ಕರೆದರೂ ಸಾಲಮನ್ನಾ ಕುರಿತ ಸಭೆಗೆ ಹೋಗಲಿಲ್ಲ ಯಡಿಯೂರಪ್ಪ

Recommended Video

      ಎಚ್ ಡಿ ಕೆ ನೇತೃತ್ವದಲ್ಲಿ ನಡೆದ ರೈತರ ಸಾಲ ಮನ್ನಾ ಕುರಿತ ಸಭೆಗೆ ಬಿ ಎಸ್ ವೈ ಗೈರು | Oneindia Kannada

      ಬೆಂಗಳೂರು, ಮೇ 30: ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಾಲಮನ್ನಾ ಕುರಿತ ಮಹತ್ವದ ಸಭೆಗೆ ವಿರೋಧಪಕ್ಷ ನಾಯಕ ಯಡಿಯೂರಪ್ಪ ಅವರಿಗೆ ಆಹ್ವಾನ ಇದ್ದರೂ ಸಹಿತ ಅವರು ಗೈರಾದರು.

      ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಮಂಗಳೂರು ಪ್ರವಾಸಕ್ಕೆ ತೆರಳುತ್ತಿರುವ ಕಾರಣ ಬಿಜೆಪಿಯ ಹಿರಿಯ ನಾಯಕ ಗೋವಿಂದ ಕಾರಜೋಳ ಅವರನ್ನು ಸಭೆಗೆ ಕಳುಹಿಸಲಾಗಿತ್ತು ಆದರೆ ಯಡಿಯೂರಪ್ಪ ಅವರು ಮಧ್ಯಾಹ್ನ 3 ಗಂಟೆ ವರೆಗೂ ಬೆಂಗಳೂರಲ್ಲೇ ಇದ್ದರು.

      ಬೆಂಗಳೂರಿನಲ್ಲೇ ಇದ್ದರೂ ಸಹಿತ ಯಡಿಯೂರಪ್ಪ ಅವರು ರೈತ ಸಾಲಮನ್ನಾದ ಕುರಿತ ಅತ್ಯಂತ ಮಹತ್ವದ ಸಭೆಗೆ ಗೈರಾಗಿರುವುದು ಅವರ ಬದ್ಧತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

      BS Yeddyurappa absent to farmer loan waive off meeting

      ಸಾಲಮನ್ನಾ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಯಡಿಯೂರಪ್ಪ ಅವರೇ ಈಗ ಸರ್ಕಾರ ಕರೆದರೂ ಸಭೆಯಲ್ಲಿ ಭಾಗವಹಿಸದೇ ಇರುವುದು ಹೋರಾಟದ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

      ಈ ಬಗ್ಗೆ ಕುಮಾರಸ್ವಾಮಿ ಅವರು ಕೂಡ ಪ್ರತಿಕ್ರಿಯಿಸಿದ್ದು, ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಸಭೆಗೆ ಬರುತ್ತಿದ್ದರು, ಅವರ ಬದಲು ಗೋವಿಂದ ಕಾರಜೋಳ ಅವರನ್ನು ಕಳಿಹಿಸುತ್ತಿರಲಿಲ್ಲ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+