ಹುಬ್ಬಳ್ಳಿಯಲ್ಲಿ ಸಂತ್ರಸ್ತರ ಬಳಿಯೇ ಹಣ ವಸೂಲಿಗೆ ಇಳಿದ ಅಧಿಕಾರಿಗಳು

ಹುಬ್ಬಳ್ಳಿ, ಅಕ್ಟೋಬರ್ 11: ಪ್ರವಾಹದ ಪರಿಣಾಮದಿಂದ ಬೇಸತ್ತು, ತಮ್ಮ ಪರಿಹಾರ ಹಣಕ್ಕಾಗಿ ಸಂತ್ರಸ್ತರು ಪರದಾಡುತ್ತಿದ್ದಾರೆ. ಆದರೆ ಇಂಥ ಸಂದರ್ಭದಲ್ಲೂ ಅಧಿಕಾರಿಗಳು ಸಂತ್ರಸ್ತರೊಂದಿಗೆ ಹಣ ವಸೂಲಿಗೆ ಇಳಿದಿದ್ದಾರೆ.

ಸಂತ್ರಸ್ತರಿಗೆ ಪರಿಹಾರ ಕೊಡಲು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ರೈತರ ಬಳಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಕುಂದಗೋಳದಲ್ಲಿ ಬಯಲಿಗೆ ಬಂದಿದೆ. ಪರಿಹಾರಕ್ಕಾಗಿ ದಾಖಲೆಗಳ ಸಲ್ಲಿಕೆ ಮಾಡಲು ಬಂದ ವೇಳೆ ಗ್ರಾಮ ಲೆಕ್ಕಾಧಿಕಾರಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ ಪತ್ರ ಪಡೆಯುವುದರ ಜೊತೆಗೆ ಹಣವನ್ನೂ ಪಡೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಹಾಯಕ ಸುಬ್ಬಣ್ಣ ಪ್ರತಿ ರೈತರಿಂದಲೂ ದಾಖಲೆಗಳೊಂದಿಗೆ 20 ರೂಪಾಯಿ ತೆಗೆದುಕೊಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಥ ಸಂದರ್ಭದಲ್ಲೂ ಎಲ್ಲಾ ಕಳೆದುಕೊಂಡಿರುವ ರೈತರಿಂದ ಹಣ ಮಾಡಲು ಮುಂದಾಗಿರುವ ಅಧಿಕಾರಿಗಳ ವರ್ತನೆ ನೋಡಿ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

Officers Taking Money From Victims In Kundagola

ಬೆಳೆ ಪರಿಹಾರ ಪಡೆಯಲು ಪ್ರತಿ ವರ್ಷ ಲಂಚ ನೀಡ್ತೀರಾ, ಈಗಲೂ ಲಂಚ ಕೊಡಲೇಬೇಕು ಎಂದು ಗ್ರಾಮ ಲೆಕ್ಕಾಧಿಕಾರಿ ರೈತರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡದಿದ್ದರೆ ನಾನು ದಾಖಲೆಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಲ್ಲವೆಂದು ಬೆದರಿಕೆ ಹಾಕಿ ರೈತರಿಂದ ಹಣ ವಸೂಲಿಗೆ ಇಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+