ಜ.17ರಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ

ಬೆಂಗಳೂರು, ಡಿ. 29 : ಬೆಂಗಳೂರಿನ ಲಾಲ್‌ಬಾಗ್ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ. ಜನವರಿ 17ರಿಂದ 26ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ದೆಹಲಿಯ ಕೆಂಪುಕೋಟೆ ಅಥವ ಶಿವಪುರದ ಸತ್ಯಾಗ್ರಹಿ ಸೌಧ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ.

ಪ್ರತಿ ವರ್ಷ ಫಲಪುಷ್ಪ ಪ್ರದರ್ಶನದಲ್ಲಿ ದೇಶದ ಪ್ರತಿಷ್ಠಿತ ಸ್ಮಾರಕಗಳನ್ನು ಲಾಲ್‌ಬಾಗ್‌ನಲ್ಲಿ ನಿರ್ಮಿಸಲಾಗುತ್ತದೆ. ಈ ಬಾರಿ ಜ.17ರಿಂದ 26ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಪ್ರತಿಷ್ಠಿತ ಕೆಂಪು ಕೋಟೆ ಅಥವ ಶಿವಪುರದ ಸತ್ಯಾಗ್ರಹಿ ಸೌಧವನ್ನು ನಿರ್ಮಿಸಲು ಮೈಸೂರು ಉದ್ಯಾನ ಕಲಾಸಂಘ ಹಾಗೂ ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿವೆ. [ಬೆಂಗಳೂರು ಹೂವಿನ ಅರಮನೆಯಲ್ಲಿ ಹಂಪಿ ಕಲ್ಲಿನ ರಥ]

Lal Bagh

ಕೆಂಪುಕೋಟೆಯನ್ನು ನಿರ್ಮಿಸುವುದಾದರೆ 50 ಅಡಿ ಉದ್ದದ ದೆಹಲಿಯ ಕೆಂಪು ಕೋಟೆ ಲಾಲ್‌ಬಾಗ್‌ನಲ್ಲಿ ತಲೆ ಎತ್ತಲಿದೆ. ಫಲಪುಷ್ಪ ಪ್ರದರ್ಶನವನ್ನು ಕೇವಲ 20 ಲಕ್ಷ ರೂ. ಮಿತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಕೆಂಪು ಕೋಟೆಯನ್ನು ಕೈಬಿಡುವ ಸಂದರ್ಭ ಬಂದರೆ ಶಿವಪುರದ ಸತ್ಯಾಗ್ರಹಿ ಸೌಧ ನಿರ್ಮಾಣವಾಗಲಿದೆ. [ಲಾಲ್ ಬಾಗ್ ದುಬಾರಿ ಆಯ್ತು ಕಣ್ರೀ!]

ಲಾಲ್‌ಬಾಗ್‌ನಲ್ಲಿ ಮೂರು ತಿಂಗಳಿಂದ ಫಲಪುಷ್ಪ ಪ್ರದರ್ಶನದ ಸಿದ್ಧತೆಗಳು ನಡೆಯುತ್ತಿವೆ. ಊಟಿ, ನಂದಿಬೆಟ್ಟ ಸೇರಿದಂತೆ ನಾನಾ ಪ್ರದೇಶಗಳಿಂದ ಆಕರ್ಷಕ, ಹೂಗಳನ್ನು ತರಿಸಲಾಗುತ್ತಿದೆ. ಜನವರಿ ಎರಡನೆ ವಾರಕ್ಕೆ ಹೂವು ಬಿಡುವಂತೆ ನವೆಂಬರ್ ತಿಂಗಳಿನಲ್ಲೇ ಕೆಲವು ಹೂವಿನ ಬೀಜಗಳ ನಾಟಿಯನ್ನು ಮಾಡಲಾಗಿದೆ.

ತರಕಾರಿಗಳ ಬಗ್ಗೆ ಪರಿಚಯ ಮಾಡಿಕೊಡಲು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಫಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+