ಮಾ.2 ಹಾಗೂ 3 ವೈನ್ ಉತ್ಸವ, ತಪ್ಪದೇ ಬನ್ನಿ

Bangalore International Wine Festival 2012
ಬೆಂಗಳೂರು, ಫೆ.17: ದ್ರಾಕ್ಷಿ ಬೆಳೆಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ದ್ರಾಕ್ಷಿ ರಸ ಮಂಡಳಿಯು ಮಾ.2 ರಿಂದ 4 ರವರೆಗೆ ಅಂತಾರಾಷ್ಟ್ರೀಯ ವೈನ್ ಉತ್ಸವ 2012 ಆಯೋಜಿಸಿದೆ. ತೋಟಗಾರಿಕಾ ಸಚಿವ ಎಸ್ ಎ ರವೀಂದ್ರನಾಥ್ ಅವರು ವೈನ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ದ್ರಾಕ್ಷಿರಸ ಉತ್ಸವದಲ್ಲಿ 10 ಅಂತಾರಾಷ್ಟ್ರೀಯ ವೈನ್ ಕಂಪನಿಗಳು ಸೇರಿದಂತೆ ಸ್ಥಳೀಯ 50 ಕಂಪನಿಗಳು ಭಾಗವಹಿಸಲಿದೆ.

ವೈನ್ ತಯಾರಿಕಾ ಯಂತ್ರೋಪಕರಣಗಳು, ದ್ರಾಕ್ಷಿ ರಸ ಬಗ್ಗೆ ಕೃಷಿಕರಿಗೆ ಪ್ರಾತ್ಯಾಕ್ಷಿಕೆಗಳು, ಜಾಗತಿಕ ಅವಕಾಶಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವಿರುತ್ತದೆ ಎಂದು ಕರ್ನಾಟಕ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್ ಹೇಳಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ 17,350 ಹೆಕ್ಟೇರು ಪ್ರದೇಶಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ವಾರ್ಷಿಕವಾಗಿ 3.15 ಲಕ್ಷ ಮೆಟ್ರಿಕ್ ಟನ್ ಗಳ ಬೆಳೆಯಲಾಗುತ್ತಿದೆ. ಉತ್ಪಾದನೆ ಪ್ರಮಾಣದಲ್ಲಿ ಮಹಾರಾಷ್ಟ್ರದ ನಂತರ ಸ್ಥಾನದಲ್ಲಿ ಕರ್ನಾಟಕ ರಾಜ್ಯ ಉತ್ತಮ ಸಾಧನೆ ತೋರುತ್ತಿದೆ.

ಮಾ.2 ಹಾಗೂ 3 ರಂದು ನಗರದ ಅರಮನೆ ಮೈದಾನದಲ್ಲಿ ದ್ರಾಕ್ಷಿ ರಸ ರುಚಿ ನೋಡ ಬಯಸುವವರು 400 ರು.ಗಳ ಪ್ರವೇಶ ಶುಲ್ಕ ಪಾವತಿಸಿ ಉತ್ಸವದಲ್ಲಿ ಪಾಲ್ಗೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+