Mango Mela: ಲಾಲ್‌ಬಾಗ್ ಮಾವು ಮೇಳ; ರೈತರು ಮಾರಿದ್ದು ಒಂದಲ್ಲ, ಎರಡಲ್ಲ ಎಷ್ಟು ಟನ್ ಹಣ್ಣು ಗೊತ್ತಾ?
ಬೆಂಗಳೂರು, ಜೂನ್. 12: ಸಿಲಿಕಾನ್ ಸಿಯ ಬಹುದೊಡ್ಡ ಮಾವು ಮೇಳ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಇತ್ತೀಚೆಗೆ ನಡೆದಿದೆ. ಮೂರು ವಾರಗಳ ಕಾಲ ನಡೆದ ಮಾವು ಮೇಳದಲ್ಲಿ ರೈತರು ಸುಮಾರು 500 ಟನ್ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಕರ್ನಾಟಕದಾದ್ಯಂತ 100 ಕ್ಕೂ ಹೆಚ್ಚು ರೈತರು ಮಾವು ಮೇಳದಲ್ಲಿ ಭಾಗಿಯಾಗಿದ್ದರು. ಮೇಳದಲ್ಲಿ 50 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಮೂರು ವಾರಗಳ ಕಾಲ ನಡೆದ ಮೇಳ ಯಶಸ್ವಿಯಾಗಿದೆ. ಮೇಳದ ಆಯೋಜಕರಾದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (ಕೆಎಸ್‌ಎಂಡಿಎಂಸಿಎಲ್) ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಹಿಂದಿನ ಮೇಳಗಳಿಗೆ ಹೋಲಿಸಿದರೆ ಗಮನಾರ್ಹ ಸುಧಾರಣೆಯಾಗಿದೆ ಎಂದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್‌ಎಂಡಿಎಂಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸಿ ಜಿ ನಾಗರಾಜು, ಲಾಲ್‌ಬಾಗ್‌ನಲ್ಲಿ ಎಷ್ಟು ವಾರಾಂತ್ಯ ಸಿಗುತ್ತದೆ ಎಂಬುದರ ಮೇಲೆ ಮಾವು ಮೇಳದ ಮಾರಾಟ ಅವಲಂಬಿಸಿರುತ್ತದೆ. ಈ ಬಾರಿ 13 ರಿಂದ 14 ತಳಿಯ ಮಾವು ಮಾರಾಟವಾಗಿದ್ದು, ರೈತರು ಸಂತಸಗೊಂಡಿದ್ದಾರೆ.
ಗಮನಾರ್ಹವಾಗಿ, ಮೇಳದಲ್ಲಿ ಈ ಬಾರಿ ಜಿಐ ಟ್ಯಾಗ್‌ನಿಂದ ವಿಶಿಷ್ಟವಾದ ಬೆಲೆಬಾಳುವ ಕಾರಿ ಇಶಾದ್ ಮಾವಿನ ತಳಿಯನ್ನು ಇಡಲಾಗಿತ್ತು. ಮಾವು ಪ್ರಿಯರು ಇದ್ದನ್ನು ಕೂಡ ಇಷ್ಟಪಟ್ಟಿದ್ದಾರೆ. "ಕಾರಿ ಈಶಾದ್ ತಂದ ರೈತರು ಪ್ರತಿಕ್ರಿಯೆಯಿಂದ ತುಂಬಾ ಸಂತೋಷಪಟ್ಟರು. ಈ ತಳಿಗೆ ಈ ಹಿಂದೆ ಹೆಚ್ಚು ಬೇಡಿಕೆ ಇಲ್ಲದಿದ್ದರೂ, ಈ ದಿನಗಳಲ್ಲಿ ಬೆಂಗಳೂರಿನಲ್ಲೂ ಆಸಕ್ತಿ ಹೆಚ್ಚಾಗಿದೆ. ಮೇಳದ ಸಮಯದಲ್ಲಿ ರೈತರು ತಮ್ಮ ದಾಸ್ತಾನುಗಳನ್ನು ಮೂರು ಬಾರಿ ಮತ್ತೆ ತುಂಬಿದ್ದಾರೆ" ಎಂದು ತಿಳಿಸಿದ್ದಾರೆ.

