ಚಾಮರಾಜನಗರ: ಬಿರುಗಾಳಿ ಮಳೆಗೆ 2 ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ನಾಶ, ಅನ್ನದಾತ ಕಣ್ಣೀರು
ಚಾಮರಾಜನಗರ, ಅಕ್ಟೋಬರ್, 31: ಇಷ್ಟು ದಿನ ಮಳೆಯಿಲ್ಲದೆ ರೈತರು ಬೆಳೆದ ಬೆಳೆಗಳು ಬಿಸಿಲಿನ ಬೇಗೆಗೆ ನೆಲಕಚ್ಚಿದ್ದವು. ಆದರೆ ಇದೀಗ ದಿಢೀರನೇ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಜಮೀನುವೊಂದರಲ್ಲಿ ಬಾಳೆಗಿಡಗಳೆಲ್ಲವು ನೆಲಸಮವಾದ ಘಟನೆ ಚಾಮರಾಜನಗರ ಜಿಲ್ಲೆ ಮೂಡ್ನಕೂಡು ಗ್ರಾಮದಲ್ಲಿ ನಡೆದಿದೆ.
ಮೂಡ್ನಕೂಡು ಗ್ರಾಮದಲ್ಲಿ ಬಿರುಗಾಳಿ ಮಳೆ ಸುರಿದ ಪರಿಣಾಮ ಸಚಿನ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸುಮಾರು ಎರಡೂವರೆ ಸಾವಿರ ಬಾಳೆ ಗಿಡಗಳು ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೀಗೆ ಅನ್ನದಾತರಿಗೆ ಒಂದಲ್ಲ ಒಂದು ಅವಾಂತರಗಳು ಎದುರಾಗುತ್ತಲೇ ಇವೆ. ಇದಕ್ಕೆ ಸರ್ಕಾರದಿಂದ ಅತೀ ಬೇಗನೇ ಪರಿಹಾರ ಸಿಗುವಂತಾಗಬೇಕು ಎನ್ನುವುದು ಅನ್ನದಾತರ ಆಗ್ರಹವಾಗಿದೆ.

ಧಾರವಾಡದಲ್ಲೂ ಭಾರೀ ಮಳೆ
ಬಿಸಿಲಿನ ಬೇಗೆಯಿಂದ ಸುಸ್ತಾಗಿದ್ದ ಪೇಡಾ ನಗರಿ ಜನತೆಗೆ ವರುಣರಾಯ ಎರನೇ ದಿನವೂ ಮುಸಂಜೆವೇಳೆ ತಂಪೇರೆದಿದ್ದಾನೆ. ಮಧ್ಯಾಹ್ನದ ನಂತರ ಧಾರವಾಡದಲ್ಲಿ ಮೋಡ ಮುಸುಕಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆ ಗುಡುಗು ಗಾಳಿ ಸಹಿತ ಮಳೆರಾಯ ಅರ್ಭಟಿಸಿದ್ದಾನೆ. ಇದರಿಂದ ಧಾರವಾಡದ ಪುಲ್ ಖುಷ್ ಆಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯಲ್ಲಿ ನೀರು ತುಂಬಿಕೊಂಡು ಹಲವು ಕಡೆಗಳಲ್ಲಿ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಇನ್ನೂ ನಗರದ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿಯೂ ಮಳೆರಾಯ ಅಬ್ಬರಿಸಿದ್ದು, ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.












Click it and Unblock the Notifications