ನ್ಯಾನೋ ತಂತ್ರಜ್ಞಾನ ಆಹಾರ ಸಮಸ್ಯೆಗೆ ಪರಿಹಾರ
ಬೆಂಗಳೂರು. ಮಾ.15: ಭಾರತದಲ್ಲಿ ಆಹಾರ ಭದ್ರತೆಗೆ ಪ್ರಾಮುಖ್ಯತೆ ನೀಡಬೇಕಿದ್ದು ನ್ಯಾನೋ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಭಾರತ ರತ್ನ ಪ್ರೊ. ಸಿ.ಎನ್. ಆರ್ ರಾವ್ ಅವರು ಸಲಹೆ ನೀಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 49ನೇ ಘಟಿಕೋತ್ಸವ ಮಾಥನಾಡಿದ ಅವರು, ಆಹಾರ, ನೀರು, ಜೀವಸಂಕುಲಕ್ಕೆ ಅತ್ಯವಶ್ಯಕವಾಗಿದ್ದು, ಕೃಷಿ ಸಂಶೋಧನಾ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವ ಮೂಲಕ ಇವುಗಳ ಭದ್ರತೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.[ನಾನು ಗುರಿ ಮುಟ್ಟಿದ್ದೇನೆ, ನೀವು? ಯುವಕರಿಗೆ ಕಲಾಂ ಪ್ರಶ್ನೆ]

ನ್ಯಾನೋ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಪ್ರಮುಖ ಸ್ಥಾನ ಪಡೆಯುತ್ತುದೆ. ಕೃಷಿ ಕ್ಷೇತ್ರಕ್ಕೆ ಸಸ್ಯ ಸಂಕುಲ ಒಂದು ಅದ್ಭುತ ಕೊಡುಗೆ . ಇದನ್ನೇ ಬಳಸಿಕೊಂಡು ಆಹಾರ ಸಮಸ್ಯೆ ನೀಗಿಸಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿ ಸಂಶೋಧನಾ ವಿದ್ಯಾರ್ಥಿಗಳು ತನ್ಮಯತೆ, ಏಕಾಗ್ರತೆಯಿಂದ ಅಧ್ಯಯನದಲ್ಲಿ ಪರಿರ್ಶರಮ ಪಟ್ಟರೆ ಯಶಸ್ಸು ಸಾಧ್ಯ ಎಂದು ಹೇಳಿದರು.[ವಿಜ್ಞಾನಿಗಳೆಂದರೆ ಹಾಗೇ, ಮಕ್ಕಳಷ್ಟೇ ಮುಗ್ಧರು!]
ಕೃಷಿ ವಿಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರದಲ್ಲಾಗಲಿ ಸಾಧನೆಯ ಫಲಿತಾಂಶ ತತ್‍ಕ್ಷಣ ದೊರಕದು.ತಾಳ್ಮೆ, ಸಂಯಮದಿಂದ ಕಾದಾಗ ಮಾತ್ರ ಪ್ರತಿಫಲ ದೊರಕುವುದು. ದೇಶ ಯುವಶಕ್ತಿಯ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದು, ಯುವ ಜನಾಂಗ ದೇಶಕ್ಕೆ ನಿರಾಸೆ ಮಾಡದಂತೆ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.[ಡಾ. ಸಿಎನ್ಆರ್ ರಾವ್ - ಕರ್ನಾಟಕ ವರ್ಷದ ವ್ಯಕ್ತಿ 2014]
ಘಟಿಕೋತ್ಸವದ ವೇಳೆ ರಾಜ್ಯಪಾಲ ವಜುಭಾಯಿವಾಲ ಅವರು 574 ಸ್ನಾತಕ, 204 ಸ್ನಾತಕೋತ್ತರ ಮತ್ತು 67 ಡಾಕ್ಟರಲ್ ಪದವಿ ಮತ್ತು 119 ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಿದರು. ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಹಾಜರಿದ್ದರು.












Click it and Unblock the Notifications