ಅವ್ರು ಹೆತ್ತ ಮಗುನಾ ಮಣ್ಣಿಗ್ ಹಾಕಿದ್ರು, ರೈತ ಸೇವ್ ಮಾಡ್ದ

ಅ.6ರಂದು ಎಂದಿನಂತೆ ಹೊಲದಲ್ಲಿ ಕೆಲಸನಿರತನಾಗಿದ್ದ ರೈತನಿಗೆ ಮಗು ಅಳುವ ಸದ್ದು ಕೇಳಿಸಿದೆ. ತಕ್ಷಣ ಅಳು ಬರುತ್ತಿರುವ ಕಡೆಗೆ ಹೋಗಿ ನೋಡಿದ ರೈತನಿಗೆ ಗಾಬರಿಯಾಗಿದೆ.
ಮಣ್ಣಿನಲ್ಲಿ ಹೂತು ಹೋಗಿದ್ದ ಹಸುಗೂಸನ್ನು ನಿಧಾನವಾಗಿ ಮೇಲಕ್ಕೆತ್ತಿಕೊಂಡು ಸಮೀಪದ ಸರ್ಕಾರಿ ಆಸ್ಪತ್ರೆಗೆ ಓಡಿದ್ದಾನೆ.
ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಮಗು ಅಪಾಯದಿಂದ ಪಾರಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಶಿಕ್ಷಣ ಮಂತ್ರಿ ಅರ್ಚನಾ ಚಿಟ್ನಿಸ್ ಆಗಮಿಸಿ, ಮಗುವಿನ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಸ್ಥಳೀಯ ಪೊಲೀಸರು ಹೆಣ್ಣು ಮಗು ಹತ್ಯೆ ಯತ್ನದ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗುವಿನ ಪೋಷಕರಿಗೆ ಮತ್ತೆ ಮಗುವನ್ನು ಕೊಡದಿರುವಂತೆ ಮಂತ್ರಿ ಅರ್ಚನಾ ಅವರು ನಿರ್ದೇಶನ ನೀಡಿದ್ದಾರೆ.
ರೈತನಿಂದ ಮರುಜನ್ಮ ಪಡೆದ ಮಗುವಿನ ಅಪ್ಪ ಅಮ್ಮ ಯಾರಾಗಲಿದ್ದಾರೆ. ಕಾದು ನೋಡಬೇಕಿದೆ.












Click it and Unblock the Notifications