ಎಷ್ಟು ಅಲೆದರೂ ಸಿಗದ ಪರಿಹಾರ; ಮೂಡಿಗೆರೆಯಲ್ಲಿ ಗುಂಡಿಕ್ಕಿಕೊಂಡು ರೈತ ಆತ್ಮಹತ್ಯೆ
ಚಿಕ್ಕಮಗಳೂರು, ಸೆಪ್ಟೆಂಬರ್ 14: ಕಳೆದ ತಿಂಗಳು ಸಂಭವಿಸಿದ ಪ್ರವಾಹದಲ್ಲಿ ಬೆಳೆಯನ್ನು ಕಳೆದುಕೊಂಡು ಬೇಸರಗೊಂಡ ರೈತನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದಿದೆ.
ಮೂಡಿಗೆರೆಯ ಕಳಸ ಬಳಿಯ ಕಾರಗದ್ದೆ ಎಂಬಲ್ಲಿ ಚನ್ನಪ್ಪಗೌಡ (65) ಎಂಬಾತ ತೋಟದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ನೆರೆಯಿಂದಾಗಿ ಬೆಟ್ಟ-ಗುಡ್ಡ ಕುಸಿದು ಇವರ ಐದು ಎಕರೆ ಕಾಫಿ ತೋಟ ಹಾಳಾಗಿತ್ತು. ಬೆಳೆದ ಬೆಳೆಯೂ ನೀರುಪಾಲಾಗಿತ್ತು.

ಈ ಸಂದರ್ಭ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಆದರೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿರಲಿಲ್ಲ. ಒಂದು ತಿಂಗಳಿನಿಂದಲೂ ಪರಿಹಾರಕ್ಕೂ ಅಲೆದಾಡುತ್ತಿದ್ದು, ಪರಿಹಾರ ದೊರಕದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.












Click it and Unblock the Notifications