Nrega scheme: ಗೋಮಾಳಗಳಲ್ಲಿ ಬಹುವಾರ್ಷಿಕ ಹುಲ್ಲಿನ ಬೀಜಗಳನ್ನು ಬಿತ್ತನೆ ಕಾರ್ಯ ಭರ
ರಾಯಚೂರು ಜುಲೈ 10: ರಾಯಚೂರು ತಾಲ್ಲೂಕಿನಲ್ಲಿ ಪಶುಪಾಲನೆಯಲ್ಲಿ ತೊಡಗಿಸಿಕೊಂಡ ಭೂ ರಹಿತರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮೇವಿನ ಬೀಜ ಬಿತ್ತನೆಗೆ ಅನುಕೂಲ ಮಾಡಿಕೊಟ್ಟಿದ್ದು ಮಂದಹಾಸ ಮೂಡಿಸಿದೆ.
ಗ್ರಾಮೀಣಾ ಭೂ ರಹಿತರು ಪಶುಪಾಲನೆಯಲ್ಲಿ ತೊಡಗಿಕೊಂಡು ಅರ್ಥಿಕವಾಗಿ ಸದೃಡಗೊಳಿಸುವ ದೃಷ್ಟಿಯಿಂದ ರಾಜ್ಸ ಸರಕಾರ 2023-24 ನೇ ಸಾಲಿನ ಆಯವ್ಯಯದಲ್ಲಿ ರಾಜ್ಸದಲ್ಲಿ 5 ಸಾವಿರ ಗೋಮಾಳಗಳನ್ನು ಅಭಿವೃದ್ಧಿ ಪಡಿಸುವುದಾಗಿ ಘೋಷಿಸಲಾಗಿರುತ್ತದೆ.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಪಶುಸಂಗೋಪನೆ ಸಂರಕ್ಷಣೆಗಾಗಿ ಅವಕಾಶಗಳನ್ನು ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೋಮಾಳ ಅಭಿವೃದ್ಧಿಗಾಗಿ ಗೋಮಾಳ ಅಂಚಿನ ಸುತ್ತಲು ಕಂದಕ ಬದು ನಿರ್ಮಾಣ ಮಾಡುವುದು, ಗೋಮಾಳ ಪ್ರದೇಶದಲ್ಲಿ ಜಲಾನಯನ ಪರಿಕಲ್ಪನೆಯಲ್ಲಿ ಅನುಷ್ಠಾನಿಸುವುದು, ಬಹು ವಾರ್ಷಿಕ ಮೇವಿನ ಮರಗಳು, ಹಣ್ಣಿನ ಗಿಡಗಳನ್ನು ಬೆಳೆಸುವುದು, ಬಹು ವಾರ್ಷಿಕ ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡುವುದು, ಗೋಮಾಳದಲ್ಲಿ ಜಾನುವಾರುಗಳಿಗೆ ನೀರಿನ ಲಭ್ಯತೆಗಾಗಿ ಗೋಕಟ್ಟೆಗಳನ್ನು ನಿರ್ಮಾಣ ಮಾಡುವುದಾಗಿದೆ.
ಈಗಾಗಲೇ ತಾಲೂಕಿನ ವಿವಿದೆಡೆ ಮಳೆಯಾಗಿದ್ದು, ಗೋಮಾಳ ಪ್ರದೇಶದಲ್ಲಿ ಮಣ್ಣಿನಲ್ಲಿ ತೇವಾಂಶ ಇರುವುದರಿಂದ ವಿವಿಧ ತಳಿಯ ಮೇವಿನ,ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ.ಅವುಗಳಲ್ಲಿ ಜೋಳದ ಬಹವಾರ್ಷಿಕ ಮೇವಿನ ಬೀಜ ಹಾಗೂ ಮೆಕ್ಕೆ ಜೋಳದ (ಅಪ್ರೀಕನ್ ಟಾಲ್ ಮೇಜ್ ) ಸಿಒಎಪ್ಎಸ್ 31 ಬಹುವಾರ್ಷಿಕ ಮೇವಿನ ಬೀಜಗಳನ್ನು ತಾಲೂಕಿನ ಮಾಡಮಾನದೊಡ್ಡಿ, ಗಟ್ಟು ಬಿಚಾಲಿ, ಹಂಚಿನಾಳ, ಗಾಣಧಾಳ್ ಇನ್ನೂ ಮುಂತಾದ ಗ್ರಾಮಗಳ ಗೋಮಾಳಗಳಲ್ಲಿ ಬಹು ವಾರ್ಷಿಕ ಹುಲ್ಲಿನ ಬೀಜಗಳು ಬಿತ್ತುವ ಕಾರ್ಯ ಚುರಕಾಗಿ ನಡೆಯುತ್ತಿದೆ.

