ಸಾಲ ಮನ್ನಾ : ರಾಷ್ಟ್ರ ಮಟ್ಟದ ಚರ್ಚೆ ಅಗತ್ಯ
ಶಿವಮೊಗ್ಗ,
ಜ. 3 : ರೈತರ ಸಾಲ ಮನ್ನಾ ಮಾಡುವುದಕ್ಕೆ ನಾನು ಈಗಲೂ ಸಿದ್ಧ. ಆದರೆ, ಇದಕ್ಕೆ ಹಣ ಎಲ್ಲಿಂದ ತರುವುದು ? ಈ ಸಂಬಂಧ ಪ್ರಧಾನಿ ನೇತೃತ್ವದಲ್ಲಿ ರಾಷ್ಟ್ರೀಯ ಚರ್ಚೆ ನಡೆಯಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು. id="toptextpromo">ದೇಶದ
ಎಲ್ಲ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿ ಅಂತಿಮವಾಗಿ ಪ್ರಧಾನಿಯೇ ನಿರ್ಧಾರ ಕೈಗೊಳ್ಳುವುದು ಸೂಕ್ತ, ರೈತರು ಸಮಸ್ಯೆ ಎದುರಿಸುತ್ತಿರುವುದು ನಿಜ. ವೈಜ್ಞಾನಿಕ ಬೆಲೆ ಸೇರಿ ಹಲವು ರೀತಿಯ ಸಮಸ್ಯೆಗಳಿವೆ. ಈ ಸಂಬಂಧ ರಾಷ್ಟ್ರಮಟ್ಟದಲ್ಲಿ ಪರಿವಾರ ರೂಪಿಸುವ ಕೆಲಸವಾಗಬೇಕು ಎಂದರು. ಕೃಷಿಕೆ ಪ್ರತ್ಯೇಕ ಬಜೆಟ್ ಅಸಾಧ್ಯ ಎಂದು ರೈತ ಸಂಘಗಳ ಬೇಡಿಕೆಯನ್ನು ಸಿಎಂ ಸ್ಪಷ್ಟವಾಗಿ ತಳ್ಳಿಹಾಕಿದರು. id='are-slot-1' class='oiad oi-axt oiadv'> id='top-searched-articles'>ರಾಜ್ಯದ
ರೈತರ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರಕಾರ ಹಲವು ಕ್ರಮಕೈಗೊಂಡಿದೆ. ಈ ಹಿಂದಿನ ಯಾವ ಸರಕಾರಗಳೂ ಕಲ್ಪಿಸದಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ತಾವು ಮಂಡಿಸಿದ ಪ್ರತಿ ಬಜೆಟ್ ನಲ್ಲಿಯೂ ರೈತರಿಗೆ ಮತ್ತು ಕೃಷಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.











Click it and Unblock the Notifications