10 ಲಕ್ಷ ಟನ್ ಬೇಳೆ ಕಾಳುಗಳ ಆಮದಿಗೆ ಸರ್ಕಾರ ಚಿಂತನೆ, ಕಾರಣವೇನು?
ನವದೆಹಲಿ, ಜನವರಿ 12: ಭವಿಷ್ಯದಲ್ಲಿ ಕೊರತೆಯಾಗುವ ಭಯದಿಂದ ದೇಶೀಯ ಅವಶ್ಯಕತೆಗಳನ್ನು ಪೂರೈಸಲು ಖಾಸಗಿ ವ್ಯಾಪಾರದ ಮೂಲಕ ಈ ವರ್ಷ ಸುಮಾರು 10 ಲಕ್ಷ ಟನ್ ಹೆಚ್ಚಿನ ಗುಣಮಟ್ಟದ ತೊಗರಿ ಬೇಳೆಯನ್ನು ಆಮದು ಮಾಡಿಕೊಳ್ಳಲು ಮುಂಗಡ ಯೋಜನೆಯನ್ನು ಮಾಡಿದೆ ಎಂದು ಸರ್ಕಾರ ಗುರುವಾರ ಹೇಳಿದೆ.
ಕೃಷಿ ಸಚಿವಾಲಯದ ಆರಂಭಿಕ ಅಂದಾಜಿನ ಪ್ರಕಾರ ಖಾರಿಫ್ ಬೆಳೆಯಾದ ತೊಗರಿ ಬೇಳೆ ಉತ್ಪಾದನೆಯು 2022-23 ಬೆಳೆ ವರ್ಷದಲ್ಲಿ (ಜುಲೈ-ಜೂನ್) ಹಿಂದಿನ ವರ್ಷದಲ್ಲಿ 4.34 ಮಿಲಿಯನ್ ಟನ್‌ಗಳಿಂದ 3.89 ಮಿಲಿಯನ್ ಟನ್‌ಗಳಿಗೆ ಕಡಿಮೆಯಾಗಿದೆ ಎಂದು ಹೇಳಿದೆ.
ಗುಲ್ಬರ್ಗ ಪ್ರದೇಶಗಳಲ್ಲಿ (ಕರ್ನಾಟಕದಲ್ಲಿ) ಹವಾಮಾನ ಮತ್ತು ಬೆಳೆ ರೋಗದಿಂದಾಗಿ ತೊಗರಿ ಬೇಳೆ ಉತ್ಪಾದನೆಯಲ್ಲಿ ಕೊರತೆ ಉಂಟಾಗಬಹುದು. ಭವಿಷ್ಯದಲ್ಲಿ ಉಂಟಾಗಬಹುದಾದ ಕೊರತೆಯನ್ನು ಆಮದು ಮೂಲಕ ಪೂರೈಸಲು ಯೋಜನೆಯನ್ನು ಮಾಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇಶೀಯವಾಗಿ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ (ಡಿಸೆಂಬರ್-ನವೆಂಬರ್) ದೇಶವು ಸುಮಾರು 10 ಲಕ್ಷ ಟನ್ ತೊಗರಿ ಬೇಳೆಯನ್ನು ಆಮದು ಮಾಡಿಕೊಳ್ಳಬೇಕಾಗಿದೆ. 2021-22ರಲ್ಲಿ ಸುಮಾರು 7.6 ಲಕ್ಷ ಟನ್ ಟರ್ ಆಮದು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಸಂಬಂಧ ಸರ್ಕಾರವು ಮುಂಗಡ ಯೋಜನೆಯನ್ನು ರೂಪಿಸಿದ್ದು, ಈಗಾಗಲೇ ತೊಗರಿ ಬೇಳೆ ಆಮದುಗಾಗಿ ಖಾಸಗಿ ವ್ಯಾಪಾರಿಗಳೊಂದಿಗೆ ಚರ್ಚಿಸಲಾಗಿದೆ. ಅದರಂತೆ 2022ರ ಡಿಸೆಂಬರ್‌ನಲ್ಲಿ ಸುಮಾರು 2 ಲಕ್ಷ ಟನ್‌ಗಳಷ್ಟು ತೊಗರಿ ಬೇಳೆಯನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಹೇಳಿದರು.
ತೊಗರಿ ಬೇಳೆಯನ್ನು ಪೂರ್ವ ಆಫ್ರಿಕಾದ ದೇಶಗಳಿಂದ ಮತ್ತು ಕೆಲವೊಂದಷ್ಟನ್ನು ಮ್ಯಾನ್ಮಾರ್‌ನಿಂದ ಗರಿಷ್ಠವಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಈ ದೇಶಗಳಲ್ಲಿ ಸುಮಾರು 11-12 ಲಕ್ಷ ಟನ್‌ಗಳಷ್ಟು ತೊಗರಿ ಸಿಗುವುದಾಗಿ ಅಂದಾಜಿಸಿರುವುದರಿಂದ ಭಾರತವು ಅಗತ್ಯ ಪ್ರಮಾಣದ ತೊಗರಿಯನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಬೇಳೆಕಾಳುಗಳ ಸುಗಮ ಆಮದಿಗೆ ಅನುಕೂಲವಾಗುವಂತೆ ಫ್ಯೂಮಿಗೇಶನ್ ಮತ್ತು ಫೈಟೊಸಾನಿಟರಿ ಮಾನದಂಡಗಳನ್ನು ಪುರೈಸಲು ಸರ್ಕಾರವು ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ 2024ರ ಮಾರ್ಚ್ 31 ರವರೆಗೆ ಬೇಳೆ ಕಾಳುಗಳ ಆಮದನ್ನು ಮುಕ್ತ ಸಾಮಾನ್ಯ ಪರವಾನಗಿ ಅಡಿಯಲ್ಲಿ ತರಲಾಗಿದೆ. ರುಳ್ಳಿಯ ವಿಷಯದಲ್ಲಿ ಪ್ರಸ್ತುತ ಬೆಲೆಗಳನ್ನು ಸ್ಥಿರವಾಗಿ ನಿರ್ವಹಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಅದರ ಶೇಖರಣೆಗಾಗಿ ಸರ್ಕಾರವು ರಬಿ ಬೆಳೆಯಿಂದ ಈರುಳ್ಳಿಯನ್ನು ಸಂಗ್ರಹಿಸುತ್ತದೆ ಎಂದು ಕಾರ್ಯದರ್ಶಿ ಹೇಳಿದರು.












Click it and Unblock the Notifications