ಗ್ರಾಮ ಪಂಚಾಯತಿ ಗೋಮಾಳ ಪ್ರದೇಶದವನ್ನು ವಿವಿಧ ಅನುಷ್ಠಾನ (ಪಶುಸಂಗೋಪನೆ, ಆರಣ್ಯ, ಕೃಷಿ, ತೋಟಗಾರಿಕೆ ಮತ್ತು ಕಂದಾಯ) ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆಯಡಿ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ರೂಪಿಸಲಾಗಿರುತ್ತದೆ.
ರಾಯಚೂರು ತಾಲೂಕಿನ ಆತ್ಕೂರು, ಬಿಚ್ಚಾಲಿ, ಬಿಜನಗೇರಾ, ಚಂದ್ರಬಂಡ, ಗಾಣಧಾಳ್, ಎನ್ ಮಲ್ಕಾಪೂರು, ಗಿಲ್ಲೇಸೂಗುರು, ಗುಂಜಳ್ಳಿ, ಹಿರಾಪೂರು, ಇಡಪನೂರು, ಜೇಗರಕಲ್, ಜಾ.ವೆಂಕಟಪೂರು, ಕಮಲಾಪೂರು, ಎಲ್.ಕೆ.ದೊಡ್ಡಿ, ಮಮದಾಪೂರ, ಮಿಟ್ಟಿಮಲ್ಕಾಪೂರು, ಯದ್ಲಾಪೂರು ಮತ್ತು ಯಾಪಲದಿನ್ನಿ ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಗೋಮಾಳ ಪ್ರದೇಶಗಳನ್ನು ಗುರುತಿಸಲಾಗಿದೆ.
ಸಾವಿರ ಖಾಲಿ ಇರುವ ಪ್ರದೇಶದಲ್ಲಿ ಭೂ ಕಬಳಿಕೆಯಡಿ ಒತ್ತುವರಿಯಾಗುವ ಚಿಂತೆಯಿದ ಮುಕ್ತವಾಗಲು ಸರ್ಕಾರ ಆ ಯವ್ಯಯದಲ್ಲಿ ಮಂಡಿಸಿದತೆ ಗೋಮಾಳ ಪ್ರದೇಶಗಳ ಸದ್ಭಳಕೆ ಮುಂದಾಗಿದ್ದು ಅದರ ಭಾಗವಾಗಿ ಭೂಮಿ ಇಲ್ಲದೆ ಇರುವ ಪಶುಪಾಲನೆ ಮಾಡುವ ರೈತರಿಗೆ ಮೇವಿನ ಬೀಜ ಬಿತ್ತನೆ ಮಾಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವ ಈ ನಿರ್ಧಾರ ವರದಾನವಾಗಿದ್ದರೂ ಇಲಾಖೆಗಳ ಸಮನ್ವಯತೆಯೂ ಸವಾಲಾಗಿದ್ದು ಎಷ್ಟ ಮಟ್ಟಿಗೆ ಕಾರ್ಯಸಾಧುವಾಗಲಿದೆ ಕಾದು ನೋಡಬೇಕಿದೆ.

ಗೋಮಾಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಗೋಮಾಳ ಅಭಿವೃದ್ಧಿ ಮಾಡುವುದರಿಂದ ಭೂ ರಹಿತ ಕುಟುಂಬಗಳಿಗೆ ಪಶುಸಂಗೋಪನೆ ಉಪ ಕಸುಬುಗಳಾಗಿ ಸುಸ್ಥೀರ ಜೀವನ ಸಾಗಿಸಲು ಒಂದು ವರದಾನವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಚಂದ್ರಶೇಖರ ಪವಾರ್ ಹೇಳಿದರು.
ನರೇಗಾ ಯೋಜನೆಯಡಿ ಹುಲ್ಲುಗಾವಲು ಅಭಿವೃದ್ಧಿ ಪಡಿಸುವುದರಿಂದ ಪಶು ಸಂಗೋಪನೆಗೆ ಉತ್ತೇಜನ ನೀಡಿ, ಸುಸ್ಥೀರ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದು ನರೇಗಾ ಯೋಜನೆಯ ತಾಲ್ಲೂಕಿನ ಸಹಾಯಕ ನಿರ್ದೇಶಕ ಹನುಮಂತ ಹೇಳಿದರು.












Click it and Unblock the Notifications