ಮಾವಿನ ಮಾರುಕಟ್ಟೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ, ಮಾವು ಮಂಡಳಿಯು ತನ್ನ ಆನ್‌ಲೈನ್ ಮಾರಾಟ ವೇದಿಕೆಯಾದ 'ಕರ್ ಸಿರಿ'ಗೆ ಗಮನಾರ್ಹವಾದ ಪ್ರಾಮುಖ್ಯತೆ ನೀಡಿದೆ. ಇಂಡಿಯಾ ಪೋಸ್ಟ್ ಮೂಲಕ ರೈತರಿಂದ ಗ್ರಾಹಕರು ನೇರ ಖರೀದಿ ಮಾಡುವುದನ್ನು ಉತ್ತೇಜಿಸುತ್ತದೆ. ಪ್ರಸ್ತುತ, 27 ರೈತರು ಈ ವೇದಿಕೆಯ ಮೂಲಕ ಕರಿ ಇಶಾದ್ ಸೇರಿದಂತೆ 13 ಮಾವಿನ ತಳಿಗಳ ವೈವಿಧ್ಯಮಯ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
"ನಾವು 'ಕರ್ ಸಿರಿ' ಪೋರ್ಟಲ್‌ನಲ್ಲಿ 4,514 ಬಾಕ್ಸ್‌ಗಳ (13.5 ಟನ್) ಮಾವಿನಹಣ್ಣುಗಳನ್ನು ಮಾರಾಟ ಮಾಡಿದ್ದೇವೆ. ಕಾರಿ ಇಶಾದ್ ಹಣ್ಣುಗಳು ಬೇಕು ಎಂದು 60 - 70 ಆರ್ಡರ್‌ಗಳನ್ನು ಸ್ವೀಕರಿಸಿದ್ದೇವೆ. ನಮ್ಮ ಪ್ಲಾಟ್‌ಫಾರ್ಮ್‌ಗಳ ಹೊರತಾಗಿ, ಕರ್ನಾಟಕದ ವಿವಿಧ ಭಾಗಗಳ ರೈತರು ಅಂತಹ 14 ಪೋರ್ಟಲ್‌ಗಳನ್ನು ಹೊಂದಿದ್ದಾರೆ. ಅಲ್ಲಿ ಅವರು ನೇರವಾಗಿ ಇಂಡಿಯಾ ಪೋಸ್ಟ್ ಮೂಲಕ ಗ್ರಾಹಕರಿಗೆ ಮಾವಿನಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ" ಎಂದು ಕೆಎಸ್‌ಎಂಡಿಎಂಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸಿ ಜಿ ನಾಗರಾಜು ಹೇಳಿದ್ದಾರೆ.
'ಕರ್ ಸಿರಿ' ಪೋರ್ಟಲ್‌ನಲ್ಲಿ ಮಾವಿನ ಹಣ್ಣುಗಳನ್ನು ಬುಕ್ ಮಾಡಿದ ಒಂದು ಅಥವಾ ಎರಡು ದಿನಗಳಲ್ಲಿ ಪೋಸ್ಟ್ ಮ್ಯಾನ್ ಹಣ್ಣನ್ನು ಮನೆ ಬಾಗಿಲಿಗೆ ಸುರಕ್ಷಿತವಾಗಿ ತಲುಪಿಸಲಿದ್ದಾರೆ. ನಗರ ವಾಸಿಗಳಿಗೆ ರೈತರಿಂದ ನೇರವಾಗಿ ನಾನಾ ತಾಜಾ ತಳಿಗಳ ಮಾವಿನ ಹಣ್ಣುಗಳನ್ನು ಅಂಚೆ ಇಲಾಖೆ ಮೂಲಕ ತಲುಪಿಸುವ ಈ ವ್ಯವಸ್ಥೆ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದೆ .












Click it and Unblock the Notifications