ಅಮೆರಿಕದಲ್ಲೂ ತೀವ್ರ ಬರಗಾಲ; ಬೆಲೆಗಳು ಗಗನಕ್ಕೆ

us-faces-worst-drought-food-prices-increase
ವಾಷಿಂಗ್ಟನ್, ಜುಲೈ 19: ನೂರಾರು ವರ್ಷಗಳ ಪೈಕಿ ಕಳೆದ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅತ್ಯಂತ ಕನಿಷ್ಠ (ಕೇವಲ 7.2 ಮಿ.ಮೀ) ಮಳೆಯಾಗಿದೆ ಎಂದು ಎಚ್ಚರಿಸುತ್ತಾ ಅಮೆರಿಕ ಸೇರಿದಂತೆ ವಿಶ್ವದ ನಾನಾ ಕಡೆಗೂ ಇಂತಹುದೇ ದುರ್ಭರ ಬರ ಎದುರಾಗಿದೆ ಎಂದು ದಟ್ಸ್ ಕನ್ನಡ ವರದಿ ಮಾಡಿತ್ತು.

ಇಲ್ಲೇನೋ ಸಧ್ಯಕ್ಕೆ ಒಂದಷ್ಟು ಮಳೆಯ ಸಿಂಚನವಾಗುತ್ತಿದೆ. ಆದರೆ ಅಲ್ಲಿ ದೊಡ್ಡಣ್ಣನ ಪಡಿಪಾಟಲು ಜೋರಾಗಿದೆ. ಕಳೆದ 25 ವರ್ಷಗಳಲ್ಲಿ ಅಮೆರಿಕಕ್ಕೆ ಬರಬಾರದ ಭೀಕರ ಬರ ಬಂದೆರಗಿದೆ. ಇದರಿಂದ ಸ್ವೇಚ್ಚಾಮನಸ್ಸಿನ ಅಮೆರಿಕ ಒಂದಷ್ಟು ದಿಕ್ಕೆಟ್ಟಿದೆ. ದೊಡ್ಡಣ್ಣ ಬರಾಕ್ ಒಬಾಮಾ ಪೆಟ್ರೋಲ್ ಮತ್ತು ಆಹಾರ ಧಾನ್ಯಗಳ ಬೆಲೆಗಳನ್ನು ಏರಿಸಿದ್ದಾರೆ.

'ಈ ದುರ್ಭರ ಬರದಿಂದಾಗಿ ಅಮೆರಿಕದ ಶೇ. 61ರಷ್ಟು ಭೂಭಾಗ ಬರಗೆಟ್ಟಿದೆ. ಇದರಿಂದ ಬೆಳೆಗಳಿಗೆ ಅಪಾರ ನಷ್ಟವುಂಟಾಗಿದೆ. ಶೇ. 78ರಷ್ಟು ಬೆಳೆ ನಾಶವಾಗಿದೆ. ಶೇ. 77ರಷ್ಟು ಸೋಯಾಬೀನ್ ಬೆಳೆ ಮೇಲೂ ಅಡ್ಡಪರಿಣಾಮ ಬೀರಿದೆ' ಎಂದು ಅಮೆರಿಕದ ಕೃಷಿ ಕಾರ್ಯದರ್ಶಿ ಟಾಮ್ ವಿಲ್ಸಾಕ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೆರಿಕದ ಕೃಷಿ ಉತ್ಪನ್ನ ರಫ್ತು ಕುಂಠಿತ: 'ಇದು ಆಹಾರ ಧಾನ್ಯಗಳ ಬೆಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕಳೆದೊಂದು ತಿಂಗಳಲ್ಲಿ ಆಹಾರದ ಬೆಲೆಗಳು ಶೇ. 38ರಷ್ಟು ಹೆಚ್ಚಾಗಿವೆ. ಸದ್ಯದಲ್ಲೇ ಆಹಾರದ ಬೆಲೆಗಳು ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ರೈತರ ರಕ್ಷಣೆಗೆ ನಿಂತಿದ್ದು, ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಅವರು ಹೇಳಿದ್ದಾರೆ.

ಪ್ರಸಕ್ತ ವರ್ಷದ ಗರಿಷ್ಠ ಬರದಿಂದಾಗಿ ಮುಂದಿನ ವರ್ಷವೂ ಆಹಾರ ಬೆಲೆಗಳು ಹೆಚ್ಚಾಗಲಿವೆ. ಇದರಿಂದ ಅಮೆರಿಕದ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣ ಕುಗ್ಗಲಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+