ಬಿಜೆಪಿಯ ಬಂದ್ ಬೆದರಿಕೆಗೆಲ್ಲ ಬಗ್ಗಲ್ಲ: ಕುಮಾರಸ್ವಾಮಿ
ಬೆಂಗಳೂರು, ಮೇ 25: ಭಾರತೀಯ ಜನತಾ ಪಕ್ಷದ ಬೆದರಿಕೆಗಳಿಗೆಲ್ಲ ಬಗ್ಗುವುದಿಲ್ಲ ಎಂದು ವಿಶ್ವಾಸ ಮತ ಗೆದ್ದ ನೂತನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ಸದನದಲ್ಲಿ ವಿಶ್ವಾಸ ಮತ ಗೆದ್ದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ನಿಜವಾದ ಕೆಲಸ ಈಗ ಆರಂಭವಾಗುತ್ತದೆ. ಕರ್ನಾಟಕದ ಜನತೆಗೆ ನಾನು ಏನೆಲ್ಲಾ ಭರವಸೆಗಳನ್ನು ನೀಡಿದ್ದೆನೋ ಅದನ್ನೆಲ್ಲಾ ಈಡೇರಿಸುತ್ತೇನೆ," ಎಂದು ಭರವಸೆ ನೀಡಿದ್ದಾರೆ.
ಇನ್ನು ಇಂದು ವಿಧಾನ ಸಭೆಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ, ಒಂದೊಮ್ಮೆ ಇಂದು ಸಂಜೆ ಮೊದಲು ರಾಷ್ಟ್ರೀಯ ಬ್ಯಾಂಕ್, ಸಹಕಾರಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡದಿದ್ದಲ್ಲಿ ಸೋಮವಾರ ರಾಜ್ಯ ಬಂದ್ ನಡೆಸಲಾಗುವುದು ಎಂದಿದ್ದರು.

ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳು, "ಈ ರೀತಿಯ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ," ಎಂದು ಹೇಳಿದ್ದಾರೆ.












Click it and Unblock the Notifications