ಮೋದಿ ರೈತನ ಮಗ ಅಲ್ಲ, ಕಾರ್ಪೊರೇಟ್‌ ಮಗ: ಖರ್ಗೆ

ಯಾದಗಿರಿ, ಜುಲೈ 13: ನರೇಂದ್ರ ಮೋದಿ ತನ್ನ ರೈತ ಪರ ಕಾಳಜಿಯನ್ನು ಸಾಲಮನ್ನಾ ಮಾಡಿ ತೋರಬೇಕಿತ್ತು ಬದಲಿಗೆ ಅವರು ಕಾರ್ಪೊರೇಟ್ ದೊರೆಗಳ ಸಾಲಮನ್ನಾ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಯಾದಗಿರಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಸಾಲಮನ್ನಾ ಮಾಡುವ ಬದಲು ಕಾರ್ಪೊರೇಟ್ ಸಾಲಮನ್ನಾ ಮಾಡಿದ ಮೋದಿ ರೈತರ ಮಗನಲ್ಲ ಕಾರ್ಪೊರೇಟ್ ಸಂಸ್ಕೃತಿಯ ಮಗ ಎಂದು ಅವರು ವಾಗ್ದಾಳಿ ನಡೆಸಿದರು.

ರೈತರ ಬಹುದಿನದ ಬೇಡಿಕೆಯಾದ ರೈತರ ಸಾಲಮನ್ನಾ ಮಾಡದೆ, ಚುನಾವಣೆ ಸಮೀಪವಿದ್ದಾಗ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ರೈತರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಅವರು ಹೇಳಿದರು.

Modi is not farmer son he is corporate son: Kharge

ಅವರ ಚುನಾವಣಾ rallyಗಳು ಈ ಬಾರಿ ಕೈಗೊಡಲಿವೆ ಎಂದ ಅವರು, ಅವರ ಅಸಲಿ ಬಣ್ಣ ರೈತರಿಗೆ, ದೇಶದ ಜನರಿಗೆ ಗೊತ್ತಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಬೇಕು ಎಂಬುದು ಹೈಕಮಾಂಡ್ ನಿರ್ಧಾರ, ಅವರ ನಿರ್ಧಾರಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+