಾಲವು ಯೋಗ್ಯವಾಗಿದ್ದು, ಮಧ್ಯೆ ಸುಪ್ತಾವಸ್ಥೆ ಕಾಲದಲ್ಲಿ ಈ ಆರ್ಕಿಡ್‌ಗಳನ್ನು ಬೇರೆ ಸ್ಥಳಗಳಿಗೆ ಸಾಗಿಸಿ ಸುಲಭವಾಗಿ ವೃದ್ಧಿಸಬಹುದಾಗಿದೆ.
ಆರ್ಕಿಡ್‌ನಲ್ಲಿ ನಾಲ್ಕು ಗುಂಪುಗಳು; ಆರ್ಕಿಡ್‌ಗಳನ್ನು ನೆಡಲು ಉಪಯೋಗಿಸುವ ಮೊದಲು ಬೇರು, ಕಾಂಡ ಅಥವಾ ನಕಲಿ ಲಶುನಗಳನ್ನು ಶುದ್ಧ ಮಾಡಿ ಅವುಗಳಲ್ಲಿರುವ ರೋಗ ಪೀಡಿತ ಮತ್ತು ಒಣಗಿದ ಭಾಗಗಳನ್ನು ತೆಗೆಯಬೇಕು ಹಾಗೂ ತೇವ ಮಾಡಿದ ಸ್ಪಂಜಿನಿಂದ ಒರೆಸಿ ಕೆಲವು ದಿನಗಳ ಕಾಲ ತೇವಾಂಶವಿರುವ ಸ್ಥಳಗಳಲ್ಲಿ ತೂಗು ಹಾಕಬೇಕಾಗುತ್ತದೆ. ಆರ್ಕಿಡ್‌ಗಳನ್ನು ಅವು ಬೆಳೆಯುವ ಗುಣಗಳ ಆಧಾರದ ಮೇಲೆ ನಾಲ್ಕು ಗುಂಪುಗಳನ್ನಾಗಿ ಮಾಡಲಾಗಿದೆ.
ಅಪ್ಪು ಸಸ್ಯಗಳು, ಶಿಲಾ ಸಸ್ಯಗಳು, ಪ್ರತಿ ಜನ್ಯ ಸಸ್ಯಗಳು ಹಾಗೂ ನೆಲಸಸ್ಯಗಳು. ಪ್ರತಿಜನ್ಯ ಗುಂಪಿಗೆ ಸೇರಿದ ಆರ್ಕಿಡ್‌ಗಳನ್ನು ಒಣ ಮರದ ತುಂಡಿನಲ್ಲಿ ಬೆಳೆಸಬಹುದಾಗಿದೆ. ನೆಲಸಸ್ಯಗಳನ್ನು ಕುಂಡದಲ್ಲಿ ಬೆಳೆಸಲು ಸಾಧ್ಯವಿದೆ. ಕುಂಡದಲ್ಲಿ ಬೆಳೆಸಲು ತೊಡಗುವವರು ಕುಂಡದ ತಳಭಾಗದಲ್ಲಿ ಅನೇಕ ರಂಧ್ರ ಮಾಡಬೇಕು.
ಆರ್ಕಿಡ್ ಬೆಳೆಸುವ ವಿಧಾನ ಹೇಗೆ?; ರಂಧ್ರದ ಮೇಲೆ ತೆಂಗಿನನಾರು ಅಥವಾ ಪಾಚಿಯನ್ನು ಹಾಕಬೇಕು. ನಾಲ್ಕು ಭಾಗ ಒಣ ಪಾಚಿ, ಎರಡು ಭಾಗ ಸಣ್ಣ ಇಟ್ಟಿಗೆ ಚೂರು, ಒಂದು ಭಾಗ ಗೋಡು ಮಣ್ಣು, ಒಂದು ಭಾಗ ಇದ್ದಿಲು ಪುಡಿ, ಒಂದು ಭಾಗ ಎಲೆಗೊಬ್ಬರದ ಮಿಶ್ರಣ ಮಾಡಿ ಕುಂಡಗಳಿಗೆ ತುಂಬಬೇಕು. ನಂತರ ಗಿಡನೆಟ್ಟು ತೇವಾಂಶ ನೋಡಿಕೊಂಡು ನೀರು ಹಾಕಬೇಕು.
