Rain in Chikkamagaluru : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಮಳೆ

ಕಾಫಿನಾಡಿನ ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಬಿಸಿಲಝಳದಿಂದ ರೋಸಿಹೋಗಿದ್ದ ರೈತರು, ಜನರು ಇದೀಗ ಸಂತಸಗೊಂಡಿದ್ದಾರೆ.

ಚಿಕ್ಕಮಗಳೂರು, ಮಾರ್ಚ್‌, 16: ಬಿಸಿಲ ಝಳದಿಂದ ತತ್ತರಿಸಿದ ಕಾಫಿನಾಡಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಇಲ್ಲಿನ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಂಗಳವಾರ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಿತ್ತು. ಕಳಸ, ಹೊರನಾಡು, ಶೃಂಗೇರಿ ಹಾಗೂ ಬಾಳೆಹೊನ್ನೂರು ಸುತ್ತಮುತ್ತ ಮಳೆಯಾಗಿದ್ದು, ರೈತರು ಹಾಗೂ ಬಿಸಿಲಿನಿಂದ ಕಂಗೆಟ್ಟಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Continued rain in Chikkamagaluru district

ಕಡೂರು ಮತ್ತು ತರೀಕೆರೆ ಹಾಗೂ ಚಿಕ್ಕಮಗಳೂರು ಸುತ್ತ ಮುತ್ತಮೋಡ ಕವಿದ ವಾತವರಣ ನಿ ರ್ಮಾಣವಾಗಿತ್ತು. ಆದರೆ, ಮಳೆಯಾಗಿರಲಿಲ್ಲ. ಆದರೆ ಬುಧವಾರ ಜಿಲ್ಲೆಯ ಬಯಲುಸೀಮೆ ತಾಲೂಕು ಭಾಗದಲ್ಲಿ ಮಲೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ.

ಗುಡುಗು, ಸಿಡಿಲು ಸಹಿತ ಮಳೆ
ಕಡೂರು ತಾಲೂಕಿನ ಸುತ್ತಮುತ್ತ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಇನ್ನು ಚಿಕ್ಕಮಗಳೂರು ತಾಲೂಕಿನ ಸಖರಾಯ ಪಟ್ಟಣ, ಉದ್ದೇಬೋರನಹಳ್ಳಿ ಸುತ್ತಮುತ್ತ ಸಾಧರಣ ಮಳೆಯಾಗಿದೆ. ಮಳೆಯೊಂದಿಗೆ ಭಾರೀ ಪ್ರಮಾಣದಲ್ಲಿ ಗಾಳಿ ಬೀಸಿದ್ದು, ಹಾಗೆಯೇ ಚಿಕ್ಕಮಗಳೂರು ತಾಲೂಕು ಬೀಕನಹಳ್ಳಿ ಸಮೀಪ ಸಿಡಿಲು ಬಡಿದು ತೆಂಗಿನ ಮರದಲ್ಲಿ ಬೆಂಕಿ ಹತ್ತಿಕೊಂಡಿದೆ. ಹಾಗೆಯೇ ಜಿಲ್ಲೆಯಲ್ಲಿ ಇಂದು ಮಳೆ ಮುಂದುವರೆಯುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Continued rain in Chikkamagaluru district

ಮಳೆ ಮುಂದುವರೆಯುವ ಸಾಧ್ಯತೆ
ಹವಾಮಾನದಲ್ಲಿ ಉಂಟಾಗುತ್ತಿರುವ ಮಳೆ ಅಕಾಲಿಕ ಬದಲಾವಣೆಗಳು ತೀವ್ರ ಸ್ವರೂಪ ಪಡೆದುಕೊಳ್ಳಲಿವೆ. ಹೀಗಾಗಿ ಕರ್ನಾಟಕದ ವಿವಿಧೆಡೆ ಮುಂದಿನ 04 ದಿನ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ.

ಉತ್ತರ ಒಳನಾಡು ಸೇರಿದಂತೆ ಕರಾವಳಿ ಭಾಗದ ಸಮುದ್ರಮಟ್ಟದಿಂದ 1.5 ಕಿಲೋ ಮೀಟರ್ ಎತ್ತರದಲ್ಲಿ ಸುಳಿಗಾಳಿಯೊಂದು ಸೃಷ್ಟಿಯಾಗಿದೆ. ಇದರ ಪ್ರಭಾವ ಮುಂದಿನ ಮೂರು ದಿನ ಇರಲಿದೆ. ಈ ಕಾರಣಕ್ಕೆ ಇಂದಿನಿಂದ ಮುಂದಿನ ಮೂರು ದಿನ ಕೆಲವೆಡೆ ಹಾಗೂ ಹಲವು ಕಡೆಗಳಲ್ಲಿ ಮುಂದಿನ ಐದು ದಿನ (ಮಾ.18) ಸಾಧಾರಣವಾಗಿ ಮಳೆ ಆಗುವ ನಿರೀಕ್ಷೆಗಳು ದಟ್ಟವಾಗಿದೆ ಎಂದು ವಿಜ್ಞಾನಿ ಡಾ.ಪ್ರಸಾದ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+