ಮತ್ತೆ ಬಂದಿದೆ ಹಾಪ್ ಕಾಮ್ಸ್ ದ್ರಾಕ್ಷಿ ಮೇಳ

HOPCOMS Grapes Mela
ಬೆಂಗಳೂರು, ಫೆ. 7: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ಕಾಮ್ಸ್)ದ ಆಶ್ರಯದಲ್ಲಿ ಫೆ.9ರಂದು ದ್ರಾಕ್ಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ದ್ರಾಕ್ಷಿ ಮೇಳವನ್ನು ನಗರದ ಹಡ್ಸನ್ ವೃತ್ತದ ಬಳಿಯಿರುವ ಸಂಸ್ಥೆಯ ಶೀತಲ ಗೃಹದ ಆವರಣದಲ್ಲಿ ಫೆ.9ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಾಗುವುದು ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಬಿ.ವಿ.ಚಿಕ್ಕಣ್ಣ ಹೇಳಿದ್ದಾರೆ.

ಮೇಳದಲ್ಲಿ ಥಾಮನ್ ಸೀಡ್‌ಲೆಸ್, ಸೊನಾಕಾ, ಶರದ್, ಕೃಷ್ಣ ಶರದ್, ತಾಜ್-ಎ-ಗಣೇಶ್, ಇಂಡಿಯನ್ ಬ್ಲಾಕ್ ಗ್ಲೋಬ್, ರೆಡ್‌ಗ್ಲೋಬ್, ಪ್ಲೇಮ್ ಸೀಡ್‌ಲೆಸ್, ಮಾಣಿಕ್ ಚಮನ್, ಬೆಂಗಳೂರು ನೀಲಿ, ದಿಲ್‌ಕುಶ್ ಇತ್ಯಾದಿ ನಮೂನೆಯ ದ್ರಾಕ್ಷಿಗಳನ್ನು ಮಾರಾಟಕ್ಕಿಡಲಾಗುವುದು ಎಂದು ಚಿಕ್ಕಣ್ಣ ವಿವರ ನೀಡಿದರು.

ಬೆಂಗಳೂರಿನ 250 ಹಾಗೂ ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರದ ಹಾಪ್‌ಕಾಮ್ಸ್‌ಗಳಲ್ಲಿ ದ್ರಾಕ್ಷಿಮೇಳ ನಡೆಯಲಿದ್ದು, ಶೇ.10 ರಿಯಾಯಿತಿ ಕೂಡಾ ನೀಡಲಾಗುವುದು ಎಂದು ಅವರು ತಿಳಿಸಿದರು.

ಹಾಪ್ ಕಾಮ್ಸ್ ದರ ತಿಳಿಯುವ ಬಗೆ: ನಿಮ್ಮ ಮೊಬೈಲ್ ನಲ್ಲಿ hop veg(ಎಲ್ಲವೂ small letters ನಲ್ಲಿರಲಿ) ಎಂದು ಕೀ ಮಾಡಿ 92123 57123 ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು. ಸುಮಾರು 30 ತರಕಾರಿಗಳ ಪಟ್ಟಿ ನಿಮ್ಮ ಮೊಬೈಲ್ ನಲ್ಲಿ ಕಾಣಬಹುದು.

ತೋಟಗಾರಿಕಾ ಮತ್ತು ಸಕ್ಕರೆ ಖಾತೆ ಸಟಿವ ಎಸ್.ಎ.ರವೀಂದ್ರನಾಥ್ ಮೇಳಕ್ಕೆ ಚಾಲನೆ ನೀಡಲಿದ್ದು, ಶಾಸಕ ರೋಷನ್ ಬೇಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವ ಬಚ್ಚೇಗೌಡ, ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾ, ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ತೋಟಗಾರಿಕಾ ಇಲಾಖೆಯ ನಿರ್ದೇಶಕ ಎನ್.ಜಯರಾಂ, ಪಾಲಿಕೆ ಸದಸ್ಯ ಎಂ. ಗೋಪಿ, ತೋಟಗಾರಿಕಾ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ.ಶ್ರೀಕಾಂತ್ ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+