ಆರ್ಕಿಡ್‌ಗಳ ಬೆಳವಣಿಗೆಯಲ್ಲಿ ಹಲವು ವೈವಿಧ್ಯತೆಯಿದ್ದು, ಮಳೆಗಾಲದಲ್ಲಿ ಬೆಳವಣಿಗೆಯನ್ನು ಆರಂಭಿಸುತ್ತವೆ. ಇದು ಬೆಳವಣಿಗೆಯ ಮೊದಲ ಹಂತವಾಗಿದೆ. ಈ ಹಂತದಲ್ಲಿ ಇವುಗಳು ನೀರು ಮತ್ತು ಆಹಾರವನ್ನು ನಕಲಿ ಲಶುನಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಎರಡನೆಯ ಹಂತ ನವೆಂಬರ್-ಮಾರ್ಚ್ ತಿಂಗಳ ಒಳಗಿನದ್ದಾಗಿದ್ದು, ಈ ಹಂತದಲ್ಲಿ ಸುಪ್ತಾವಸ್ಥೆಯನ್ನು ಮುಟ್ಟುತ್ತವೆ. ಕೊನೆಯ ಹಂತದಲ್ಲಿ ಸುಪ್ತಾವಸ್ಥೆಯಿಂದ ಹೊರಬಂದು ಹೂ ಬಿಡಲು ಪ್ರಾರಂಭಿಸುತ್ತವೆ.
ಗಿಡಗಳನ್ನು ಕುಂಡದಿಂದ ವರ್ಷಕ್ಕೊಮ್ಮೆ ಬದಲಾಯಿಸಬೇಕು. ಕೆಲವು ಆರ್ಕಿಡ್‌ಗಳು ಸರಾಗವಾದ ಬಿಸಿಲು ಗಾಳಿಯನ್ನು ಹೊಂದಿಕೊಂಡು ಬೆಳೆಯುತ್ತವೆಯಾದರೂ ಮತ್ತೆ ಕೆಲವು ನೇರ ಬಿಸಿಲನ್ನು ಸಹಿಸುವುದಿಲ್ಲ. ಆರ್ಕಿಡ್‌ಗಳಿಗೆ ರೋಗ ಇಲ್ಲವೆನ್ನಬಹುದಾದರೂ ಇದರ ಹೂಗಳಿಗೆ ನುಸಿ, ಜೇಡರ ಹುಳ, ಗೊಂಡೆ ಹುಳ, ಬಸವನ ಹುಳು, ಬಿಳಿ ತಿಗಣೆ ಮುಂತಾದವುಗಳು ತೊಂದರೆ ನೀಡುತ್ತವೆಯಾದರೂ ಇವುಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ರಕ್ಷಿಸಬಹುದಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಆರ್ಕಿಡ್ ಕೃಷಿ ಜನಪ್ರಿಯವಾಗುತ್ತಿದ್ದು, ಕೇವಲ ಮನೆಯ ಅಲಂಕಾರ ಮಾತ್ರವಲ್ಲದೆ, ಗಿಡಗಳನ್ನು ಮಾರಾಟ ಮಾಡಿ ಆದಾಯವನ್ನು ಕೂಡ ಪಡೆಯಲು ಅವಕಾಶವಿದೆ. ಮನೆಯ ಹಿತ್ತಲಲ್ಲಿ ಖಾಲಿ ಜಾಗವಿದ್ದರೆ ಅಥವಾ ತಾರಸಿ ಮೇಲೆಯೂ ಇದನ್ನು ಬೆಳೆಯಲು ಸಾಧ್ಯವಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications