ಮೋದಿ ಅಭಿಮಾನಿಗಳು ಮೆಚ್ಚಿದ ಬೆಳಗಾವಿಯ ರೈತ
ಬೆಳಗಾವಿ, ಡಿಸೆಂಬರ್ 21 : 'ಪರೋಪಕಾರಂ ಇದಂ ಶರೀರಂ' ಎಂಬ ಮಾತಿನಂತೆ ಬದುಕುತ್ತಿದ್ದಾರೆ ಬೆಳಗಾವಿ ರೈತ ಲಕ್ಷ್ಮಣ ರುಕ್ಮಾನೆ ಕಟಂಬೆಲೆ ಅವರು. ಸಮಾಜ ಸೇವೆ, ಪರೋಪಕಾರ ಇವರು ಉಸಿರು. ಕೆಲವು ದಿನಗಳ ಹಿಂದೆ ಚೆನ್ನೈ ಪ್ರವಾಹದ ಸಂತ್ತಸ್ತರಿಗಾಗಿ 500 ರೂ. ದಾನ ಮಾಡಿದ್ದಾರೆ ಲಕ್ಷ್ಮಣ.
ಬೆಳಗಾವಿಯ ಕಡೋಳಿ ನಿವಾಸಿ ರೈತ ಲಕ್ಷ್ಮಣ ರುಕ್ಮಾನೆ ಕಟಂಬೆಲೆ ಅವರಿಗೆ 73ರ ಹರೆಯ. ಆದರೆ, ಸಮಾಜ ಸೇವೆ ಮಾಡುವ ಉತ್ಸಾಹ ಮಾತ್ರ ಬತ್ತಿಲ್ಲ. ಸುಮಾರು 3 ಎಕರೆ ಭೂಮಿಯಲ್ಲಿ ಕೃಷಿ ಮಾಡುವ ಲಕ್ಷ್ಮಣ ಅವರು, ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. [ಮೃತ ಪ್ರಾಣಿಗಳ ಆತ್ಮಕ್ಕೆ ಮುಕ್ತಿ ಕಾಣಿಸುವ ಬಂಧುವೇ ಉದಯಗಟ್ಟಿ]

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಲಕ್ಷ್ಮಣ ಅವರ ಬೆಳೆ ನಾಶವಾಗಿದೆ. ಸುಮಾರು 25,000 ರೂ.ಸಾಲವನ್ನು ಅವರು ಪಾವತಿ ಮಾಡಬೇಕಾಗಿದೆ. ಆದರೆ, ತಾನು ಸಾಲದಲ್ಲಿದ್ದರೂ ಪರರಿಗೆ ಉಪಕಾರ ಮಾಡಬೇಕು ಎಂದು ಬದುಕು ಸಾಗಿಸುತ್ತಿದ್ದಾರೆ ರೈತ ಲಕ್ಷ್ಮಣ. [ಭರ್ತಿ ಮಳೆಯಲ್ಲೂ ಹಾಲು ಹಾಕಲು ಬಂದ ಮಹಿಳೆಗೆ ಸಲಾಂ!]
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ : ಲಕ್ಷ್ಮಣ ಅವರು ಪ್ರತಿ ವರ್ಷ ಕಡೋಳಿ ಸರ್ಕಾರಿ ಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 1,500 ರೂ. ಬಹುಮಾನ ನೀಡುತ್ತಾರೆ. ಗ್ರಾಮದ ಕಮಲೇಶ್ವರ ದೇವಾಲಯಕ್ಕೆ 1.22 ಲಕ್ಷ ಬೆಲೆ ಬಾಳುವ ಬೆಳ್ಳಿ ವಿಗ್ರಹವನ್ನೂ ನೀಡಿದ್ದಾರೆ. [ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']
ಕೆಲವು ದಿನಗಳ ಹಿಂದೆ ಚೆನ್ನೈ ಪ್ರವಾಸಹ ಸಂತ್ರಸ್ತರಿಗೆ 5000 ರೂ. ದೇಣಿಯನ್ನು ನೀಡಿದ್ದಾರೆ. ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಲಕ್ಷ್ಮಣ ಅವರು 5000 ರೂ. ಸಹಾಯ ಮಾಡಿದ್ದರು. ಸರ್ಕಾರಿ ಶಾಲೆಯ ಕಾಪೌಂಡ್ ನಿರ್ಮಾಣಕ್ಕಾಗಿ 78,000 ರೂ.ದೇಣಿಗೆ ನೀಡಿದ್ದಾರೆ.
ಲಕ್ಷ್ಮಣ ಅವರಿಗೆ ಮಕ್ಕಳಿಲ್ಲ, ಐದು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಜೀವನ ಸಾಗಿಸುವ ಅವರು, ಹೆಚ್ಚು ಹಣಕ್ಕಾಗಿ ಆಸೆ ಪಟ್ಟವರಲ್ಲ. ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.
ಮೋದಿ ಅಭಿಮಾನಿಗಳಿಂದ ಮೆಚ್ಚುಗೆ : ಲಕ್ಷ್ಮಣ ರುಕ್ಮಾನೆ ಕಟಂಬೆಲೆ ಅವರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಮೆಚ್ಚಿದ್ದಾರೆ. PM Narendra Modi ಫೇಸ್ಬುಕ್ ಪುಟದಲ್ಲಿ ಲಕ್ಷ್ಮಣ ಅವರ ಸಮಾಜ ಸೇವೆಯ ಕುರಿತು ಬರೆದಿದ್ದಾರೆ.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ












Click it and Unblock the Notifications