'ಸಾಲ ಮನ್ನಾ ಬದಲು, ರೈತರಿಗೆ ನಗದು ವರ್ಗಾವಣೆಯೇ ಉತ್ತಮ'
ನವದೆಹಲಿ, ಜನವರಿ 22: ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರಕಾರಕ್ಕೆ ದೇಶಾದ್ಯಂತ ಒತ್ತಡ ಕೇಳಿಬರುತ್ತಿದೆ. ಆದರೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಪ್ರಕಾರ, ಕೃಷಿ ಸಾಲ ಮನ್ನಾದಿಂದ ರೈತರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಲು ಸಾಧ್ಯವಿಲ್ಲ.
ಅದರ ಬದಲಿಗೆ ನಗದು ವರ್ಗಾವಣೆಯೇ ಉತ್ತಮ ಪರಿಹಾರ ಆಗಲಿದೆ ಎಂಬುದು ಅವರ ಅಭಿಪ್ರಾಯ. "ಕೃಷಿ ವಲಯದ ಮೇಲೆ ಅಪಾರ ಪ್ರಮಾಣದ ಒತ್ತಡವಿದೆ. ನನ್ನ ಪ್ರಕಾರ, ಸಾಲ ಮನ್ನಾದಿಂದ ಕೃಷಿಯ ಯಾವುದೇ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡಲು ಸಾಧ್ಯವಿಲ್ಲ" ಎಂದು ಸಿಎನ್ ಬಿಸಿ ಟಿವಿ-18 ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕೃಷಿ ಸಾಲ ಮನ್ನಾಕ್ಕಿಂತ ನಗದು ವರ್ಗಾವಣೆ ಉತ್ತಮ. ಉತ್ತಮ ತಂತ್ರಜ್ಞಾನ, ಇಳುವರಿ ಹೆಚ್ಚಿಸುವಂಥ ಬೀಜ ಒದಗಿಸುವ ಮೂಲಕ ಸರಕಾರವು ಕೃಷಿಗೆ ಪೂರಕವಾದ ಕೆಲಸಗಳನ್ನು ಕೈಗೊಳ್ಳಬೇಕು. ಲೋಕಸಭೆ ಚುನಾವಣೆ ಇನ್ನೇನು ನಡೆಯಲಿದ್ದು, ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹಲವು ರಾಜ್ಯ ಸರಕಾರಗಳು ಕೃಷಿ ಸಾಲ ಮನ್ನಾ ಮಾಡಿವೆ.

ಚುನಾವಣೆ ಪ್ರಚಾರದ ವೇಳೆಯೇ ಮಾತು ಕೊಟ್ಟು, ಆ ನಂತರ ಮೂರು ರಾಜ್ಯಗಳ ವಿಧಾನಸಭೆ (ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಢ) ಅಧಿಕಾರ ಹಿಡಿದ ಕಾಂಗ್ರೆಸ್, ತಕ್ಷಣ ಕೃಷಿ ಸಾಲ ಮನ್ನಾ ಘೋಷಣೆ ಮಾಡಿತು. ಆ ನಂತರ ಒತ್ತಡಕ್ಕೆ ಸಿಲುಕಿದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್ ಹಾಗೂ ಅಸ್ಸಾಮ್ ನಲ್ಲೂ ಸಾಲ ಮನ್ನಾ ಘೋಷಿಸಲಾಯಿತು.
ಇಡೀ ದೇಶಕ್ಕೆ ಅನ್ವಯ ಆಗುವಂತೆ ಕೃಷಿ ಸಾಲ ಮನ್ನಾ ಮಾಡದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿದ್ದೆ ಅಥವಾ ವಿಶ್ರಾಂತಿಗೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಕೃಷಿ ಸಾಲ ಮನ್ನಾ ವಿಚಾರವನ್ನು ಚುನಾವಣೆ ಗಿಮಿಕ್ ಎಂದು ಹೀಗಳೆದಿದ್ದ ಪ್ರಧಾನಿ ಮೋದಿ, ರೈತರಿಗೆ ನೇರವಾಗಿ ಅನುಕೂಲ ವರ್ಗಾವಣೆ ಮಾಡುವ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು.
ಕೃಷಿ ಸಾಲ ಮನ್ನಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಂ ರಾಜನ್ ವಿರೋಧ ವ್ಯಕ್ತಪಡಿಸಿದ್ದರು. ರಾಜಕೀಯ ಭರವಸೆಯಾಗಿ ಕೃಷಿ ಸಾಲ ಮನ್ನಾ ಘೋಷಣೆ ಮಾಡದಂತೆ ನಿಯಮ ರೂಪಿಸಲು ಚುನಾವಣೆ ಆಯೋಗವನ್ನು ಕೇಳಿಕೊಂಡಿದ್ದರು.
ರೈತರ ಬಳಿಯಲ್ಲಿರುವ ಕೃಷಿ ಭೂಮಿಯ ಆಧಾರದಲ್ಲಿ ಇಂತಿಷ್ಟು ನಗದು ವರ್ಗಾವಣೆ ಆಗಬೇಕು ಎಂಬ ನಿಯಮಕ್ಕೆ ರಘುರಾಂ ರಾಜನ್ ಕೂಡ ಬೆಂಬಲಿಸಿದ್ದರು. ರೈತಬಂಧು ಯೋಜನೆ ಎಂದು ತೆಲಂಗಾಣ ರಾಜ್ಯ ಸರಕಾರ ಇದೇ ರೀತಿ ಅನುಷ್ಠಾನಕ್ಕೆ ತಂದಿತ್ತು.
ಗೀತಾ ಗೋಪಿನಾಥ್, ಕೃಷಿ ವಲಯ- ಉದ್ಯೋಗ ಸೃಷ್ಟಿ ಎನ್ ಡಿಎ ಸರಕಾರದ ಪಾಲಿಗೆ ಅತಿ ಮುಖ್ಯ ಸಂಗತಿಗಳು. ಈ ವರ್ಷದ ಆರ್ಥಿಕತೆಯ ಮುಖ್ಯ ಸವಾಲು ಇವೇ ಆಗಿರಲಿವೆ. ಈ ವರ್ಷ ಸಕಾರಾತ್ಮಕ ಅಭಿವೃದ್ಧಿ ಆಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications