ಚಿಲ್ಲರೆ ಮಾರುಕಟ್ಟೆ ಬಂದ್ ಗೆ ಭರ್ಜರಿ ಓಪನಿಂಗ್

After Parl shut down;5 crore traders shut down market in Ind
ಬೆಂಗಳೂರು, ಡಿ.1: ಚಿಲ್ಲರೆ ಮಾರಾಟ ವಲಯದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ವಿರೋಧ ವ್ಯಕ್ತಪಡಿಸಿ ವರ್ತಕರು ನಡೆಸುತ್ತಿರುವ ಭಾರತ್ ಬಂದ್ ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.

ಕರ್ನಾಟಕದಲ್ಲೂ ಎಫ್ ಡಿಐ ಬಿಸಿ ತಟ್ಟಿದ್ದು, ರಾಜ್ಯದ ಹಲವೆಡೆ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ರೀಟೈಲ್ ಕ್ಷೇತ್ರವನ್ನು ಡಿ.1ರಂದು ಬಂದ್ ಮಾಡಲಾಗಿದೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹೇಳಿದೆ.

ಎಫ್ ಕೆಸಿಸಿಐ ಕರೆ ನೀಡಿರುವ ಬಂದ್ ಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದು, ಚಿಕ್ಕಪೇಟೆ, ಅಕ್ಕಿಪೇಟೆ, ಕಾಟನ್ ಪೇಟೆ ಅಲ್ಲದೆ ಬ್ರಿಗೇಡ್ ರಸ್ತೆಗಳ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.

ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಕಮರ್ಷಿಯಲ್ ಸ್ಟ್ರೀಟ್ ಬಿಕೋ ಎನ್ನುತ್ತಿದೆ. ಚಿಕ್ಕಪೇಟೆಯಲ್ಲಿ ಟ್ರೇಡ್ ಯೂನಿಯನ್ ಗಳು ಪ್ರತಿಭಟನೆ ನಡೆಸುತ್ತಿದ್ದು, ಬಿಜೆಪಿ ಕಾರ್ಯಕರ್ತರ ಬೆಂಬಲದೊಂದಿಗೆ ವಿವಿಧೆಡೆ ಮೆರವಣಿಗೆ ನಡೆಸಲಾಗುತ್ತಿದೆ.

ಕೋಲಾರದಲ್ಲೂ ಪ್ರತಿಭಟನೆ: ಕೋಲಾರದಲ್ಲಿ ಬೆಂಗಳೂರು ಕೋಲಾರ ಪುಷ್ ಪುಲ್ ರೈಲು ತಡೆದು ಪ್ರತಿಭಟನೆ ನಡೆಸಲಾಗಿದೆ. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನೇತೃತ್ವದಲ್ಲಿ ಮಡಿಕೇರಿಯಲ್ಲಿ ವರ್ತಕರು ಬಂದ್ ಆಚರಿಸುತ್ತಿದ್ದಾರೆ.

ಬಹು ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ (MBRT) ಶೇ. 51ರಷ್ಟು ಎಫ್‌ಡಿಐ ಆಕರ್ಷಿಸುವ ಯುಪಿಎ ಸರ್ಕಾರದ ಹೊಸ ನೀತಿ ವಿರುದ್ಧ ವರ್ತಕರು ಸಿಡಿದೆದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+