ಭತ್ತಕ್ಕೆ 200 ರೂ. ಕನಿಷ್ಠ ಬೆಂಬಲ ಬೆಲೆ: ಕೇಂದ್ರ ಸಂಪುಟ ಅನುಮೋದನೆ
ನವದೆಹಲಿ, ಜುಲೈ 4: ಭತ್ತಕ್ಕೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಕ್ವಿಂಟಲ್‌ಗೆ 200 ರೂ.ನಷ್ಟು ಹೆಚ್ಚಿಸಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಈ ನಿರ್ಧಾರ ಕೈಗೊಂಡಿದೆ.
ರೈತರಿಗೆ ತಮ್ಮ ಉತ್ಪಾದನೆಯ ವೆಚ್ಚಕ್ಕಿಂತ ಶೇ 50ಕ್ಕಿಂತ ಹೆಚ್ಚು ದರ ನೀಡುವ ಚುನಾವಣಾ ಪೂರ್ವ ಭರವಸೆಯನ್ನು ಈಗ ಈಡೇರಿಸುವತ್ತ ಕೇಂದ್ರ ಸರ್ಕಾರ ಮುಂದಾಗಿದೆ.
ರೈತರ ಕೃಷಿ ಉತ್ಪನ್ನಗಳಿಗೆ ಅದಕ್ಕೆ ತಗಲುವ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಿನ ದರವನ್ನು ನೀಡುವುದಾಗಿ 2014ರಲ್ಲಿ ಬಿಜೆಪಿ ಭರವಸೆ ನೀಡಿತ್ತು.

ಈ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು ಈ ವರ್ಷದ ಫೆಬ್ರುವರಿ 1ರಂದು ಮಂಡಿಸಿದ ಕೊನೆಯ ವಾರ್ಷಿಕ ಬಜೆಟ್‌ನಲ್ಲಿ ಚಾಲನೆ ನೀಡುವ ಪ್ರಯತ್ನಕ್ಕೆ ಮುಂದಾಗಿತ್ತು.
ಭತ್ತ ಸೇರಿದಂತೆ 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸುವ ಕುರಿತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಾಮಾನ್ಯ ದರ್ಜೆಯ ಭತ್ತದ ದರವು 200 ರೂ.ನಷ್ಟು ಹೆಚ್ಚಳವಾಗಿದ್ದು, ಕ್ವಿಂಟಲ್‌ಗೆ 1,750 ಲಭ್ಯವಾಗಲಿದೆ. ಹಾಗೆಯೇ 'ಎ' ದರ್ಜೆಯ ಭತ್ತದ ಕನಿಷ್ಠ ಬೆಲೆಯನ್ನು 160 ರೂ.ಗೆ ಏರಿಸಲಾಗಿದ್ದು, ರೈತರಿಗೆ ಕ್ವಿಂಟಲ್‌ಗೆ 1,750 ರೂ. ಸಿಗಲಿದೆ.
ಮಧ್ಯಮ ಗಾತ್ರದ ಹತ್ತಿಯ ಕನಿಷ್ಠ ಬೆಂಬಲ ಬೆಲೆಯು ಕ್ವಿಂಟಲ್‌ಗೆ 4,020 ರೂ.ನಿಂದ 5,150 ರೂ.ಗೆ ಹೆಚ್ಚಳವಾಗಿದೆ. ಉದ್ದದ ಗಾತ್ರದ ಹತ್ತಿಯ ಎಂಎಸ್‌ಪಿ 4,320 ರೂ.ನಿಂದ 5,450 ರೂ.ಗೆ ಏರಿಕೆಯಾಗಿದೆ.
ಧಾನ್ಯಗಳ ಎಂಎಸ್‌ಪಿಯಲ್ಲಿಯೂ ಹೆಚ್ಚಳ ಮಾಡಲಾಗಿದೆ. ತೊಗರಿಬೇಳೆಯು ಕ್ವಿಂಟಲ್‌ಗೆ 5,450 ರೂ. ನಿಂದ 5,675 ರೂಪಾಯಿಗೆ ಹೆಚ್ಚಳವಾಗಿದೆ. ಕನಿಷ್ಠ ಬೆಂಬಲ ಬೆಲೆಯ ನೆರವಿನಿಂದ ಹೆಸರು ಬೇಳೆ ಕ್ವಿಂಟಲ್‌ಗೆ 5,757 ರೂಪಾಯಿಯಿಂದ 6,975ಗೆ ಏರಿಕೆಯಾಗಿದೆ. ಕ್ವಿಂಟಲ್‌ಗೆ 5,400 ರೂ.ನಷ್ಟಿದ್ದ ಉದ್ದಿನ ಬೇಳೆ ದರ 5600 ರೂ.ಗೆ ತಲುಪಲಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications